ಪುಟ:Yugaantara - Gokaak.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ , 4t 1 k 10 0 0 0 ಬನಸಿಲಾಲ : ಕೆಲವು ತಿಂಗಳ ಹಿಂದೆ ಅನಾಥಾಶ್ರಮದ ಅಧ್ಯಕ್ಷಸ್ಥಾನದ ಬಗ್ಗೆ............. ರೋಹಿಣಿದೇವಿ : ಹಿಂದಿನದನ್ನೆಲ್ಲ ಮರೆತುಬಿಡಿರೆಂದು ನಾನು ಪ್ರಾರ್ಥಿಸಿದ್ದೇ ನಲ್ಲ, ಬನಸಿಲಾಲಜಿ ! ಆ ಅಧ್ಯಕ್ಷಸ್ಥಾನಕ್ಕೆ ಕಾಂತಿಚಂದ್ರರು ರಾಜಿನಾಮೆ ಸಹ ಕೊಟ್ಟಿದ್ದಾರೆ, ಬನಸಿಲಾಲ : ಇಂಥ ಮರವಿಗೂ ಮೇರೆಯಿದೆ, ರೋಹಿಣಿದೇವಿಯವರೆ ! ನೀವಿಬ್ಬರೂ ಆಗ ಅಪಮಾನಗೊಳಿಸಿ ನನ್ನನ್ನು ಹೊರಗೆ ಹಾಕಿದಿರಿ. ಆದೊಂದು ಸಂದರ್ಭವನ್ನು ಬಿಟ್ಟರೆ ನಾನು ಯಾವ ಪ್ರತಿಸ್ಪರ್ಧಿಯ ಮನೆಗೂ ಈ ಜನ್ಮದಲ್ಲಿ ಕಾಲಿಕ್ಕಿಲ್ಲ. ಆ ಅಪಮಾನ ನನ್ನ ಹೃದಯದಲ್ಲಿ ಕುದಿಯುವ ಕಬ್ಬಿಣದಂತೆ ಹೊಯ್ದಾಡುತ್ತದೆ. ಕಾಂತಿಚಂದ್ರರಂತೆ ನಾನೂ ಮನುಷ್ಯ, ರೋಹಿಣಿದೇವಿಯವರೆ ! ಅಂತರವಿಷ್ಟೆ; ಝಳತಾಕಲು ಕಾಂತಿ ಚಂದ್ರರು ಒಣಗುತ್ತಾರೆ; ನಾನು ಕುದಿಯುತ್ತೇನೆ. ಕಾಂತಿಚಂದ್ರ : ( ಏಳು ) ಇಷ್ಟು ಅಪಮಾನ ಸಾಕಲ್ಲ, ರೋಹಿಣಿ ? ನಡೆ ಇನ್ನು ಹೊಗೋಣ. ರೋಹಿಣಿದೇವಿ : ( ದೀನಳಾಗಿ, ಇದೊಂದು ಮಾತನ್ನು ನಡೆಯಿಸಿಕೊಡಿರಿ. ಬನಸಿಲಾಲಜಿ ! ದೇಶದ ಸಂಧಿಕಾಲದಲ್ಲಿ ಸೇವೆ ಮಾಡಲು ಕಾಂತಿಚಂದ್ರರಿಗೆ ಇದೊಂದು ಅವಕಾಶವನ್ನು ಕೊಡಿರಿ. ಬನಸಿಲಾಲ: ಇದೊಂದು ಬಿಟ್ಟು ಮತ್ತೇನನ್ನಾದರೂ ತಾವು ಕೇಳಬಹುದು. ಎಂದು ಘಟನಾ ಸಮಿತಿಗಾಗಿ ಚುನಾವಣೆಯಾಗುವದೆಂದು ಸರಕಾರ ಸಾರಿತೋ ಅಂದಿನಿಂದ ನಾನು ಇದರಲ್ಲಿ ಮನಸ್ಸು ಹಾಕಿದ್ದೇನೆ. ಬೇಕಾದರೆ ಕಾಂತಿಚಂದ್ರರೂ ಪಾರ್ಲಿಮೆಂಟರಿ ಬೋರ್ಡಿಗೆ ಅರ್ಜಿ ಕೊಡಲಿ, ಅವರು ಬೇಕಾದವರನ್ನು ಆರಿಸುತ್ತಾರೆ, ಆದರೆ ಬೋರ್ಡಿನವರು ಕಾಂತಿಚಂದ್ರ ರನ್ನು ಆರಿಸಿದರೆ ನಾನು ಸ್ವತಂತ್ರವಾಗಿ ಚುನಾವಣೆಗೆ ನಿಂತು ಅವರನ್ನು ಸೋಲಿಸುತ್ತೇನೆ. ಒಟ್ಟು ಈ ಚುನಾವಣೆಯಲ್ಲಿ ನನ್ನ ಶತ್ರು, ಸಾಮ್ರಾಜ್ಯ ಸರಕಾರವಲ್ಲ; ಕಾಂತಿಚಂದ್ರರು. ತಾವು ಹೆಣ್ಣು ಮಕ್ಕಳು, ವಂದನಾರ್ಹರು.