ಪುಟ:Yugaantara - Gokaak.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

STಂತರ ಕಾಂತಿಚಂದ್ರ : ( ಸಂತೋಷದ ಮುಗುಳುನಗೆಯಿ೦ದ ) ನಿಮ್ಮಂಥವರ ನೆರವು ದೊರೆತರೆ ಅದೇನು ಅಸಾಧ್ಯವಲ್ಲ. ಕೋಸಲೇಂದ್ರ : ಕಿಶನ್ ಕಿಶೋರು ಮಾಡಬೇಕಾದುದನ್ನು ಮಾಡಿ ಅಚಿಂತ್ಯದ ಕಡೆಗೆ ತಿರುಗಿದ್ದಾರೆ. ಅಲ್ಲದೆ, ಇನ್ನೂ ಒಂದು ಕಾರಣವಿದೆ. ನೀವು ಒಬ್ಬರು ವಿರಕ್ತರಾದರೆ ರೋಹಿಣಿದೇವಿಯವರೇನು ಮಾಡಬೇಕು ? ಮಡು ರೆಯ ಧರ್ಮಾಂಧತೆಗೆ ಬೇಸತ್ತು ಸಾರ್ವಜನಿಕ ಜೀವನದಲ್ಲಿ ಅವರು ತುಂಬ ಮನಸ್ಸು ಹಾಕಿದ್ದಾರೆ. ಅವರ ತೃಪ್ತಿಯೂ ಆಗಬೇಕಲ್ಲ ? ಆದರೆ ... ರೋಹಿಣಿದೇವಿಯವರೆ, ತಮ್ಮಲ್ಲಿಯೂ ನನ್ನದೊಂದು ಬಿನ್ನ ಹವಿದೆ. ರೋಹಿಣಿದೇವಿ : ಅದೇನು, ಕೋಸಲೇಂದ್ರಬಾಬು ? ಎಲ್ಲರ ಹೃದ್ದ ತವನ್ನು ನೀವು ಹೀಗೆ ನಿಮಿಷಮಾತ್ರದಲ್ಲಿ ತಿಳಿಯುವದನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ, ಕೋಸಲೇಂದ್ರ : ( ನಗುತ್ತ ) ಹೇಳಲು ಒಂದು ನಿಮಿಷ ಹತ್ತಿದರೂ ತಿಳಿ ಯಲು ಕೆಲವು ಕಾಲ ಕಳೆದಿದ್ದೇನೆ, ರೋಹಿಣಿದೇವಿಯವರೆ, ನನ್ನ ಬಿನ್ನಹ ಇದು, ಈಗ ನೀವು ಮೃಣಾಲಿನಿಯನ್ನು ನೋಡಿದ್ದೀರಿ. ಈಕೆ ಮೊದಲಿನ ಮೃಣಾಲಿನಿಯೆ ? ಮಾತಿನ ಮಲ್ಲಳಾದ ಈಕೆ ಈಗ ಮೌನದ ಮಾದರಿ ಯಾಗಿಲ್ಲವೆ ? ರೋಹಿಣಿದೇವಿ : ಹೌದು. ಅದನ್ನೇ ನಾನು ಕೇಳಬೇಕೆಂದಿದ್ದೆ, ತನಗೆ ಮದುವೆ ಬರ್ಷಣನೆಂದು ಮೃಣಾಲಿನಿ ಹೇಳುತ್ತಿದ್ದಳು. ಆದರೆ ಈಗ ಮದುವೆಯಾಗಲು ಮುಂದುವರಿದಿದ್ದಾಳೆ. ಒಂದೊಂದು ಮಾತಿಗೆ ಒಬ್ಬೊ ಬ್ಬರ ಮನಸ್ಸು ನೋಯಿಸುತ್ತಿದ್ದವಳು ಈಗ ಇನ್ನೊಬ್ಬರು ಕೆಣಕಿದರೂ ಮಾತನಾಡುವದಿಲ್ಲ. ಆಕೆಯ ರೀತಿಯಲ್ಲಿಯೇ ಒಂದು ಕ್ರಾಂತಿಯಾಗಿದೆ. ಮೃಣಾಲಿನಿ : ( ನಗುತ್ತ ) ನಾನು ಮಾತನಾಡುವದಾದರೂ ಏನೆಂದು ! ನಾನು ಹೇಳಬಹುದಾದುದನ್ನು ಕೋಸಲೇಂದ್ರ ನನಗಿಂತ ಚೆನ್ನಾಗಿ ಹೇಳು ತಿದ್ದಾನೆ. ನೀವೆಲ್ಲರೂ ನನ್ನನ್ನು ಕೆಣಕುವದನ್ನು ನೋಡಿ ನನಗೆ ಮಾತ್ರ ನಾಡಬೇಕೋ ಸುಮ್ಮನಿರಬೇಕೋ, ನಗಬೇಕೋ ಅಳಬೇಕೋ ತಿಳಿಯ ದಾಗಿದೆ.