ಪುಟ:Yugaantara - Gokaak.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಡಬೇಡ.ತಂದೆ ಚಿಂತಿಸಿ ಚಿಂತಿಸಿ ತೀರಿಕೊಂಡ. ತಾಯಿ ಮಲಗಿ ಕೊಂಡಲ್ಲಿಯೇ ನಡೆದು ಹೋದಳು. ಆದರೆ ಮಾನವ ಕುಲದ ಸಂಸ್ಕೃತಿಯ ಶಾಶ್ವತ ಭಾಗವಾಗಿ ಉಳಿದಿದೆ ಅವರ ತ್ಯಾಗ, ಮೃಣಾಲಿನಿ, ಆ ತ್ಯಾಗವೇ ದೇವರು. ಮೃಣಾಲಿನಿ : ಮುಂದೆ, ದೇವರ ವಿಷಯ ಹಾಗಿರಲಿ, ನಿನ್ನ ಕಥೆ ಕೇಳಲು ಆತುರಳಾಗಿದ್ದೇನೆ. ಕೋಸಲೇಂದ್ರ : ಮುಂದೆ ದೂರದ ಆಸ್ಕರು ನನ್ನನ್ನು ದಿಲ್ಲಿಗೆ ಕರೆದೊಯ್ದರು. ಅಲ್ಲಿ ಸಾಲೆಗೆ ಹೋದೆ. ಕಾಲೇಜಿನಲ್ಲಿಯೂ ಒಂದೆರಡು ವರುಷ ಕಳೆದೆ. ನನಗೆ ಬೇಕಾದ ಗ್ರಂಥಗಳನ್ನೋದಿಕೊಂಡೆ, ಕಲೋಪಾಸನೆಯೇ ನನ್ನು ಜೀವಿತದ ಕಾರ್ಯವೆಂದು ಮನದಟ್ಟಾಯಿತು. ದಿಲ್ಲಿಯಲ್ಲಿಯ ಕೃತ್ರಿಮತೆ, ಸಾಮ್ರಾಜ್ಯ-ಮದ, ವಿರಸ, ಅನ್ಯಾಯ ಇವುಗಳನ್ನೆಲ್ಲ ನೆನೆದಾಗ ನನಗೆ ದಿಲ್ಲಿ ಯಲ್ಲಿ ಉಸಿರು ಕಟ್ಟಿದಂತಾಗುತ್ತಿತ್ತು. ಆಗ ನನ್ನನ್ನು ಉಳಿಸಿದ ಶಕ್ತಿಯು ಯಾವುದು ಬಲ್ಲೆಯಾ ? ಮೃಣಾಲಿನಿ: ಯಾವುದು ಆ ಶಕ್ತಿ ? ಕೋಸಲೇಂದ್ರ : ನಿಸರ್ಗ, ಅದರ ರಮಣೀಯತೆ, ಸೂರ್ಯಚಂದ್ರರ ನನ್ನನ್ನು ಉಳಿಸಿದರು. ಈ ನರ್ಮದೆಯ ತೀರದಲ್ಲಿ ನನ್ನನ್ನು ಕುಣಿದಾಡಿಸಿದ ದೃಶ್ಯಗಳೆಲ್ಲ ದಿಲ್ಲಿಯಲ್ಲಿ ಮಂಕು ಕವಿದ ನನ್ನ ಮನಸ್ಸನ್ನು ರಮಿಸಿದವು. ಇತಿಹಾಸದ ವಿಕಟ ಚೇಷ್ಟೆಗಳೆಲ್ಲ ವಿಕೃತವಾಗಿಸಿದ ದಿಲ್ಲಿಯಲ್ಲಿ ಅವು ಪೂರ್ಣತೆಯನ್ನು ನನಗೆ ತಂದು ಕೊಟ್ಟವು. ಮೃಣಾಲಿನಿ, ಅಲ್ಲಿ ಸೂರ್ಯನು ಹೇಗೆ ಉದಯಿಸುವನು ನೋಡು, ಸೃಷ್ಟಿಯ ಮೊದಲನೆಯ ದಿನ ಉದಯಿಸಿ ವಂತೆ, ಈ ತರಂಗಗಳು ಹೇಗೆ ಶಾಂತವಾಗಿ ಸಾಗಿವೆ ನೋಡು, ಸಮತೆ ಯನ್ನರಿತು ಆಚರಿಸುವ ಮಾನವರಂತೆ. ಅಲ್ಲಿ ಹಕ್ಕಿ ಮುಗಿಲಲ್ಲಿ ಹೇಗೆ ತೂರಾಡುತ್ತವೆ ನೋಡು, ದೇವನ ರಮ್ಯ ಕಲ್ಪನೆಗಳಂತೆ, ಅವುಗಳ ಗರಿ ಗಳನ್ನು ರವಿಕಿರಣಗಳು ಹೇಗೆ ಬಣ್ಣ ಬಣ್ಣವಾಗಿಸಿವೆ ನೋಡು, ಬರಲಿರುವ ಸಂಸ್ಕೃತಿಯಂತೆ ! ಮೃಣಾಲಿನಿ, ರಕ್ತಪಾತದಿಂದ ತೊಯ್ದು ಬಸಿಯುತ್ತಿ ರುವ ಈ ಧರಿಣಿಯಲ್ಲಿ ಇಂದಿಗೂ ಒಂದು ಹೂವು, ಒಂದು ಪಾರಿವಾಳದಲ್ಲಿ