ಪುಟ:Yugaantara - Gokaak.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು 4 १॥ ನನಗೆನಿಸುತ್ತದೆ: ಒಂದೊಂದು ಊರೂ ಇಂದಿಗೆ ಹಾವಿನ ಹುತ್ತಾಗಿದೆ ಎಂದು. ಕಿಶನ್ ಕಿಶೋರ : ಹೌದು, ಜಗತ್ತೇ ಇಂಥವರ ಸರ್ಪಗಾವಲಿನಲ್ಲಿ ಸಿಕ್ಕಿದೆ. ಕೋಸಲೇಂದ್ರ: ಅದು ನಿಜ. ಆದರೆ ಇಂಥವರಿಗೂ ಜಗತ್ತಿನಲ್ಲಿ ಸ್ಥಾನವಿದೆ. ಚಂದ್ರಮೌಳಿಯ ಆಭರಣಗಳಲ್ಲಿ ನಾಗವೂ ಒಂದು ಎಂಬುದನ್ನು ಮರೆಯ ಬೇಡಿರಿ. ಆದರೆ ದೇವರು ನಾಗಭೂಷಣನಾದಂತೆ ಗರುಡವಾಹನನೂ ಹೌದು, ಒಳಿತು-ಕೆಡಕಿನ ಈ ಚಿರಂತನ ಸಂಗ್ರಾಮದಲ್ಲಿ ಗರುಡಪಕ್ಷಿಗೆ ವಿಜಯವು ಕಟ್ಟಿಟ್ಟದ್ದು , ರೋಹಿಣಿದೇವಿ : ಇದೆಲ್ಲ ನಿಮ್ಮ ಕಾವ್ಯವಾಯಿತು ಕೋಸಲೇಂದ್ರಬಾಬು ! ಅದನ್ನು ನಾನು ಒಪ್ಪುತ್ತೇನೆ. ಆದರೆ ಇಂದು ರಾತ್ರಿ ಆ ಮಹಾನುಭಾವನಿಗೆ ಏನು ಹೇಳುತ್ತೀರಿ ? ಅವನ್ನು ತಿಳಿಸಿರಿ, ಕೋಸಲೇಂದ್ರ : ( ನಗುತ್ತ ) ಇಂದು ರಾತ್ರಿ, ಬನಸಿಲಾಲನು ಮಾಡಿದ ಮಹಾ ಕೃತ್ಯಗಳನ್ನೆಲ್ಲ ಅವನೆದುರಿಗೆ ವರ್ಣಿಸುತ್ತೇನೆ. ಹೀಗೆಯೇ ನಡೆದರೆ ನನ್ನ ಹಾಗು ಮೃಣಾಲಿನಿಯ ಸಹಾನುಭೂತಿ ಅವನಿಗೆ ಸಾಧ್ಯವಿಲ್ಲವೆಂದು ತಿಳಿಸುತ್ತೇನೆ. ತಿಳುವಳಿಕೆಯಿಂದ ಕ್ರಿಯಾಪೂರ್ಣವಾಗಿ ನಡೆದರೆ, ಸಮಾಜ ದಲ್ಲಿಯೂ ಸ್ಥಾನವಿದೆ; ಸಂಯುಕ್ತ ಪ್ರಾಂತದ ಅಸೆಂಬ್ಲಿಯಲ್ಲಿಯೂ ಸ್ಥಾನ ವಿದೆ, ಎಂದು ತಿಳಿಸುತ್ತೇನೆ. ಸಮಾಜದ ಸಫಲತೆಯಲ್ಲಿ ಅವನ ಸ್ವಾರ್ಥದ ಸಾಫಲ್ಯವೂ ಅಡಕವಾಗಿದ್ದರೆ, ಅವನಿಗೆ ಅದರಿಂದಲೇ ಸಮಾಧಾನವಾಗು ತಿದ್ದರೆ ಅದಕ್ಕೆ ನಾವು ಅಡ್ಡಿ ಬರುವವರಲ್ಲ ಎಂದು ಹೇಳುತ್ತೇನೆ. ಕೋಹಿಣಿದೇವಿ : ಆಗಬಹುದು. ಇದು ನನಗೆ ಸಮ್ಮತ. ( ಮುಂಗೈ ಗಡಿ ಯಾರವನ್ನು ನೋಡುತ್ತ ) ಆಗಲಿ ಕೋಸಲೇಂದ್ರಬಾಬು ! ಇನ್ನು ನಾವು ಹೊರಡುತ್ತೇವೆ. ಬನಸಿಲಾಲ ಇಷ್ಟೆಲ್ಲ ಗಡಿಬಿಡಿ ಮಾಡಿದರೂ ಗಾಡೀ ತಪ್ಪಿಸಿ ಕೊಂಡ. ಇನ್ನು ನಾವು ಹೊರಡದಿದ್ದರೆ, ನನಗೂ ಗಾಡಿ ಸಿಗಲಿಕ್ಕಿಲ್ಲ. ರುಕ್ಕಿಣಿದೇವಿಯವರೆ, ಇನ್ನೊಂದು ವಾರದಲ್ಲಿ ನಾವು ಮಥುರೆಯಿಂದ