ಪುಟ:Yugaantara - Gokaak.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕಿಶನ್ ಕಿಶೋರ : ( ಹರುಷದಿಂದ ) ಇದೊಂದು ಒಳ್ಳೆಯ ಸೂಚನೆ, ಕೋಸ ಲೇಂದ್ರ. ಮಕ್ಕಳಿಲ್ಲದೆ ನಾನು ನಿರ್ಗತಿಕನಾಗಿದ್ದೆ. ನೀನು ಮಗನಂತೆ ಎಲ್ಲ ವನ್ನೂ ನೋಡಿಕೊಂಡರೆ ನಾನು ಸುಖವಾಗಿ ಮನಸ್ಸಿಗೆ ತಿಳಿದಂತೆ ಇರಬಲ್ಲೆ, ಆದರೆ....ಆದರೆ.... ( ರುಕ್ಕಿಣಿಯ ಕಡೆಗೆ ತಿರುಗಿ ) ಈಕೆಯ ವಿಚಾರವೇನು? ಕೋಸಲೇಂದ್ರ : ( ನಗುತ್ತ ) ಆ ವಿಷಯವನ್ನೂ ವಿಚಾರ ಮಾಡಿದ್ದೇನೆ, ಕಿಶನ್‌ಕಿಶೋರಜಿ ! ರುಕ್ಕಿಣಿದೇವಿಯವರಿಗೆ ನಿಮ್ಮ ಹಾಗೆ ಆತ್ಮ ಸಂಶೋ ಥನದ ಆತುರತೆ ಇಲ್ಲ. ಅವರಿಗೆ ಸೊಸೆ ಬೇಕು; ಮನೆತುಂಬ ಮೊಮ್ಮಕ್ಕಳು ಮರಿಮಕ್ಕಳು ಬೇಕು; ( ನಗುತ್ತ ) ಜಿರಿಮಕ್ಕಳಾದರೆ ಇನ್ನೂ ಸಂತೋಷ. ಆ ಸಂಭ್ರಮದಲ್ಲಿ ಅವರು ಎಲ್ಲ ಕೊರತೆಗಳನ್ನು ಮರೆಯುತ್ತಾರೆ. ಅದಕ್ಕಾಗಿ ಅವರಿಗೆಂದು ಒಬ್ಬ ಸೊಸೆಯನ್ನು ತಂದಿದ್ದೇನೆ, ಕಿಶನ್ ಕಿಶೋರಜಿ. ಕಿಶನ್ ಕಿಶೋರ : |

  • : ? ಎಲ್ಲಿ ? ಯಾರನ್ನು ಕರೆದುಕೊಂಡು ಬಂದಿದ್ದೀ? ನಿನ್ನ ಮದುವೆಯಾಯಿತೆ ? ಕೋಸಲೇಂದ್ರ : ( ನಗುತ್ತ ) ಮದುವುಗಳನ್ನು ತಂದಿದ್ದೇನೆ. ನೀನೇ

ಮದುವೆ ಮಾಡಬೇಕು. ಒಳ್ಳೆಯ ಹುಡಿಗೆ ಆಕೆ. ಚಿತ್ರಾಂಗದೆಯಂತೆ ಧೀರಳು. ಅರ್ಜುನನೊಡನೆ ನಿಂತು ಲೋಕವನ್ನೇ ಎದುರಿಸಬಲ್ಲಳು. ಆಕೆ ನಿಮ್ಮಿಬ್ಬರ ಮನಸ್ಸಿಗೆ ಬರುವದು ನಿಶ್ಚಿತ. ಆದರೆ....ಆದರೆ....ತಿಳಿಯದೆ ನಿಮ್ಮ ವಿಷಯದಲ್ಲಿ ಆಕೆ ಒಂದು ಅಪರಾಧ ಮಾಡಿದ್ದಾಳೆ. ಅದನ್ನು ಕ್ಷಮಿಸು ವದಾಗಿ ನೀವು ವಚನ ಕೊಟ್ಟರೆ ಆಕೆಯನ್ನು ಇಲ್ಲಿಗೆ ಕರೆತದತ್ತೆನೆ. ಹಕ್ಕಿಣಿದೇವಿ : ಏನದು ಅಪರಾಧ, ಕೋಸಲೇಂದ್ರ ? ಯಾವ ತರುಣಿಯೂ ಇಂಥ ಅಪರಾಧ ಮಾಡಿದ್ದು ನನಗೆ ನೆನಪಿಲ್ಲವಲ್ಲ ? ಕೋಸಲೇಂದ್ರ: ( ನಗುತ್ತ ) ಆಕೆಯನ್ನು ನೋಡಿದಾಗ ನಿಮಗೆ ನೆನಪಾಗದೆ ಇರದು. ಆದರೂ ಅಂಥದೇನು ಮಹಪರಾಧವಲ್ಲ ಅದು. ಅದನ್ನು ನೀವು ಕ್ಷಮಿಸಬಹುದೆ, ರುಕ್ಕಿಣಿದೇವಿ ? ದಕ್ಕಿಣಿದೇವಿ : ನೀನು ಅವಳ ಗುಣಗಾನವನ್ನು ಇಷ್ಟೊಂದಾಗಿ ಮಾಡುತ್ತಿರು ವಾಗ ಆ ಹುಡುಗಿ ಅಂಥ ಆಪರಾಧ ಮಾಡಿದ್ದರೂ ಕ್ಷಮಿಸುತ್ತೇನೆ. ( ಕಿಶನ ಕಿಶೋರರ ಕಡೆಗೆ ತಿರುಗಿ ) ನೀವೂ ಕ್ಷಮಿಸುವಿರಲ್ಲವೆ ?