ಪುಟ:Yugaantara - Gokaak.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು 4 ತಮ್ಮೆದುರು ನಾನು ಹೀಗೆ ಮಾತಾಡಬಾರದು. ಆದರೆ.... ನನ್ನ ಮಾತು ಕೇಳಿದರೆ....ತಾವೂ ಈ ವಿಷಯದಲ್ಲಿ ಬೀಳಬಾರದಾಗಿತ್ತು. ರೋಹಿಣಿದೇವಿ: ( ಎದ್ದು ನಿಲ್ಲುತ್ತ ) ಕ್ಷಮಿಸಿ, ಸೇಠಜಿ ! ನಾನು ಇಲ್ಲಿ ಬರ ಬಾರದಾಗಿತ್ತು. ಇದು ದೇಶಭಕ್ತರ ಮನೆಯಲ್ಲ; ಕಟುಕರ ಮನೆ, ಕಾಂತಿ ಚಂದ್ರ, ನಡೆಯಿರಿ. ಇನ್ನು ಹೋಗೋಣ. ಕಾಂತಿಚಂದ್ರ : ( ಎದ್ದು ನಡೆಯುತ್ತ ) ನಮಸ್ಕಾರ. ಬನಸಿಲಾಲ ; ! ! ನಮಸ್ಕಾರ. [ ಹೋಗುತ್ತಿರುವ ಕಾಂತಿಚಂದ್ರ-ರೋಹಿಣಿದೇವಿಯವರನ್ನೇ ವಿಜಯೋತ್ಸಾಹದಿಂದ ನೋಡುತ್ತ ನಿಲ್ಲುತ್ತಾನೆ. 1 [ ತೆರೆ. |