ಪುಟ:Yugaantara - Gokaak.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯು ಗಾ೦ ತ ರ ಅಂಕು ೧ ಪ್ರವೇಶ ೧ ಪುರಾತನ ದಿಲ್ಲಿಯ ರೇಲ್ವೆ ನಿಲ್ಮನೆಯಲ್ಲಿಯ ಒಂದನೆಯ ತರಗತಿಯ ತಂಗುಮನೆ. ಅಲ್ಲಿ ಕಿಶನ್ ಕಿಶೋರ, ರುಕ್ಕಿಣಿದೇವಿ, ಕಾಂತಿ ಚಂದ್ರೆ ಹಾಗು ರೋಹಿಣಿದೇವಿಯರು ಚಹ ತಗೆದುಕೊಳ್ಳುತ್ತ ಕುಳಿತಿದ್ದಾರೆ, ಕಿಶನ್ ಕಿಶೋರರು ಗರ್ಭ ಶ್ರೀಮಂತರು, ಸಾಮಾಜಿಕ ಚಟು ವಟಿಕೆಗಳಲ್ಲಿ ಭಾಗವಹಿಸಿ ಬೇಸರಗೊಂಡು ಈಗ ಧಾರ್ಮಿಕವೃತ್ತಿಗೆ ಮನಸೋತಿದಾ ಕಿ ಅವರಿಗೆ ೫೫-೫& ವರ್ಷಗಳಾಗಿವೆ. ರುಕ್ಷ್ಮಿಣಿದೇವಿ ಯವರು ಅವರ ಹೆಂಡತಿ; ಅವರಿಗಿಂತ ೬-೮ ವರ್ಷಗಳಿಂದ ಚಿಕ್ಕವರು. ಇವರಿಬ್ಬರೂ ಮೂಲತಃ ದಿಲ್ಲಿಯವರು, ಕಾಂತಿ ಚಂದ್ರರು ಮಥುರೆಯ ಪ್ರಸಿದ್ದ ಲಕ್ಷ್ಮೀಪುತ್ರರು, ಪರಂಪರಾನುಗತಿಕ ಧರ್ಮವನ್ನು ಪಾಲಿಸುತ್ತ ಬಂದು ಬೇಸತ್ತು ಸಮಾಜ ಸೇವೆಗೆಂದು ಮನಸ್ಸು ಮಾಡಿ ಈಗ ದಿಲ್ಲಿಯಲ್ಲಿ ನಲಿಸಲು ಬಂದಿದ್ದಾರೆ. ಇವರ ವಯಸ್ಸು ಐವತ್ತರೊಳಗೆ, ರೋಹಿಣಿದೇವಿಯವರು ಅವರ ಪತ್ನಿ.] ಕಿಶನ್‌ ಕಿಶೋರ : ಒಮ್ಮೊಮ್ಮೆ ರೇಲ್ವೆ ನಿಲ್ಮನೆಯಲ್ಲಿ ಎಂಥ ಸೋಜಿಗಗಳು ಸಂಭವಿಸುತ್ತವೆ! ನಮ್ಮ ಬೆಟ್ಟ ಅಂಥದೊಂದು ಸೋಜಿಗವೆನ್ನ ಬೇಕು. ನೀವು ಕೈಬಿಟ್ಟ ಧರ್ಮವನ್ನು ನಾನು ಎತ್ತಿ ಹಿಡಿಯಬೇಕೆನ್ನು ತೇನೆ. ನಾನು ತಡೆದು ನಿಲ್ಲಿಸಿದ ಪ್ರವೃತ್ತಿಯೆಡೆಗೆ ನೀವು ಪ್ರವೃತ್ತರಾಗಿದ್ದಿ ರಿ ! ಬಾಳುವೆಯ ತಿರುವುಮುರುವನ್ನು ಅಳೆಯುವದು ಅಸಾಧ್ಯವಲ್ಲವೆ ? ಕಾಂತಿಚಂದ್ರ: ಹೌದು, ಸೋಜಿಗವಲ್ಲದೆ ಏನು ! ಆದರೆ ಪ್ರತಿಯೊಂದು ವ್ಯಕ್ತಿತ್ವಕ್ಕೂ ಅದರ ಧರ್ಮದ ಪ್ರಭಾವಳಿಯೊಂದಿರುತ್ತದೆ. ಆ ಬೆಳಕಿ ನಲ್ಲಿಯೇ ಮಾತ್ರ ಅದು ಬೆಳೆಯಬಲ್ಲದು.