ಪುಟ:Yugaantara - Gokaak.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂತು 4 ಕೋಸಲೇಂದ್ರ : ( ನಕ್ಕು ) ಅಡವಿಯಲ್ಲಿ ಬಂದು ನಿಂತು ಹಾವು, ಹುಲಿ ಎಂದರೆ ಹೇಗೆ ರುಕ್ಷ್ಮಿಣಿದೇವಿಯವರೆ ? ಸಮಾಜದಲ್ಲಿದ್ದರೆ ಎರಡು ಕಾಲಿನ ಹುಲಿ ತೊಂದರೆ ಕೊಡುತ್ತವೆ. ಅದಿರಲಿ, ನಿಮ್ಮ ಮುಂದಿನ ಅನುಕ್ರನು ಏನು, ಕಿಶನ್ ಕಿಶೋರಜಿ ? -ಶಕ್ಕಿಶೋರ : ( ಬೇಸರದ ದನಿಯಲ್ಲಿ ) ಈಗಂತೂ ದಿಲ್ಲಿಗೆ ಹೋಗುವದು. ಮುಂದಿನ ಮಾತು ಮುಂದೆ. ಜಗತ್ತಿನ ಯಾವ ಮೂಲೆಗೆ ಹೋದರೂ ಶಾಂತಿ-ಸುಖದಿಂದ ಜೀವಿಸುವುದು ಕಠಿಣವೆಂದು ನನಗೆ ತೋರುತ್ತದೆ. ಭಾರತದಲ್ಲಿ ಅರ್ಧಪಾತದ ನರಕ, ಒಟ್ಟು ಮೂಡಣದಲ್ಲಿಯೇ ದಾಸ್ಯದ ಹೀನತೆ. ಇಂಗ್ಲೆಂಡಿನಲ್ಲಿ ಸಾಯದ ಸಾಮ್ರಾಜ್ಯ - ಮದ, ಒಟ್ಟಾರೆ ಪಡುವಣ ದಲ್ಲಿಯೇ ವರ್ಣದ್ವೇಷ, ರಶ್ಯಾದಲ್ಲಿ ನಾಗರಿಕ ಸ್ವಾತಂತ್ರ್ಯದ ಅಭಾವ. ಹೀಗಾಗಿ ಎಲ್ಲಿ ಹೋಗಬೇಕೋ ತಿಳಿಯದಾಗಿದೆ. ಕೋಸಲೇಂದ್ರ : ಈ ವಿಷಯದಲ್ಲಿ ನನ್ನ ದೊಂದು ಸೂಚನೆಯಿದೆ, ಶನ್ ಕಿಶೋರಜಿ, ಆಶನ್ ಕಿಶೋರ : ಅದೇನು ಅಗತ್ಯವಾಗಿ ಹೇಳು, ಹೊಸ ಪೀಳಿಗೆಗೆ ಮಾತ್ರ ಈ ಒಗಟ ಒಡೆದೀತು. ಕೋಸಲೇಂದ್ರ: ನಾವೇ ಕೊಸರಿಕೊಂಡು ಏಳದ ಹೊರತು ಅಪೂರ್ಣತೆ ಗಳು ನಮ್ಮನ್ನು ಬಿಡುವದಿಲ್ಲ. ಭಾರತ ನಮ್ಮ ದೇಶ, ಬದುಕಿದರೆ ಇಲ್ಲಿಯೆ ನಾವು ಬದುಕಬೇಕು. ಎಲ್ಲ ಸಂಗ್ರಾಮಗಳನ್ನು ಎದುರಿಸಲು ತರುಣರು ನಾವು ಸಿದ್ದರಾಗಿದ್ದೇವೆ. ದಿಲ್ಲಿಯಲ್ಲಿ ನಾನಿನ್ನು ಮನೆ ಮಾಡುತ್ತೇನೆ. ಎಲ್ಲ ಬನಸಿ ಲಾಲರ ಮೇಲೆ ಯುದ್ಧ ಸಾರುತ್ತೇನೆ. ಈ ಸಮಸ್ಯೆಗಳನ್ನು ನನಗೆ ಬಿಟ್ಟು ನೀವು ಸುಖವಾಗಿ ನನ್ನ ಮನೆಯಲ್ಲಿ ಇದ್ದು ಬಿಡಿರಿ, ಆಧ್ಯಾತ್ಮವು ಇಲ್ಲಿಯ ವರೆಗೆ ನಾಡನ್ನೇ ಹಾಳು ಮಾಡುವ ಬ್ರಹ್ಮರಾಕ್ಷಸವಾಗಿತ್ತು. ಈಗ ಸಂಶೋ ಧನ-ಕಾರ್ಯವೆಂದೆನಿಸಿ ಅದೊಂದು ಮಾನವ ಪ್ರಗತಿಯ ಸುಚಿನ ವಾಗಿದೆ. ಅರವಿಂದರ ಆಶ್ರಮ, ರುಮಣಮಹರ್ಷಿಗಳ ನಿವಾಸ, ಹಿಮಾಲಯದ ತಪೋವನ, ಇವೆಲ್ಲ ಈ ಸಂಶೋಧನದ ಪ್ರಯೋಗಶಾಲೆಗಳಾಗಿವೆ. ನ್ಯಾನದ ಹಾದಿಯಲ್ಲಿ ಮುಂದುವರಿಯಬೇಕೆಂದಾಗ, ಅಲ್ಲಿಗೆ ನೀವು ಹೋಗಬಹುದಲ್ಲ.