ಪುಟ:Yugaantara - Gokaak.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಗಳ ನಂತರ ಆಗುವದಕ್ಕಿಂತ ರುಕ್ಕಿಣಿದೇವಿಯವರ ಸಲುವಾಗಿ ಈಗ ಆಗಿ ಬಿಡಲಿ ಎಂದು ನಾನು ಹೇಳಿದ್ದು ನಿಜ, ಆದರೆ ಅದರಿಂದ ನಿನಗೇನು ಆತಂಕ ? ಸಾರ್ವಜನಿಕ ಜೀವನದಿಂದ ನಿಸರ್ಗವೇ ಕೆಲವು ತಿಂಗಳು ರಜೆ ಕೊಟ್ಟಿದ್ದಕ್ಕೆ ನೀನು ಆನಂದಪಡಬೇಕು. ನೀನು ಕೋಸಲೇಂದ್ರನಾಗಿ ನಾನೇ ಮೃಣಾಲಿನಿಯಾಗಿದ್ದರೆ ಆಯುಷ್ಯದಲ್ಲಿ ನಾವು ಲೆಕ್ಕ ಹಾಕಿದ್ದ ಈ ಎರಡು ದೊಡ್ಡ ರಜೆಗಳನ್ನು ನಾನು ಸಂತೋಷದಿಂದ ಸ್ವಾಗತಿಸುತ್ತಿದ್ದೆ. ಮೃಣಾಲಿನಿ: ಹಾಗಾದರೆ ನನಗೊಂದು ಬಯಕೆಯಾಗಿದೆ, ಕೋಸಲೇಂದ್ರ ! ನೀನೇ ಮೃಣಾಲಿನಿಯಾಗು, ನಾನು ಕೋಸಲೇಂದ್ರನಾಗುತ್ತೇನೆ. ಈ ಎಲ್ಲ ಭಾರವನ್ನು ನಿನ್ನ ಮೇಲೆ ಹಾಕಿ ನಿಶ್ಚಿಂತಳಾಗಿರುತ್ತೇನೆ. ಕೋಸಲೇಂದ್ರ : ( ನಗುತ್ತ ) ಹಾಗೆ ನಾವಿಬ್ಬರೂ ಅದಲುಬದಲಾಗದಿದ್ದರೆ ನಮ್ಮ ಪ್ರೀತಿ ಎಲ್ಲಿ ಕೂಡುತ್ತಿತ್ತು, ಮೃಣಾಲಿನಿ. ನಿನ್ನ ರಕ್ತ- ಮಾಂಸ ಬುದ್ದಿ -ಹೃದಯಗಳ ಭಾಗವಾಗಿ ಮುತ್ತಿನಂಥ ಒಬ್ಬ ಮಗನನ್ನು ಬೆಳೆಸಿ ಅವನ ಬುದ್ದಿ - ಒಲವುಗಳನ್ನು ತೆರೆದು ದೇಶಕ್ಕೆ ಅವನನ್ನು ಕಾಣಿಕೆಯಾಗಿ ಕೊಡುವದೆಂದರೆ ಕಡಿಮೆಯ ಸೇವೆಯೇನು ? ಮಾತೆಯಾಗುವದೆಂದರೆ, ಪೆನ್ಶನ್ ತೆಗೆದುಕೊಂಡಂತೆ ಎಂದು ನೀನೇಕೆ ತಿಳಿಯುತ್ತೆ ! ಮೃಣಾಲಿನಿ : ( ಪುಲಕಿತಳಾಗಿ) ಇದನ್ನು ಒಪ್ಪುತ್ತೇನೆ, ಕೋಸಲೇಂದ್ರ, ಒಮ್ಮೊಮ್ಮೆ ಹೀಗೆಯೇ ಧೇನಿಸುತ್ತ ಕುಳಿತಾಗ, ಅಣುವೊಂದು ಪಿಂಡವಾಗಿ ಒಂದು ಮೊಂಡ ಶಿಲೆಯ ಮೇಲೆ ಒಡಮೂಡಿದ ಮೂರ್ತಿಯಂತೆ ಆ ಸಿಂಡವೇ ಒಂದು ಮಗುವಾಗಿ ಮಾನವ ಪರಿಪೂರ್ಣ ವಿಕಸನವನ್ನೆಲ್ಲ ಪಡೆ ಯುವದೆಂದರೆ, ಅದೊಂದು ಮಹಾದ್ಭುತವಾಗಿ ಕಾಣುತ್ತದೆ. ಈ ಅದ್ಭುತದ ಪ್ರಯೋಗ ನಡೆದಿರುವ ಪ್ರಯೋಗಶಾಲೆ ನಾನು .........ಆದರೆ, ಕೋಸ ಲೇಂದ್ರ ! ನಿನಗೆ ಪುತ್ರೋತ್ಸವವಾಗುವದೆಂದೇ ನೀನು ನಿರ್ಧರಿಸಿದಂತೆ ಕಾಣುತ್ತದೆ. ಮುತ್ತಿನಂತಹ ಮಗ, ಮಗ, ಎಂದು ಕನವರಿಸುತ್ತಿ, ಹುಟ್ಟಿದ ಮಗು ಹವಳದಂಥ ಮಗಳಾದರೇನು ಮಾಡುತ್ತೀ, ಕೋಸಲೇಂದ್ರ : ನನ್ನಲ್ಲಿ ಅಂಥ ಪಕ್ಷಪಾತವೇನೂ ಇಲ್ಲ, ಮೃಣಾಲಿನಿ. . ಮಗಳು ಹುಟ್ಟಿದರೆ " ನಾನು ಫೇಡೆ ಹಂಚುತ್ತೇನೆ. ಮಗ ಹುಟ್ಟಿದರೆ