ಪುಟ:Yugaantara - Gokaak.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು 4 ರೋಹಿಣಿದೇವಿ : ಈಗ ಮಧ್ಯವರ್ತಿ ಅಸೆಂಬ್ಲಿಯ ಚುನಾವಣೆ ಬಂದಿದೆಯಲ್ಲ. ಅದಕ್ಕೆ ಕಾಂತಿಚಂದ್ರರು ನಿಲ್ಲಬೇಕೆಂದಿದ್ದಾರೆ. ತಾವು ಅವರ ಹಾದಿಯಲ್ಲಿ ಬರಬಾರದು. ಬನಸಿಲಾಲ : ಅಂದರೆ ? ರೋಹಿಣಿದೇವಿ: ತಮ್ಮ ಪ್ರತಿಸ್ಪರ್ಧಿಗಳಾಗಿ ನಿಲ್ಲುವ ಮನಸ್ಸಿಲ್ಲ ಇವರಿಗೆ. ಇಬ್ಬರೂ ಕಾಂಗ್ರೆಸ್ಸಿನ ವತಿಯಿಂದ ನಿಲ್ಲುವದಾದರೆ ಪಾರ್ಲಿಮೆಂಟರಿ ಬೋರ್ಡು ತಮ್ಮನೇ ಆರಿಸುವದು, ಆದರೆ ಕಾಂತಿಚಂದ್ರರು ಈ ಸಲ ನಿಲ್ಲುವದು ಅವಶ್ಯವಿದೆ. ಬನಸಿಲಾಲ : ಈಗ ರೋಗಿ ಹಾಸಿಗೆಯಿಂದೆದ್ದಿದ್ದಾರೆ. ಪಾಪ! ಅವರಿಗೇಕೆ ತೊಂದರೆ ಪಡಿಸುತ್ತೀರಿ ? ಲೋಹಿಣಿದೇವಿ : ಇದು ಆಯಾಸದ ಇಲ್ಲವೆ ಸಾಂಕ್ರಾಮಿಕ ರೋಗವಲ್ಲ, ಬನಸಿ ಲಾಲಜಿ ! ಅದು ಹೃದ್ರೋಗ, ಅವರು ದಿಲ್ಲಿಗೆ ಬಂದಿದ್ದು ಒಂದು ಉದ್ದೇಶ ದಿಂದ. ಆದರೆ ಇಲ್ಲಿ ಆಗಿದ್ದು ಇನ್ನೊಂದು. ನಿಮ್ಮನ್ನು ಒಬ್ಬರೊಬ್ಬರ ಹಾದಿಯಲ್ಲಿ ವಿಧಿ ತಂದು ನಿಲ್ಲಿಸಿತು. ಹಿಂದಾದುದನ್ನು ಉದಾರ ಹೃದಯ ದಿಂದ ಮರೆತುಬಿಡಿರಿ, ಈ ಅಸೆಂಬ್ಲಿಯೊಂದರಲ್ಲಿ ಕಾಂತಿಚಂದ್ರರು ಭಾಗ ವಹಿಸಬೇಕೆಂದಿದ್ದಾರೆ. ಆಮೇಲೆ ಯಾವ ವಿಷಯದಲ್ಲಿಯೂ ಅವರು ಮನಸ್ಸು ಹಾಕುವದಿಲ್ಲ, [ ಬನಸಿಲಾಲನು ಕುಳಿತಲ್ಲಿಂದ ಎದ್ದು ಕೋಣೆಯಲ್ಲಿ ಅತ್ತಿಂದಿತ್ತ ತಿರುಗಾಡುತ್ತಾನೆ.] ಬನಸಿಲಾಲ : ರೋಹಿಣಿದೇವಿಯವರೆ, ನಾನು ತಮ್ಮಲ್ಲಿ ಒಂದು ವಿಷಯ ವನ್ನು ಪ್ರಸ್ತಾಪಿಸಬಹುದೆ ? ಕಾಂತಿಚಂದ್ರ : ರೋಹಿಣಿ, ಇನ್ನು ಏಳು, ಹೋಗೋಣ, ಏನು ಉತ್ತರ ಬರುವದೆಂಬುದು ನನಗೆ ಗೊತ್ತಿದೆ. ರೋಹಿಣಿದೇವಿ : ಅವಸರ ಬೇಡ. ಕುಳಿತುಕೊಳ್ಳಿರಿ. (ಬನಸಿಲಾಲನೆಡೆಗೆ ತಿರುಗಿ) ಬನಸಿಲಾಲಜಿ, ಅವಶ್ಯವಾಗಿ ಪ್ರಸ್ತಾಪಿಸಬಹುದು.