ಪುಟ:Yugaantara - Gokaak.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅd 3 ಪ್ರವೇಶ ೫ [ ಕೂಸಲೇಂದ್ರ ಮೃಣಾಲಿನಿಯವರ ಮನೆ, ಮೃಣಾಲಿನಿಯು ಕಸೂತಿ ಹಾಕುತ್ತ ಕುಳಿತಿರುತ್ತಾಳೆ. ಹತ್ತಿರ ಅರ್ಧ ತೆರೆದಿಟ್ಟ ಒಂದೆರಡು ಪುಸ್ತಕ ಗಳು ಟೇಬಲ್ಲಿನ ಮೇಲೆ ಬಿದ್ದಿರುತ್ತವೆ. ಆಗ ಹೊರಗಿನಿಂದ ನೆಹರು ಶರ್ಟು-ಜಾಕಿಟನಲ್ಲಿದ್ದ ಕೋಸಲೇಂದ್ರನು ಪ್ರವೇಶಿಸುತ್ತಾನೆ. } ಕೋಸಲೇಂದ್ರ : ( ಮೃಣಾಲಿನಿಯ ಎದುರು ( ಉ' ಎಂದು ಸೋಫಾದ ಮೇಲೆ ಕೂಡುತ್ತ) ಏಕೆ ? ಒಬ್ಬಳೇ ಇದ್ದೀ, ಮೃಣಾಲಿನಿ ! ರುಕ್ಷ್ಮಿಣಿದೇವಿ ಎಲ್ಲಿ ಹೋಗಿದ್ದಾರೆ ? ಮೃಣಾಲಿನಿ : ( ಕಸೂತಿಯನ್ನು ಹೆಣೆಯುತ್ತ ) ರೋಹಿಣಿಬೆನ್' ಹಾಗು ಅವರೂ ಕೂಡಿ ಮಹಿಳಾ ಸಭೆಗೆ ಹೋಗಿದ್ದಾರೆ. ಕೋಸಲೇಂದ್ರ : ನೀನಿಲ್ಲದೆ ? ನೀನಿಲ್ಲದೆ ಇಂಥ ಸಭೆ ಆಗುವದು ಹೇಗೆ ? ನೀನೇಕೆ ಹೋಗಿಲ್ಲ ? ಮೃಣಾಲಿನಿ : ( ತುಸು ಕೆಳಗೆ ಮೋರೆಮಾಡಿ ) ಇಲ್ಲ. ಕೋಸಲೇಂದ್ರ : ( ಸ್ಲಿಪರ್ ತೆಗೆದು ಜಾಕೀಟನ್ನು ತೆಗೆದಿಡುತ್ತ ) ಕಿಶನ್ ಕಿಶೋರರ ಪತ್ರ ಇವತ್ತಾದರೂ ಬಂದಿದೆಯೇ ? ಮೃಣಾಲಿನಿ : ( ಟೇಬಲ್ಲಿನ ಮೇಲಿನ ಪತ್ರವನ್ನು ಕೈಚಾಚಿ ಕೊಟ್ಟು ) ಹೌದು, ಅವರೂ ಕಾಂತಿಚಂದ್ರರೂ ಕೂಡಿ ಇನ್ನು ಹದಿನೈದು ದಿನಗಳಲ್ಲಿ ಅರುಣಾ ಚಲದಿಂದ ತಿರುಗಿ ಬರುವದಾಗಿ ಬರೆದಿದ್ದಾರೆ. ಕೋಸಲೇಂದ್ರ : ( ಪತ್ರವನ್ನು ಓದುತ್ತ ) ಇದೊಂದು ಒಳ್ಳೆಯವಾಯಿತು. ಬನಸಿಲಾಲರ ಸುದ್ದಿಯೇನು ? ಏನಾದರೂ ಹೇಳಿ ಕಳಿಸಿದ್ದರೋ ? ಮೃಣಾಲಿನಿ : ಸಮತಾವಾದಿ ಪಕ್ಷದಿಂದ ಕಾಂತಿಚಂದ್ರರು ಚುನಾವಣೆಗೆ ನಿಲ್ಲುವದಿದ್ದರೆ ನಿಲ್ಲಲಿ; ಸಂಯುಕ್ತ ಪ್ರಾಂತದ ಅಸೆಂಬ್ಲಿಯಲ್ಲಿ ತಮಗೆ ಸ್ಥಾನ ಸಿಕ್ಕರೆ ಸಾಕು : ಎಂದು ಹೇಳಿ ಕಳಿಸಿದ್ದಾರೆ.