ಪುಟ:Yugaantara - Gokaak.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತತಿ 11 ಮೃಣಾಲಿನಿ : ( ತುಂಟ ನಗೆಯಿಂದ ) ಬನಸಿಲಾಲರಿಗೆ ಜನರಿಂದ ವೋಟು ಬೀಳಲಿಕ್ಕಿಲ್ಲ; ಏಟು ಬೀಳಬಹುದು. [ ಎಲ್ಲರೂ ನಗುತ್ತಾರೆ. ] ರೋಹಿಣಿದೇವಿ : ಕೋಸಲೇಂದ್ರಬಾಬು, ಮೃಣಾಲಿನಿಯು ಮೌನವನ್ನು ಸಾಧಿಸಿರುವದೇನೋ ನಿಜ, ಆದರೆ ಆಕೆಯ ಮಾತಿನ ರೀತಿಯಲ್ಲಿ ಏನೂ ಬದಲಾವಣೆ ಕಾಣುವದಿಲ್ಲವಲ್ಲ? ಕೋಸಲೇಂದ್ರ : ಮೊದಲಿನ ಖಾರ ಇನ್ನೂ ಉಳಿದಿರುವದು ನಿಜ, ಆದರೆ ಈಗ ಪ್ರಸಂಗಕ್ಕೆ ತಕ್ಕಂತೆ ಮಾತು ಬರುತ್ತಿದೆ, ರೋಹಿಣಿದೇವಿ, ಒಂದೇ ಪಡಿಯಚ್ಚಲ್ಲ ! ( ಬನಸಿಲಾಲನ ಕಡೆಗೆ ತಿರುಗಿ ) ಸೇಠಜಿ, ನಿನ್ನ ಗಾಡಿಯ ಹೊತ್ತಾಯಿತು. ನಿಮ್ಮ ಗಾಡಿ ತಪ್ಪಿಸುವ ಇಚ್ಛೆಯಿಲ್ಲ ನನಗೆ. ಬನಸಿಲಾಲ : ಹ! ಹ ! ಹಾಗೇನೂ ಇಲ್ಲ ! ಆದರೆ ಈ ವಿಷಯದ ವಿವರ ಗಳು ಇನ್ನಿಷ್ಟು ತಿಳಿದರೆ..... ಕೋಸಲೇಂದ್ರ : ನೀವು ಊರಿನಿಂದ ತಿರುಗಿ ಬಂದ ಮೇಲೆ ಮಾತ್ರ ನಾಡೋಣ. ಬನಸಿಲಾಲ : ಹ ! ಹ ! ನಿಮ್ಮೊಡನೆ ಮಾತಾಡುವದೇ ಮಹತ್ವದ್ದು. ಗಾಡಿ ಇವತ್ತು ತಪ್ಪಿದರೆ ನಾಳೆ ಹತ್ತಿದರೂ ನಡೆದೀತು. ಕೋಸಲೇಂದ್ರ : ( ನಗುತ್ತ ) ಹೀಗೋ ಹಾಗಾದರೆ ! ಇಂದು ರಾತ್ರಿ ನನ್ನ ಕೋಣೆಗೆ ಬನ್ನಿರಿ, ಬನಸಿಲಾಲ : ಅವಶ್ಯವಾಗಿ ಬರುತ್ತೇನೆ. ನಮಸ್ತೆ ! ನಮಸ್ತೆ, ಮೃಣಾಲಿನಿ ದೇವಿ ! ಹ ! ಹ ಹ ! [ ಹೋಗುತ್ತಾನೆ, ] ರೋಹಿಣಿದೇವಿ : ಒಳ್ಳೆಯ ಶಾಸನವಾಯಿತು. ಇಂಥವರಿಗೆ ಹೀಗೆಯೇ ಆಗಬೇಕು. ಕಾಂತಿಚಂದ್ರ: ರಾತ್ರಿ ನಿಮ್ಮ ಕಡೆಗೆ ಬಂದಾಗ ಈ ನಾಗರಿಕ ಸರ್ಪಕ್ಕೆ ಏನು ಹೇಳುತ್ತೀರಿ, ಕೋಸಲೇಂದ್ರಬಾಬು ? ಇಂಥವರನ್ನು ನೋಡಿದಾಗ