ಪುಟ:Yugaantara - Gokaak.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨ ಯುಗಾಂತರ ಕೋಸಲೇಂದ್ರ : ( ಕೋಣೆಯಲ್ಲಿ ತಿರುಗಾಡುತ್ತ ) ಆ ಮನುಷ್ಯ ಈಗ ಹಾದಿಗೆ ಬರಹತ್ತಿದ್ದಾನೆ. ಕಾಂಗ್ರೆಸಿನ ಸಮತಾಪ ಪ್ರಬಲವಾದಾಗ ಮಾತ್ರ ಅವನಿಗೆ ಬುದ್ದಿ ಬಂತು. ಅಲ್ಲದೆ, ಮೃಣಾಲಿನಿ ? ಮೃಣಾಲಿನಿ : ( ಸುಮ್ಮನೆ ಕಸೂತಿಯ ಕಡೆಗೆ ನೋಡುತ್ತ ) ಹೂಂ. ಕೋಸಲೇಂದ್ರ : ( ಗಾಬರಿಯಾಗಿ ಮೃಣಾಲಿನಿಯ ಎದುರಿಗೆ ನಿಂತು ದಿಟ್ಟಿಸಿ ನೋಡುತ್ತ) ಇದೇನು, ಮೃಣಾಲಿನಿ ! ಹಾಂ ! ಹೂಂ! ಎಂದಿಷ್ಟ ಮೇಲೆಯೇ ಸಾಗಿಸುತ್ತಿದ್ದೀ ! ಮೈ ಯಲ್ಲಿ ಚೆನ್ನಾಗಿದೆಯ ? ಮೃಣಾಲಿನಿ : ಹೂಂ. ಕೋಸಲೇಂದ್ರ : ( ಗಾಬರಿಯಿಂದ ಆಕೆಯ ಪಕ್ಕದಲ್ಲಿ ಕುಳಿತು ) ಇಲ್ಲ, ನಿನ್ನ ಮೈ ಯಲ್ಲಿ ಸರಿಯಿಲ್ಲ. ಇಲ್ಲದಿದ್ದರೆ ನೀನು ಹೀಗೆ ಹೋಂಗೊಡುವದು ಸಾಧ್ಯವೇ ಇಲ್ಲ. ಡಾಕ್ಟರರನ್ನು ಕರೆಕಳಿಸುತ್ತೇನೆ. ( ಏಳುತ್ತಾನೆ. ) ಮೃಣಾಲಿನಿ : ಏನೂ ಇಲ್ಲ, ಕುಳಿತುಕೋ, ಕೋಸಲೇಂದ್ರ, ಉ ...ಶ್ ! ಅ೦ ! ಕೋಸಲೇಂದ್ರ : ( ಗಾಬರಿಯಿಂದ ) ಇದೇನು, ಮೃಣಾಲಿನಿ ! ಎನೋ ಆಗಿದೆ ! ಓಂಪ್ರಕಾಶ. ( ಏಳುತ್ತಾನೆ. ) ಮೃಣಾಲಿನಿ : ( ವ್ಯಥೆಯಲ್ಲಿಯೂ ತುಸು ನಕ್ಕು ) ಏನೂ ಇಲ್ಲ, ಕೋಸಲೇಂದ್ರ ಕುಳಿತುಕೊ, ಕುಳಿತುಕೊಂಡರೆ ಹೇಳುತ್ತೇನೆ. ಕೋಸಲೇಂದ್ರ : ( ಕುಳಿತು ಮೃಣಾಲಿನಿಯ ಕೈಹಿಡಿದು ) ಹೇಳು ಹಾಗಾದರೆ. ಮೃಣಾಲಿನಿ: ವಾಂತಿಯಾಗುವ ಹಾಗಾಗಿ ಕೈ ಕಾಲು ಹರಿಯುತ್ತವೆ. ಕೋಸಲೇಂದ್ರ: ( ಗಾಬರಿಯಿಂದ ಎದ್ದು ) ಪಿತ್ತವಾಗಿರಬೇಕು. ಈಗ ಡಾಕ್ಟ ರೆಡೆಗೆ........ ಮೃಣಾಲನಿ : ( ತುಸು ನಕ್ಕು ಕೈ ಹಿಡಿದು ಕೋಸಲೇಂದ್ರನನ್ನು ಪಕ್ಕದಲ್ಲಿ ಕೂಡಿಸುತ್ತ ) ಡಾಕ್ಟರರು ಮನೆಗೆ ಬರುವ ಆವಶ್ಯಕತೆಯಿಲ್ಲ, ಕೋಸಲೇಂದ್ರ.