ಪುಟ:Yugaantara - Gokaak.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆcತು 4 ಪ್ರವೇಶ ೪ [ ಹಳೆಯ ದಿಲ್ಲಿ ನಿಲ್ಮನೆಯಲ್ಲಿ ಒಂದನೆಯ ತರಗತಿಯ ವಿಶ್ರಾಂತಿಗೃಹ, ಕಿಶನ್ ಕಿಶೋರ-ರುಕ್ಷ್ಮಿಣಿದೇವಿ, ಕಾಂತಿಚಂದ್ರ-ರೋಹಿಣಿದೇವಿ ಹಾಗೂ ಕೋಸಲೇಂದ್ರ-ಮೃಣಾಲಿನಿಯು ಅಲ್ಲಿ ಕುಳಿತಿದ್ದಾರೆ. ರೋಹಿಣಿದೇವಿ : ಯುದ್ಧ ಮುಗಿದರೂ ಈ ರೇಲ್ವೆ-ಆಲಸ್ಯ ಮುಗಿಯ ಲೊಲ್ಲದು. ಗಾಡಿ ನಿಲಂಬ ಎಷ್ಟೆಂದು ತಿಳಿಯಲು ಆಳು ಕಳಿಸಿದೆವು. ವೇಳೆಗೆ ಸರಿ ಎನ್ನುತ್ತ ಅವನು ತಿರುಗಿ ಬಂದ, ಆಗ ನಿಲ್ಮನೆಗೆ ಎಲ್ಲರೂ ಬಂದೆವು. ಒಂದೂವರೆ ಗಂಟೆಯಾಯಿತು. ಇಲ್ಲೇನಿದೆ ? ಬ್ರಿಟಿಶ್ ಸಾಮ್ರಾಜ್ಯದಲ್ಲಿ ಎಂದೂ ಅಸ್ತನಾಗದಿದ್ದ ಸೂರ್ಯನ ಉದಯಾಸ್ತಗಳೇ ಈಗ ಅನಿಶ್ಚಿತ ವೆಂದು ತೋರುತ್ತದೆ. ನಾವು ತಮ್ಮನ್ನು ಉಳಿದ ಕೆಲಸಗಳಿಂದ ತಡೆಹಿಡಿ ದಿಲ್ಲವಷ್ಟೆ ? ಕಿಶನ್‌ಕಿಶೋರ : ಛೇ ! ಛೇ ! ತಾವು ನಮ್ಮನ್ನು ನೋಡದೆ ಹೋಗಿದ್ದರೆ ಭೆಟ್ಟಿಯ ಸಂಧಿಯೇ ತಪ್ಪುತ್ತಿತ್ತು. ರೋಹಿಣಿದೇವಿ : ಗ್ಯಾಂಗ್‌ನಲ್ಲಿ ಮೊದಲು ಮೃಣಾಲಿನಿ ಕಂಡಳು, ಕಾಂತಿ ಚಂದ್ರರ ಆರೈಕೆಗೆ ಬರುವದಾಗಿ ವಚನ ಕೊಟ್ಟು ಐದಾರು ದಿನಗಳಲ್ಲಿ ತಿರುಗಿ ಬರುವೆನೆಂದು ಹೇಳಿದ ಮೃಣಾಲಿನಿಗೆ ಒಮ್ಮೆ ಚೆನ್ನಾಗಿ ಮಾತ ನಾಡಿಸಬೇಕು ಎಂದುಕೊಂಡೆ. ಅಷ್ಟರಲ್ಲಿ ಕೋಸಲೇಂದ್ರ ಬಾಬುಗಳು ಕಂಡರು. ತಮ್ಮನ್ನೂ ನೋಡಿದೆ. ಮಾಹುವಿನಿಂದ ಇಂಥ ಬೇಸಿಗೆಯಲ್ಲಿ ತಾವು ತಿರುಗಿ ಬರಬಹುದೆಂದು ನನಗೆನಿಸಿರಲಿಲ್ಲ. ಅಲ್ಲಿ ಎಲ್ಲವೂ ಸುಖ ವಾಗಿತ್ತೇ ? ರುಕ್ಕಿಣಿದೇವಿ : ದೇವರ ದಯೆಯಿಂದ ಎಲ್ಲವೂ ಸುಖಕರವಾಗಿ ಮುಕ್ತಾಯ ವಾಯಿತು. ಮೃಣಾಲಿನಿ ನಿಮಗೆ ಹೇಳಿದ ಹಾಗೆ ಬೇಗನೇ ತಿರುಗಿ ಬರು ತಿದ್ದಳೋ ಏನೋ, ನಾವೇ ಕೆಲವು ದಿನ ಆಕೆಯನ್ನು ತಡೆದು ನಿಲ್ಲಿಸಿದೆವು. ಈಗ ತಾವು ಹೋಗುವದೆಲ್ಲಿಗೆ ?