ಪುಟ:Yugaantara - Gokaak.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ಯುಗಾಂತರ ಕಿಶನ್ ಕಿಶೋರ : ಹಾಗಾದರೆ ಒಂದು ಪ್ರಶ್ನೆ ಮಾಡುತ್ತೇನೆ, ಮೃಣಾಲಿನಿ - ದೇವಿ ! ಅದಕ್ಕೆ ಉತ್ತರ ಕೊಡುತ್ತೀರಾ ? ಮೃಣಾಲನಿ : ( ಉತ್ಕಂಠತೆಯಿಂದ ) ಕೊಡುತ್ತೇನೆ, ಕಿಶನ್ ಕಿಶೋರ : ಇನ್ನು ಮೇಲೆ ಗಜರ್ ಹಲವಾ ತಿನ್ನಲು ನಿಮ್ಮ ಅಡಿ ಇಲ್ಲವಲ್ಲ ? ನಿಮ್ಮಿಬ್ಬರಿಗೂ ಗಜರ್ ಹಲವಾದ ಮೇಲೆ ವಿಶೇಷ ಪ್ರೀತಿ. ಅದಕ್ಕೆ ಕೇಳುತ್ತೇನೆ, ಮೃಣಾಲಿನಿ : ( ನಗುತ್ತ) ಇಲ್ಲವೇ ಇಲ್ಲ. ಕೆಲವು ದಿನವಂತೂ ದಿನಾಲು ಅದನ್ನು ತಿನ್ನಲು ನನ್ನ ಸಿದ್ಧತೆಯಿದೆ. ಕಿಶನ್ ಕಿಶೋರ : ( ನಕ್ಕು ) ಹಾಗಿದ್ದರೆ ತೀರಿತು. ನಾನು ಇನ್ನೇನೂ ಕೇಳೆ ಬೇಕಾದ್ದಿಲ್ಲ. ಕೋಸಲೇಂದ್ರ, ನಿನ್ನ ವಧುವನ್ನು ನಾನು ಸಂಪೂರ್ಣ ವಾಗಿ ಮೆಚ್ಚಿದೆ. ರುಕ್ಕಿಣಿ, ನೀನೇನಾದರೂ ಪ್ರಶ್ನೆ ಕೇಳುವಿಯಾ ? ರುಕ್ಕಿಣಿದೇವಿ : ನಾನು........ಹೌದು, ಕೇಳುತ್ತೇನೆ. ಮೃಣಾಲಿನಿದೇವಿ, ಆ ಖಾರ ತುಂಬಿದ ಭಜಿ ಕಂಡರೆ ನನಗಾಗುವದಿಲ್ಲ. ಸಾಮೋಸಾ ನಡೆಯ ಬಹುದು. ಅಂಥ ಭಜಿ ತಿನ್ನಬೇಕೆಂದು ನಿನಗೆನಿಸಿದಾಗ ಬರಿ ಸಾಮೋಸದ ಮೇಲೆ ಸಾಗಿಸಬಲ್ಲೆಯಾ ? ಮಾಲಿನಿ : ( ತುಸು ನಕ್ಕು ) ನನಗೂ ಇತಿಚೆಗೆ ಅಂಥ ಭಜಿ ಕಂಡರೆ ಸೇರುವದಿಲ್ಲ. ಅದೇಕೋ ನನ್ನ ರುಚಿಯಲ್ಲಿಯೇ ಬದಲಾವಣೆಯಾಗಿದೆ. ರುಕ್ಕಿಣಿದೇವಿ : ಬಹಳ ಒಳ್ಳೆಯದಾಯಿತು. ಹಾಗಾದರೆ ಕೋಸಲೇಂದ್ರ, ನೀನು ತಂದ ಸೊಸೆಗೆ ನಾನು ಒಪ್ಪಿದೆ. ಇನ್ನು ಎಷ್ಟು ಬೇಗನೆ ಆಕೆ ಮನೆಗೆ ಬಂದಾಳೋ ಅಷ್ಟು ಸಂತೋಷ ನನಗೆ, ಕೋಸಲೇಂದ್ರ : ( ನಗುತ್ತ ) ಈಗ ಆಕೆ ಮನೆಗೆ ಬಂದುಬಿಟ್ಟಿದ್ದಾಳೆ. [ ತರೆ, ]