ಪುಟ:Yugaantara - Gokaak.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಂಕು ೩ ೭೭ ಕೋಸಲೇಂದ್ರ : ಇಂಥವರ ಬಾಗಿಲಿಗೆ ಹೋಗಬಾರದು, ರೋಹಿಣಿದೇವಿ ಯವರೆ. ಅವರೇ ನಮ್ಮ ಬಾಗಿಲಿಗೆ ಬರಬೇಕು. ಇನ್ನು ಬನಸಿಲಾಲರ ಮುಖವನ್ನು ಸ್ವಲ್ಪ ಪರೀಕ್ಷಿಸಿರಿ. ಅದು ಹೇಗೆ ಬದಲಾಗುವದೆಂದು ( ಗಟ್ಟಿಯಾಗಿ ) ಏನು, ಬನಸಿಲಾಲಜಿ ! ಬಹಳ ಅವಸರದಲ್ಲಿದ್ದಂತೆ ಕಾಣು ಇದೆ ? ನಮಸ್ತೆ ? ಬನಸಿಲಾಲ : ( ತಿರುಗಿ ನೋಡಿ ) ಓಹೋ! ಕೋಸಲೇಂದ್ರಬಾಬು ! ನಮಸ್ತೆ! ( ಕಿಶನ್ ಕಿಶೋರ ದಂಪತಿಗಳನ್ನೂ ಕಾಂತಿಚಂದ್ರ ದಂಪತಿಗಳನ್ನೂ ನೋಡಿದವನೆ ನೊಣ ಕಡಿದವನಂತ ; ಓ ...ಓ...ಓ ...! ಕಾಮೆಡ್ ಮಣಾಲಿನಿಯವರೂ ಇದ್ದಾರೇನು ? ನಮಸ್ತೆ ! ಕ್ಷಮಿಸಿರಿ ! ( ಮುಂಗೈ ಗಡಿಯಾರ ನೋಡುತ್ತ ) ಗಾಡಿಯ ಹೊತ್ತಾಯಿತು. ಕೋಸಲೇಂದ್ರ: ( ನಕ್ಕು ) ನಿಮ್ಮ ಗಾಡಿ ತಪ್ಪಿಸುವ ಇಚ್ಛೆಯಿಲ್ಲ ನನಗೆ, ಸೇಠಜಿ. ಆದರೆ ಒಂದೇ ಒಂದು ಮಾತು ತಿಳಿಸುವದಿತ್ತು. ಈಗ ನೀವು ಎಲ್ಲಿಗೆ ಹೊರಟಿದ್ದೀರಿ ನನಗೆ ಗೊತ್ತು, ಪಂಡಿತ ನೆಹರು ಹಾಗು ವಲ್ಲಭ ಭಾಯಿಯವರ ಬೆಟ್ಟಗಲ್ಲವೆ? ಅಲ್ಲಗಳೆಯುವದೇಕೆ ? ನೀವು ಇಲ್ಲವೆಂದು ತಲೆ ಹಾಕಿದರೂ ಹೌದೆಂದು ನಿನ್ನ ಕಣು ಹೇಳುತ್ತವೆ. ಆದರೆ ಬರುವಾಗ ರಾಜೇಂದ್ರ ಬಾಬುಗಳನ್ನು ನಾನು ಗಾಡಿಯಲ್ಲಿ ಕಂಡೆ, ಅಸೆಂಬ್ಲಿಗೆ ದಿಲ್ಲಿಯ ಭಾಗದಿಂದ ಅಸಫ್ ಅಲಿಯವರನ್ನು ನಿಲ್ಲಿಸಬೇಕೆಂದು ಗೊತ್ತಾಗಿದೆ. [ ಎಲ್ಲರೂ ವಿಜಯೋತ್ಸಾಹದಿಂದ ಬನಸಿಲಾಲನನ್ನು ನೋಡುತ್ತಾರೆ. ಅವನ ಮೊರೆಯು ಕಪ್ಪಿಡುತ್ತದೆ. } ಬನಸಿಲಾಲ : ಯಾರನ್ನು ?..............ಫ್ ಅಲಿಯವರನ್ನೊ ? ಕೋಸಲೇಂದ್ರ : ಹೌದು. ಇನ್ನು ನೀವು ನಿಮಗೆ ಬೇಕಾದ ಪಾರ್ಟಿಯಿಂದ ನಿಲ್ಲಬಹುದು. ಕಾ:ಮೈಡ್ ಮೃಣಾಲಿನಿಯವರ ಸಹಾಯದಿಂದ ಅವರ ಮಾರ್ಕ್ಸ ತತ್ವಗಳನ್ನೊಪ್ಪಿ-ವೋಟು ದೊರಕಿಸಬಹುದೆಂದು ನೀವು ತಿಳಿ ಜೀರಿ ಮತ್ತೆ ! ಅದು ಸಾಧ್ಯವಿಲ್ಲ. ಯಾಕೆ, ಮೃಣಾಲಿನಿ?