ಪುಟ:Yugaantara - Gokaak.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ೦ಕು ೩ 24 cತಿ: ಬೇಕಾಗಿಲ್ಲ. ಮೃಣಾಲಿನಿಯನ್ನು ನಾನು ಮಗಳಂತೆ ನೋಡುತ್ತೇನೆ. ತಾಯಿ ಯನ್ನು ಕಳೆದುಕೊಂಡ ಆಕೆಯೂ ನನ್ನನ್ನು ಪ್ರೀತಿಸುತ್ತಾಳೆ. ಆದರೆ ಆ ಮಾರ್ಕ್ಷ ತತ್ವಗಳಲ್ಲಿ ನನಗೆ ಶ್ರದ್ದೆ ಇರಬೇಕಲ್ಲ ? ಅದಕ್ಕಾಗಿ ಆಕೆಗೂ ನಾನು ಬರ್ಸಣವಾಗಿದ್ದೇನೆ ! ಅಲ್ಲವೆ, ಮೃಣಾಲಿನಿ ? ( ಮೃಣಾಲಿನಿ ಉತ್ತರ ಕೊಡಲು ಒಂದ ಮುಂದೆ ನೋಡುವದನ್ನು ಕಂಡು ) ಇಷ್ಟೇಕೆ ಸುಮ್ಮನಿದ್ದೀ! ಇದೆಲ್ಲಿಯ ಮೌನವ್ರತ ? ಜೋಸಲೇಂದ್ರ : ( ನಗುತ್ತ ) ಅತ್ತೆ-ಮಾವಂದಿರೆದುರಿಗೆ ಮಾತನಾಡಲು ಆಕೆ ನಾಚುತ್ತಾಳೆ. ರೋಹಿಣಿಜೀವಿ: { ( ಆಶ್ಚರ್ಯದಿಂದ ) ಅತ್ತೆ-ಮಾವಂದಿರು ? ಯಾರು ? ಮದುವೆ ಎಂದಾಯಿತು ? ಯಾರೊಡನೆ ? ನನಗೆ ಗೊತ್ತೇ ಇಲ್ಲವಲ್ಲ ! ಜೋಸಲೇಂದ್ರ : ಇವರೇ ಆಕೆಯ ಅತ್ತೆ-ಮಾವಂದಿರು. ನಾನು ಅವರ ಮಾನಸಪುತ್ರ, ಮೃಣಾಲಿನಿ ನನ್ನ ವಧು, ಆದರೆ ಮದುವೆ ಇನ್ನೂ ಆಗುವದಿದೆ, ರೋಹಿಣಿದೇವಿ: ಆಶ್ಚರ್ಯ ! ಪರಮಾಶ್ಚರ್ಯ ! ಕೋಸಲೇಂದ್ರ : ಇರಬೇಕು, ಲೋಹಿಣಿದೇವಿಯನು ! ಆ ವಿಷಯವನ್ನೆಲ್ಲ ಹಿಂದಿನಿಂದ ಮೃಣಾಲಿನಿ ಹೇಳುತ್ತಾಳೆ. ಆದರೆ ನಿಮ್ಮಿಬ್ಬರಲ್ಲಿ ನನ್ನದೊಂದು ಸೂಚನೆಯಿದೆ, ಕಾಂತಿಚಂದ್ರ : ಏನು ಸೂಚನೆ, ಕೋಸಲೇಂದ್ರಬಾಬು ? ಕೋಸಲೇಂದ್ರ : ಭಾರತದಲ್ಲಿಯ ಆಧ್ಯಾತ್ಮಿಕ ಕೇಂದ್ರಗಳು ಶಕ್ತಿಯ ಕೋಶಾಗಾರಗಳಾಗಿವೆ. ಕಿಶನ್ ಕಿಶೋರಜಿ ಅವರು ಪ್ರತಿವರ್ಷ ಕೆಲವು ತಿಂಗಳಾದರೂ ಇಂಥ ಕೇಂದ್ರಗಳಿಗೆ ಹೋಗಬೇಕೆಂದು ಗೊತ್ತು ಮಾಡಿ ದ್ದಾರೆ. ತಾವೂ ಅವರ ಜೊತೆಗೆ ಹೋಗಬಹುದು. ಆದರೆ ತಿರುಗಿ ಬಂದಾಗ ದೇಶದ ಭವಿತವ್ಯವನ್ನು ಬರೆಯಲು ಭಾರತದ ಲಲಾಟದಂತಿದ್ದ ಈ ದಿಲ್ಲಿ ಯಲ್ಲಿ ಆ ಶಕ್ತಿಯನ್ನು ತಾವು ಉಪಯೋಗಿಸಬೇಕು. ತನ್ನ ಗೌರವಕ್ಕೆ ತಕ್ಕ ಕಾರ್ಯಕ್ಷೇತ್ರವನ್ನು ನಾನಿಲ್ಲಿ ತಮಗೆ ಕಲ್ಪಿಸಬೇಕೆಂದಿದ್ದೇನೆ.