ಬಾಳ ನಿಯಮ/ಬಾಳ ನಿಯಮ

ವಿಕಿಸೋರ್ಸ್ದಿಂದ

ಬಾಳ ನಿಯಮ  (1957) 
ಜಾಕ್ ಲಂಡನ್, translated by ಡಿ. ವಿ. ರಾಘವೇಂದ್ರ
ಬಾಳ ನಿಯಮ

ಮೈಸೂರು: ಭಾರತೀ ಪ್ರಕಾಶನ pages –-೯

ಬಾಳ ನಿಯಮ[ಸಂಪಾದಿಸಿ]

ಮುದುಕ ಕಾಸ್‍ಕೂಶ್ ಅತಿಯಾಶೆಯಿಂದ ಕಿವಿಗೊಟ್ಟು ಆಲಿಸಿದ ಆತನ ದೃಷ್ಟಿ ಮಬ್ಬಾಗಿ ಬಹಳ ಕಾಲವಾಗಿದ್ದರೂ, ಕಿವಿಗಳು ಇನ್ನೂ ಚುರುಕಾಗಿದ್ದುವು. ನೆರಿಗಟ್ಟ ಸುಕ್ಕಾಗಿದ್ದ ಹಣೆಯ ಹಿಂದೆ ಇದ್ದ ಆತನ ಬುದ್ಧಿಶಕ್ತಿ ಇನ್ನೂ ಸತ್ವಪೂರ್ಣವಾಗಿತ್ತು. ಎಷ್ಟು ಸಣ್ಣ ಸಾದರೂ ಅದರಲ್ಲಿ ನಾಟುತಿತ್ತು; ಆದರೆ ಅದು ಪ್ರಾಪಂಚಿಕ ವಿಷಯಗಳಿಂದ ವಿಮುಖವಾಗಿತ್ತು.

ಅಗೋ, ಅವಳೇ ಸಿತಕಮತೋಹ; ಹಿಡಿಶಾಪಹಾಕುವವಳಂತೆ ಚೀರುತ್ತಾ ನಾಯಿಗಳನ್ನು ಒಂದೇ ಸಮನೆ ಬಡಿಯುತ್ತಾ ಸಜ್ಜುಗೊಳಿಸುತ್ತಿದ್ದಾಳೆ. ಅವಳು ಮುದುಕನ ಮೊಮ್ಮಗಳು. ಹಿಮಪ್ರದೇಶದಲ್ಲಿ ಯಾವ ಸಹಾಯವೂ ಇಲ್ಲದೆ ಹತಾಶನಾಗಿದ್ದ ಅಜ್ಜನ ಬಗ್ಗೆ ಯೋಚಿಸುವುದಕ್ಕೂ ಅವಳಿಗೆ ಸಮಯವಿರಲಿಲ್ಲ. ಶಿಬಿರವನ್ನು ಕೀಳಬೇಕಾಗಿತ್ತು. ಬಹುದೂರದ ಪ್ರಯಾಣಕ್ಕೆ ಕಾಲ ಹೆಚ್ಚಿರಲಿಲ್ಲ. ಮುಂದಿನ ಜೀವನದ ಕಾರ್ಯಕ್ರಮ ಅವಳನ್ನು ಸೆಳೆಯುತ್ತಿತ್ತು. ಅವಳನ್ನು ಆಹ್ವಾನಿಸುತ್ತಿದ್ದುದು ಜೀವನ, ಸಾವಲ್ಲ. ಮುದುಕನಾದರೋ ಸಾವಿನ ಹತ್ತಿರ ಸರಿಯುತ್ತಿದ್ದನು.

ಯೋಚನೆಯಿಂದ ಮುದುಕನಿಗೆ ಫಕ್ಕನೆ ಗಾಬರಿಯಾಯಿತು.ವಾಗಿದ್ದ ಕೈಯನ್ನು ಮುಂದೆ ಚಾಚಿದನು. ನಡುಗುತ್ತಿದ್ದಂತೆಯೇ ಪಕ್ಕದಲ್ಲಿದ್ದ ಸೌದೆಯ ರಾಶಿಯ ಮೇಲೆ ಕೈಯಾಡಿಸಿದನು. ಪಕ್ಕದಲ್ಲಿದ್ದ ಸೌದೆ ಅವನಿಗೆ ಸ್ವಲ್ಪ ಸಮಾಧಾನ ತಂದಿತು. ಮತ್ತೆ ತನ್ನ ಕೈಗಳನ್ನು ಹಳೆಯದಾಗಿದ್ದ ದುಪಟಿಯಲ್ಲಿ ಮುಚ್ಚಿಕೊಂಡು ಆಲಿಸುತ್ತಾ ಕುಳಿತನು.

ನಾಯಕನ ನೆಲೆ ಮುರಿದಂತಾಗಿ, ಮುಂದೆ ಸಾಗಿಸುವ ಏರ್ಪಾಟನ್ನು ಚರ್ಮದ ಚಟಪಟ ಶಬ್ದದಿಂದಲೇ ತಿಳಿಯಬಹುದಾಗಿತ್ತು, ಮುದುಕನ ಮಗನೇ ತಂಡದ ನಾಯಕನು. ಅವನೂ ಬಲಿಷ್ಠ, ನಿಸ್ಸಿಮ ಬೇಟೆಗಾರ, ಹೆಂಗಸರು ಸಾಮಾನು ಸಾಗಿಸಲು ಒದ್ದಾಡುತ್ತಿದ್ದಾಗ, ನಾಯಕನು ಅವರನ್ನು ಚಡಪಡಿಸುತ್ತಿದ್ದ ಕೂಗು ಕೇಳಿಬರುತ್ತಿತ್ತು. ವೃದ್ಧ ಕಾಸ್‌ಕೂಶ್ ಕಿವಿ ನಿಮಿರಿಸಿ ಆಲಿಸಿದನು....ಹೌದು ; ಇದೇ ಕಡೆಯ ಸಲ ಮಗನ ಧ್ವನಿಯನ್ನು ಕೇಳುವುದು. ಆಗಲೇ ಗೀಹ್, ಟಸ್ಕನ್ ಬಂಡಿಗಳು ಹೊರಟವು ! ಮತ್ತೆ ಏಳು, ಎಂಟು, ಒಂಬತ್ತು; ಕೊನೆಯದು ಮಾತ್ರ ಇನ್ನೂ ನಿಂತಿದೆ. ಅಲ್ಲಿ ! ಸಾಮಾನು ಗಳನ್ನು ತುಂಬುತ್ತಿರುವಾಗ ಬೇಟಿಗಾರರು ಗೊಣಗುತ್ತಿದ್ದಾರೆ. ಆ ಸದ್ದು ತನಗೆ ಕೇಳಿಸುತ್ತಿದೆ. ಮಗುವೊಂದು ಬಿಕ್ಕಿ ಅಳುತ್ತಿದೆ. ತಾಯಿ ಮೆಲುದನಿಯಲ್ಲಿ ಸಮಾಧಾನ ಮಾಡುತ್ತಿದ್ದಾಳೆ. ಅಷ್ಟೇನೂ ದೃಢಕಾಯವಲ್ಲದ. ಪೀಡಿಸುತ್ತಿರುವ ಆ ಚಿಕ್ಕ ಮಗು ಕೂ-ಟೀ ಇರಬೇಕು. ಅದು ಬೇಗನೆ ಸಾಯುವ ಸ್ಥಿತಿಯಲ್ಲಿದೆ. ಸತ್ತರೇನಂತೆ? ಹೆಪ್ಪುಗಟ್ಟದ ಜೌಗುಪ್ರದೇಶದಲ್ಲೇ ಗೋರಿಮಾಡಿ ದೇಹ ತೋಳಗಳಿಗೆ ಸಿಗದಂತೆ ಕಲ್ಲು ಹೇರಬಹುದು. ಅಷ್ಟೇ ಜನ ಮಾಡುವ ಕೆಲಸ. ಆದರೇನಂತೆ? ಕೆಲವು ವರ್ಷಗಳಲ್ಲೇ, ಈಗ ಹೊಟ್ಟೆ ತುಂಬಿರುವನರು ಹಸಿದವರಾಗಿ ಅಲೆಯದೆ ಇರುತ್ತಾರೆಯೇ? ಕಡೆಗಂತೂ ಸದಾ ಹೆಸಿದಿರುವ ಮತ್ತು ಹಸಿವಿನ ಪರಮಾವಧಿಯನ್ನು ಮುಟ್ಟಿರುವ ಮೃತ್ಯು ಕಾದೇ ಇರುತ್ತದೆ.

ಏನಿರಬಹುದು? ಹೌದು; ಜನ ಸ್ಲೆಜ್‌ ಗಾಡಿಗಳನ್ನು ಓಡಿಸುತ್ತಿದ್ದಾರೆ.

ಸಾರಥಿ ಕಡಿವಾಣವನ್ನು ಬಿಗಿದೆಳೆಯುತಿದ್ದಾನೆ.. ಮುಂದೆ ಅಂಥ ಶಬ್ದ ಸೇಳುವ ಸಂಭವ ಇಲ್ಲದುದರಿಂದ, ಮುದುಕ ಗಮನವಿಟ್ಟು ಆಲಿಸಿದನು.... ನಾಯಿಗಳು ಹಲ್ಲು ಕಿರಿಯುತ್ತ ಗುರ್ರೆನ್ನುತಿದ್ದವು. ಮತ್ತೆ ಕುಂಯ್‌ಗುಟ್ಟುವ ಅಳುವಿನ ರಾಗ. ಅವುಗಳಿಗೆ ಕೆಲಸವೆಂದರೆ ಸಂಚಾರನೆಂದರೆ ಅಷ್ಟು ದ್ವೇಷ! ಒಂದೊಂದಾಗಿಯೂ ಸಿಧಾನವಾಗಿಯೂ ಬಂಡಿಗಳು ನಿಶ್ಶಬ್ದ ಪ್ರಪಂಚದೆಡೆ ನಡೆದವು. ತನ್ನ ಜೀವನದಿಂದ ಅವು ಬೇರೆಯಾದವು. ಈಗ ಕೊನೆಯ ಮನೋವೇಧಕ ಘಳಿಗೆಯನ್ನು ಏಕಾಂತದಲ್ಲಿ ಕಳೆಯಬೇಕಾಗಿದೆ. ಇಲ್ಲ; ಪಾದರಕ್ಷೆಯೊಂದು ಮಂಜಿನ ನೆಲನನ್ನು ತುಳಿಯುತ್ತಿದೆ. ಅಲ್ಲವೇ ?...ಮನುಷ್ಯನೊಬ್ಬ ಹತ್ತಿರ ಬಂದು ನಿಂತನು. ಅವನು ನಿಧಾನವಾಗಿ ಮುದುಕನ ತಲೆಯಮೇಲೆ ಕೈಯಿಟ್ಟು ನೇವರಿಸಿದನು....ತನ್ನ ಮಗ ಎಷ್ಟು ಒಳ್ಳೆಯವನಾಗಿದ್ದಾನೆ! ತನಗೆ ತಿಳಿದಂತೆ, ಗುಂಪನ್ನು ಬಿಟ್ಟು ವೃದ್ಧ ತಂದಡೆಗಾಗಿ ನಿಂತ ಮಕ್ಕಳು ವಿರಳ. ತನಗೆ ದೊರೆತಂಥ ಸುಯೋಗ ಹಿಂದಿನವರಿಗಿಲ್ಲ.

ಮುದುಕನ ವಿಚಾರಶಕ್ತಿ ಭೂತಕಾಲದ ನೆನಪನ್ನು ತಂದುಕೊಳ್ಳುತ್ತಿತ್ತು. ಮಗನ ಧ್ವನಿಯನ್ನು ಕೇಳಿ ಮುದುಕ ಎಚ್ಚತ್ತು.

"ನೀನು ಚೆನ್ನಾಗಿದ್ದೀಯಾ?"

"ಹೂಂ; ಚೆನ್ನಾಗಿದ್ದೇನೆ" ಎಂದು ಮುದುಕ ಉತ್ತರಕೊಟ್ಟನು.

"ಕಟ್ಟಿಗೆಯು ನಿನ್ನ ಬಳಿಯಿದೆ. ಬೆಂಕಿ ಚೆನ್ನಾಗಿ ಉರಿಯುತ್ತದೆ. ಮುಂಜಾನೆ ಮಬ್ಬಾಗಿದೆ, ಚಳಿ ಪ್ರಾರಂಭವಾಗಿದೆ. ಸ್ವಲ್ಪ ಹೊತ್ತಿನಲ್ಲೇ ಮಂಜು ಬೀಳುವ ಸಂಭವವುಂಟು....ಹೌದು ; ಈಗಲೂ ಬೀಳುತ್ತಿದೆ." "ನಿಜ ; ಈಗಲೂ ಮಂಜು ಬೀಳುತ್ತಿದೆ" ಎಂದು ಕಾಸ್ಕೂಶ್.

ಮಗ ಹೇಳಿದನು-"ಗುಂಪು ಆತುರದಿಂದ ಹೊರಟಿತು. ಅವರ ಸಾಮಾನಿನ ಹೊರೆ ವಿಪರೀತವಾಗಿದೆ. ಎಲ್ಲರೂ ಹಸಿವಿನಿಂದ ಕಂಗೆಟ್ಟಿದ್ದಾರೆ. ದಾರಿ ಬಹಳ ದೂರವಾದುದರಿಂದ ಅವರು ವೇಗವಾಗಿ ನಡೆಯುತ್ತಿದ್ದಾರೆ. ನಾನು ಈಗ ಹೊರಡುತ್ತೇನೆ. ಬರಲೇ ?"

"ಒಳ್ಳೆಯದು ; ನನ್ನ ಸ್ಥಿತಿಯಂತೂ ಗೊತ್ತಿದೆ. ಕಡೆಯ ವರ್ಷದ ಹಣ್ಣೆಲೆ ಯಂತೆ ಕೊಂಬೆಗೆ ಸ್ವಲ್ಪದರಲ್ಲಿ ಅಂಟಿಕೊಂಡಿದ್ದೇನೆ. ಮೊವಲ ಉಸಿರಿನ ಗಾಳಿಗೇ ಬೀಳುವವನಿದ್ದೇನೆ. ನನ್ನ ಧನಿಯೋ ಮುದುಕಿಯ ಧ್ವನಿಯಂತಿದೆ. ಕಣ್ಣುಗಳಿಗೆ ದಾರಿಯು ಕಾಣದಾಗಿದೆ. ಕಾಲುಗಳು ಭಾರದಿಂದ ಕುಸಿಯು ತಿವೆ. ನಾನು ಬಹಳ ಬಳಲಿದ್ದೇನೆ. ಒಳ್ಳೇದು ಹೋಗಿ ಬಾ."

ಮುದುಕ ತೃಪ್ತಿಯಿಂದ ತಲೆತಗ್ಗಿಸಿ ಕುಳಿತನು. ಹಿಮದ ದಾರಿಯಲ್ಲಿ ಹೆಜ್ಜೆಯ ಸಪ್ಪಳ ಕ್ರಮೇಣ ದೂರ ದೂರವಾಗಿ ಕೇಳಿಸಿತು. ಇನ್ನು ತನ್ನ ಮಗ ನನ್ನು ಕರೆಯಲು ಅಸಾಧ್ಯವೆಂದು ತಿಳಿಯುವ ತನಕ ಕಾಸ್‌ ಕೂಶ್ ಹಾಗೆಯೆ ತಲೆತ ಗ್ಗಿಸಿದ್ದನು. ಆಮೇಲೆ ಅತ್ಯಾತುರದಿಂದ ಕಟ್ಟಿಗೆಯ ಕಡೆ ಕೈ ಚಾಚಿದನು. ಆ ಕಟ್ಟಿಗೆಯ ಹೊರೆಯೊಂದೇ ತನಗೂ, ತನಗಾಗಿ ಬಾಯಿತೆರೆದು ಕುಳಿತಿರುವ ನಿತ್ಯ ತೆಗೂ ಮಧ್ಯೆ ನಿಂತಹಾಗಿತ್ತು....ಹೌದು ; ತನ್ನ ಜೀವನವು ಒಂದು ಹಿಡಿ ಕಟ್ಟಿಗೆಯ ಪ್ರಮಾಣಕ್ಕೆ ಸರಿಹೊಂದುತ್ತದೆ. ಬೆಂಕಿ ಒಂದೊಂದು ತುಂಡು ಗಳನ್ನು ಆವರಿಸುತ್ತ ಬರುವಂತೆ ನಾವು ಕೂಡ ತನ್ನನ್ನು ನಿಧಾನವಾಗಿ ಅಪ್ಪಳಿ ಸುತ್ತದೆ. ಕೊನೆಯ ತುಂಡು ಉರಿದು ಬೂದಿಯಾದಾಗ, ಹಿಮು ನುಗ್ಗುತ್ತದೆ, ಅಲ್ಲಿಗೆ ಜೀವನದ ಅಂತ್ಯ, ಸಾವಿನ ಜಯ. ಅಂದರೆ ಮೊದಲು ತನ್ನ ಕಾಲು, ಆಮೇಲೆ ಕೈಗಳು ; ಒಂದು ಕಡೆಯಿಂದ ಜಡತ್ವ ಚೇತನವನ್ನು ನುಂಗುತ್ತಾ ದೇಹಾದ್ಯಂತ ಪಸರಿಸುತ್ತದೆ. ತಲೆ ಮೊಣಕಾಲ ಮೇಲೆ ಬಿದ್ದಾಗ ಸಂಪೂರ್ಣ ವಿರಾಮ, ಪ್ರತಿಯೊಬ್ಬರೂ ಸಾಯಲೇಬೇಕಿರುವಾಗ ಇದಕ್ಕಿಂತಲೂ ಸುಲಭ ಸಾಧ್ಯ ಯಾವುದಿದೆ ?

ಅವನೇನೂ ಗೊಣಗುಟ್ಟಲಿಲ್ಲ. ಬಾಳ ನಿಯಮಕ್ಕೆ ತಲೆಬಾಗಲೇ ಬೇಕಲ್ಲವೇ! ಪ್ರಕೃತಿಯ ಮಡಿಲಲ್ಲಿ ಹುಟ್ಟಿ, ಪ್ರಕೃತಿಗಾಗಿಯೆ ಬೆಳೆದವನಿಗೆ ಅದರ ನಿಯಮ ಹೊಸದಲ್ಲ. ಆ ನಿಸರ್ಗ ನಿಯಮ ಎಲ್ಲಕ್ಕೂ ಅನ್ವಯವಾಗುವುದು. ಅದು ವ್ಯಕ್ತಿಯ ಹಿತವನ್ನು ಗಮನಿಸುವುದಿಲ್ಲ. ವ್ಯಕ್ತಿ ಒಂದು ಸಲಕರಣೆ ಮಾತ್ರ. ಅದರ ಆಸಕ್ತಿಯಿರುವುದು ಸಮಷ್ಟಿಯಲ್ಲಿ ; ಅಂದರೆ ವಿವಿಧ ಗುಂಪುಗಳ ಸೃಷ್ಟಿಯಲ್ಲಿ....ಇಂಥ ಆಳವಾದ ಭಾವನೆ ವೃದ್ಧ ಕಾನ್ ಕೂಶನ ಸಾಮಾನ್ಯ ಬುದ್ಧಿಗೆ ಸಿಲುಕಿದ್ದು ತುಂಬ ಸಾಧನೆಯ ಫಲವೇ ಸರಿ. ಆದ್ದರಿಂದಲೇ ತಕ್ಷಣ ಗ್ರಹಿಸಲು ಶಕ್ಯವಾಯಿತು....ನಿಯಮದ ಸೂತ್ರವನ್ನು ಎಲ್ಲೆಡೆಯಲ್ಲೂ ಕಾಣಬಹುದು. ಸಸ್ಯದ ಬೆಳವಣಿಗೆ, ಕಣ್ಣು ಕುಕ್ಕುವಂತೆ ಹಸಿರು ಬಣ್ಣ ತಾಳುವ ಮೊಗ್ಗು, ಕಡೆಗೆ ಹಳದಿಯಾಗಿ ಬೀಳುವ ಎಲೆ ಈ ಸಾಮಾನ್ಯ ಚರಿತ್ರೆಯಲ್ಲೇ ಬಾಳಿನ ನಿಯಮವಿದೆ. ಆದರೆ ಪ್ರತಿ ವ್ಯಕ್ತಿಗೂ ನಿಸರ್ಗದತ್ತವಾದ ಕರ್ತವ್ಯವೊಂದಿದೆ. ಅದನ್ನು ನೆರವೇರಿಸಲಿ, ಬಿಡಲಿ, ಮನುಷ್ಯ ಸಾಯುವುದಂತು ಖಂಡಿತ. ಒಟ್ಟಿನಲ್ಲಿ ನಿಸರ್ಗ ನಿಯಮ ಯಾರನ್ನೂ ಲಕ್ಷಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ವಿಧೇಯರಾದವರು ಬೇಕಾದಷ್ಟು ಮಂದಿಯಿದ್ದಾರೆ. ಇದರ ವ್ಯಾಪ್ತಿ ಎಲ್ಲಿಯ ತನಕ ಹೋಗಿದೆಯೆಂದರೆ ವಿಧೇಯನಾದವನ ಸ್ಥಾನ ಗೌಣವಾಗಿ, 'ವಿಧೇಯತೆ' ಎಂಬ ಶಕ್ತಿಯೇ ಜಗತ್ತಿನ ಸೂತ್ರವನ್ನು ಹಿಡಿಯ ಬಲ್ಲ ಜೀವಾಳವಾಗಿದೆ. ತಾನು ಚಿಕ್ಕವನಾಗಿದ್ದಾಗ ವೃದ್ಧರನ್ನು ಹೇಗೆ ನೋಡಿದ್ದನೋ, ಹಾಗೆಯೇ ಆ ವೃದ್ಧರೂ ಕೂಡ ತಮ್ಮ ಬಾಲ್ಯದಲ್ಲಿ ಹಿಂದಿನವರನ್ನು ಕಂಡಿರಲೇಬೇಕು. ಆದ್ದರಿಂದ ಅನೇಕರ ವಿಧೇಯತೆಯಿಂದ ಒಂದು ತಂಡ ಇಲ್ಲಿಯತನಕ ಬದುಕಿದೆ ; ಮುಂದೆಯೂ ಬದುಕುತ್ತದೆ. ಆಗಿಹೋದ ವ್ಯಕ್ತಿ ಎಲ್ಲಿ ಯಾವ ವಿಶ್ರಾಂತಿ ಸ್ಥಳವನ್ನು ಸೇರಿದ? ಎಂಬ ಪ್ರಶ್ನೆಯನ್ನು ಮಾತ್ರ ನಮ್ಮ ಜ್ಞಾಪಕ ಶಕ್ತಿಯಿಂದ ದೂರವಿಡಬೇಕು. ಅವರ ಗಣನೆ ಬೇಡ ; ಅವರ ಚರಿತ್ರೆಯನ್ನು ಇತಿಹಾಸದ ಉಪಕಥೆಯೆಂದು ಭಾವಿಸೋಣ. ಬೇಸಿಗೆಯ ದಿನಗಳಲ್ಲಿ ತಾನಾಗಿಯೆ ಹೊರಟುಹೋಗುವ ಮೋಡಗಳಂತೆ ಅವರು ಕಣ್ಮರೆಯಾದರು. ಹಾಗೆಯೆ ಪ್ರಾಸಂಗಿಕವಾಗಿ ಬಂದಿರುವ ತಾನು ಕೂಡ ಈ ಜಗತ್ತಿನಿಂದ ಜಾರಿಹೋಗಲೇ ಬೇಕು. ಅದರಿಂದ ನಿಸರ್ಗಕ್ಕೆ ಯಾವ ದುಃಖವೂ ಇಲ್ಲ. ನಿಸರ್ಗದ ಮುಖ ಎರಡು ಬಗೆಯಾಗಿದೆ. ಪೀಳಿಗೆಯ ಬೆಳವಣಿಗೆ ಒಂದಾದರೆ, ವ್ಯಕ್ತಿಗಳು ಸಾಯಲೇಬೇಕೆಂಬ ನಿಯಮ ಮತ್ತೊಂದು. ಒಂದು ಕರ್ತವ್ಯ ಪ್ರಚೋದಕವಾಗಿದ್ದರೆ, ಮತ್ತೊಂದು ಶಾಸನ ರೂಪವಾಗಿದೆ. ಉದಾಹರಣೆಗೆ, ಒಬ್ಬ ಹುಡುಗಿ ಇದ್ದಾಳೆನ್ನಿ, ಅವಳಿಗೆ ವಯಸ್ಸು ಬಂದಂತೆ ಸುಂದರಿಯೂ, ದೃಢಕಾಯಳೂ, ಮೋಹಕ ನೇತ್ರವುಳ್ಳವಳೂ ದಿಟ್ಟತನದಿಂದ ನಡೆಯುವವಳೂ ಆಗುತ್ತಾಳೆ. ಎಲ್ಲರ ಕಣ್ಣನ್ನೂ ಆನಂದಸಾಗರದಲ್ಲಿ ಮುಳುಗಿ ಸುತ್ತಾಳೆ. ಅಷ್ಟು ಮಾತ್ರಕ್ಕೆ ಅವಳ ಜೀವನದ ಕರ್ತವ್ಯ ಮುಗಿಯಿತೇ ? ಇಲ್ಲ; ತರುಣಿಯ ವಿವಿಧ ಹಾವಭಾವಗಳು ಎಷ್ಟೋ ಪುರುಷರ ಮನೋರಂಗದಲ್ಲಿ ಆಂದೋಳನವನ್ನು ಎಬ್ಬಿಸುತ್ತವೆ. ದಿನೇ ದಿನೇ ರೂಪಲಾವಣ್ಯಗಳು ಹೆಚ್ಚಿದಂತೆ, ಕಡೆಗೊಬ್ಬ ಬೇಟೆಗಾರ ಮೋಹಗೊಂಡು ಅವಳನ್ನು ಅಡಿಗೆಗೋ, ಮನೆಯ ಕೆಲಸಕ್ಕೋ ಆಹ್ವಾನಿಸುತ್ತಾನೆ. ಅರ್ಥಾತ್ ಅವಳೇ ಮಕ್ಕಳ ತಾಯಿಯಾಗುತ್ತಾಳೆ. ತಾಯ್ತನ ಹೆಚ್ಚಿದಂತೆ ಅವಳ ದಿವ್ಯನೋಟ ಮಂಕಾಗುತ್ತದೆ. ಹೆಜ್ಜೆ ಹಾಕುವುದೂ ಕಷ್ಟವಾಗುತ್ತದೆ. ಚಿಕ್ಕಮಕ್ಕಳು ಮಾತ್ರ ತಾಯಿಯ ಬಾಡಿ ಹೋದ ಗಲ್ಲಗಳನ್ನು ಸವರಿ ಆನಂದಪಡುತ್ತಾರೆ. ಆಗ ಅವಳು ಮುದುಕಿಯಂತೆ

ಬೆಂಕಿಯ ಪಕ್ಕದಲ್ಲಿ ಕುಳಿತುಬಿಡುತ್ತಾಳೆ. ಇಲ್ಲಿಗೆ ನಿಸರ್ಗದ ಪ್ರಧಮ ಹೊಣೆ ಕರ್ತವ್ಯಪಾಲನೆ-ಮುಗಿಯಿತು. ಸ್ವಲ್ಪ ಕಾಲಾನಂತರ ಕಾಮದ ಹೊಡೆತದಿಂದಲೋ, ಅಥವಾ ಬೇಟೆಗಾರರ ದೂರ ಸಂಚಾರದ ನೆವದಿಂದಲೋ ಆಕೆ ಒಬ್ಬಂಟಿಗಳಾಗಿ ಉಳಿಯುತ್ತಾಳೆ. ತನ್ನಂತೆ ಅವಳಿಗೂ ಹಿಮಪ್ರದೇಶದಲ್ಲಿ ಕಟ್ಟಿಗೆಯ ಹೊರೆಯೊಂದು ಸಿಗಬಹುದು. ಅದೇ ನಿಸರ್ಗದ ಎರಡನೆಯ ಶಾಸನ.

ಮುದುಕ ಮತ್ತೊಂದು ಕಟ್ಟಿಗೆಯನ್ನು ನಿಧಾನವಾಗಿ ಬೆಂಕಿಗೆ ಹಾಕಿದನು. ಮತ್ತೆ ಯೋಚಿಸಲಾರಂಭಿಸಿದನು....

ಮರದ ಈ ನಿಸರ್ಗ ನಿಯಮ ಎಲ್ಲ ಕಡೆಗೂ ಅನ್ವಯಿಸುತ್ತದೆ; ಅಲ್ಲವೇ ? ಮೊದಲ ಮಂಜಿನ ಧಾಳಿಗೇ ಸೊಳ್ಳೆಗಳು ಆಹುತಿಯಾಗುತ್ತವೆ. ಮೇಲಿನ ಇಣಚಿ ಜಿಗಿದಾಡಿ ಸಾವಿನ ಕಂದರಕ್ಕೆ ಜಾರಿ ಬೀಳುತ್ತದೆ. ಮೊಲಕ್ಕೆ ವಯಸ್ಸಾದಂತೆ ಮೈ ಭಾರವೇ ಜಾಸ್ತಿಯಾಗಿ ಶತ್ರುಗಳನ್ನು ಎದುರಿಸಲು ಅಸಾಧ್ಯವಾಗುತ್ತದೆ; ಮುಖ ಕಂಗೆಟ್ಟು ಕಡೆಗೆ ನಾಯಿಯ ಪಾಲಾಗುವುದರಲ್ಲಿ ಸಂದೇಹವಿಲ್ಲ. ಅಷ್ಟೇಕೆ ? ತಾನೇ ತನ್ನ ತಂದೆಗೆ ಚಳಿಗಾಲದಲ್ಲಿ ಕೈಕೊಟ್ಟು ಬರಲಿಲ್ಲವೇ! ಆ ಚಳಿಗಾಲದಲ್ಲಿ ತತ್ರೋಪದೇಶಮಾಡಲು ಒಬ್ಬ ಮಿಷನರಿಯೂ ಇದ್ದ. ಅವನ ಆಸ್ತಿಯೆಂದರೆ ಪುಸ್ತಕಗಳು ಮತ್ತು ಔಷಧಿಯ ಪೆಟ್ಟಿಗೆ.... ಕಾಸ್ ಕೂಶ್ ಎಷ್ಟೋ ವೇಳೆ ಆ ಪೆಟ್ಟಿಗೆಯೊಳಗಿದ್ದ ತಿಂಡಿಯ ನೆನಪಿಂದ ತುಟಿ ಸವರಿಕೊಳ್ಳುತ್ತಿದ್ದ. ಈಗ ಅವನ ಬಾಯಲ್ಲಿ ಸವಿ ತರುವ ನೀರಿಲ್ಲ.... ಮಿಷನರಿಯ

  • ವೇದನ ವಿನಾಶಿನಿ' ಔಷಧ ಚೆನ್ನಾಗಿತ್ತು. ಆದರೆ ಅವನಿಂದ ಹಸಿವೆಂಬ

ವೇದನೆ ವಿನಾಶವಾಗದೆ, ಗುಂಪಿನಲ್ಲಿ ಅವನೊಬ್ಬ ಕಂಟಕನಾಗಿದ್ದನು. ಏಕೆಂದರೆ ಗುಂಪಿನವರಿಗೆ ಯಾವ ಆಹಾರವನ್ನೂ ಅವನು ಕೊಡುತ್ತಿರಲಿಲ್ಲ. ಮಾತ್ರ ಬೇಟೆಗಾರರ ಗೊಣಗಾಟ ಲಕ್ಷಿಸದೆ ಪುಷ್ಕಳವಾಗಿ ಹೊಡೆಯುತ್ತಿದ್ದನು. ಕಡೆಗೇನಾಯಿತು ? ಆತ ಮೇಯೋ ನದಿಯ ದಂಡೆಯಮೇಲೆ ಸತ್ತು ಅಡಗಿದಾಗ, ಅವನ ಎಲುಬಿನ ಊಟಕ್ಕಾಗಿ ನಾಯಿಗಳು ಕಲ್ಲನ್ನಗೆದು ಬಡಿದಾಡಲಿಲ್ಲವೇ ?.... ತಾನು ಕಾಸ್‌ಕಾಶ್ ಮತ್ತೊಂದು ಕಟ್ಟಿಗೆಯನ್ನು ಬೆಂಕಿಗೆ ಹಾಕಿ ಬಹು ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಲು ಪ್ರಯಾಸಪಟ್ಟನು....ಹೌದು; ಆಗ ಭಯಂಕರ ಕ್ಷಾಮದ ದಿನಗಳು. ಹಸಿದ ಹೊಟ್ಟೆಯ ವೃದ್ಧರು ಬೆಂಕಿಯ ಸುತ್ತ ಕುಳಿತು ವಿಚಿತ್ರ ಹರಟೆ ಹೊಡೆಯುತ್ತಿದ್ದ ಕಾಲ. ಯುಕಾನ್ ನದಿ ಮೂರು ತಿಂಗಳು ಹೆಪ್ಪುಗಟ್ಟಿದರೆ ಮಾಡುವುದೇನು? ಆ ಬರಗಾಲದಲ್ಲೇ ತನ್ನ ತಾಯಿ ತೀರಿಹೋದದ್ದು. ಬೇಸಗೆಯಲ್ಲಿ ನೀರೇನೋ ಬಂತು. ಆದರೆ ಸಾಮಾನ್ ಮಾನು ಒಂದೂ ಸಿಗಲಿಲ್ಲ. ಹಾಗೆಯೇ ಚಳಿಗಾಲದಲ್ಲಿ ಒಂದು ಪ್ರಾಣಿಯ ಸುಳಿವೂ ಇಲ್ಲ. ನಾಯಿಯಂತೂ ಎಲುಬಿನ ಹಂದರವಾಗಿತ್ತು. ನಿಶಾಚರ ರಾಗಿ ಹೆಂಗಸರು, ಮಕ್ಕಳು, ದೊಡ್ಡವರು ಎಲ್ಲರೂ ನರಳಾಡಿದರು. ನವ ಋತು ವಿನ ಸೂರ್ಯ ಮೂಡಿದಾಗ ನೋಡುವ ಭಾಗ್ಯ ಯಾವ ಜೀವಂತ ವ್ಯಕ್ತಿಗೂ ಇರಲಿಲ್ಲ. ಅದಲ್ಲವೇ ಹೆಸರನ್ನು ಸಾರ್ಥಕ ಪಡಿಸಿದ ಕ್ಷಾಮ !....

ಸುಭಿಕ್ಷದ ಕಾಲವನ್ನೂ ಕಾಸ್‌ಕೂಶ್ ಕಂಡಿದ್ದಾನೆ....ಆಗ ಮಾಂಸ ರಾಶಿಗೆ ಮಿತಿಯೇ ಇರಲಿಲ್ಲವಂತೆ. ನಾಯಿಗಳು ತಿಂದು ತೇಗಿ ಕೊಬ್ಬಿದ್ದವು ; ಬೇಟೆಯನ್ನು ಸಂಪೂರ್ಣಗೊಳಿಸದೆ ಹಿಂದಿರುಗಿ ಬರುತಿದ್ದವು. ಹೆಂಗಸರ ಭಾಗ್ಯವಿರಬೇಕು ! ಮನೆ ತುಂಬ ಗಂಡು ಮಕ್ಕಳ, ಬೆಳೆಯುತ್ತಿತ್ತು. ಬೊಜ್ಜು ಮೈ ಎಲ್ಲರಿಗೂ ಬರುತಿತ್ತು. ಹೆಣ್ಣು ಮಕ್ಕಳ ಸಂತಾನ ಆದ್ದರಿಂದಲೇ ಜನ ಹಿಂದಿನ ಹಗೆಗಳನ್ನು ನೆನೆಸಿಕೊಂಡು, ನದಿಯಾಚೆ ಹೋಗಿ, ತಾವಾಗಿಯೇ ಕಾಲುಕೆರೆದು ಹೋರಾಡುತ್ತಿದ್ದರು. ಚಳಿ ಹೋಗಲಾಡಿಸಲು ಸತ್ತವರ ಉರಿಯೇ ಸಾಕಾಗಿತ್ತು. ಆ ಸುಭಿಕ್ಷದ ಕಾಲದಲ್ಲಿ, ತಾನು ಬಾಲಕನಾಗಿದ್ದಾಗ ನಡೆದ ಒಂದು ಪ್ರಸಂಗ ಜ್ಞಾಪಕವಿದೆ. ಏಕಾಂಗಿಯಾದ ಹಿಮಪಶುವನ್ನು ತೋಳಗಳ ಹಿಂಡು ಹಿಡಿದೆಳೆದಿತ್ತು. ಆ ದೃಶ್ಯವಂತೂ ಆಶ್ಚರ್ಯಕರವಾಗಿತ್ತು. ಆಗ ಜಿಂಗ್-ಹಾ ಕೂಡ ತನ್ನ ಜೊತೆಯಲ್ಲಿದ್ದ ಹೌದು ; ಜಿಂಗ್-ಹಾನ ನೆನಪಾಗುತ್ತೆ. ಮುಂದೆ ಅತ್ಯುತ್ತಮ ಬೇಟೆಗಾರನಾದವನು ಅವನೇ, ಪಾಪ ; ಕಡೆಗೆ ಯೂಕಾನ್ ಕೊರಕಲಲ್ಲಿ. ಬಿದ್ದು ಸತ್ತನು. ಆದಾದ ಒಂದು ತಿಂಗಳ ಮೇಲೆ ಮರಗಟ್ಟಿದ ದೇಹ ಪತ್ತೆಯಾಯಿತು.

ಹಿಮಪಶುವಿನ ಮಾತಿಗೆ ಬರೋಣ. ಇಬ್ಬರೂ ಆ ದಿನ ಬೇಟೆಗೆ ಹೊರಟಿದ್ದೆವು. ಒಂದು ಕೊರಕಲಲ್ಲಿ ಹಿಮಪಶುವೊಂದು ಆಗತಾನೆ ದಾಟಿ ಹೋದಂಥ ಹೆಜ್ಜೆ ಗುರುತು ಕಂಡಿತು. ಅದರ ಹಿಂದೆಯೇ ಅನೇಕ ತೋಳಗಳೂ ಹೋದಂತೆ ಚಿನ್ನೆಗಳಿದ್ದವು. ಆ ಸುಳಿವನ್ನು ತಕ್ಷಣ ಗ್ರಹಿಸಿದ ________________

ಬಾಳ ನಿಯಮ ವ ಜಿಂಗ್-ಹಾ, “ ನೋಡು ; ಯಾವುದೋ ವೃದ್ದ ಹಿಮಪಶುವೊಂದನ್ನು ಗುಂಪಿ ನಿಂದ ಬೇರ್ಪಡಿಸಿ, ತೋಳಗಳ ಹಿಂಡು ಹಿಂಬಾಲಿಸಿದೆ. ಈ ತೋಳಗಳು ಆ ಪ್ರಾಣಿಯನ್ನು ಎಂದಿಗೂ ಬಿಟ್ಟಿರಲಾರವು.” ಎಂದನು. ನಿಜ ; ಅವು ರಾತ್ರಿ ಹಗಲೆನ್ನದೆ ಆ ಪ್ರಾಣಿಯನ್ನು ಸುತ್ತುಗಟ್ಟಿ, ಗುರುಗುಟ್ಟುತ್ತಾ, ಮುಖ ಮುರಿಯುವಂತೆ ಫಕ್ಕನೇ ಕಚ್ಚುತ್ತಾ, ಕಡೆಯ ತನಕ ಗಲಾಟೆಯೆಬ್ಬಿಸಿರು ವುದರಲ್ಲಿ ಸಂದೇಹವಿಲ್ಲ. ತನಗೂ ಜಿಂಗ್-ಹಾನಿಗೂ ಬೇಟೆಯ ಶೋಕಿ ಹೆಚ್ಚಿತು ! ಆ ಪ್ರಾಣಿಯ ಅಂತ್ಯವನ್ನು ನೋಡಲೇಬೇಕು. ಉತ್ಸಾಹದಿಂದ ಅದೇ ದಾರಿಯಲ್ಲಿ ಇಬ್ಬರೂ ಮುಂದುವರಿದೆವು. ಹಿಮಮಾರ್ಗ ವಿಶಾಲ ವಾಗಿಯೇ ಇತ್ತು. ತನ್ನಂಥ ಅನುಭವವಿಲ್ಲದವನೂ ಕೂಡ ಕಣ್ಣು ಮುಚ್ಚಿ ಹೋಗಬಹುದಾಗಿತ್ತು. ಪ್ರತಿ ಹೆಜ್ಜೆಗೂ ದುರಂತ ನಾಟಕವನ್ನು ನೋಡುವ ಕಾತುರ ಹೆಚ್ಚಾಯಿತು. ಕಡೆಗೆ ಹಿಮಪಶು ಒಂದೆಡೆ ನಿಂತಿರಬಹುದಾದ ಸ್ಥಳವನ್ನು ಪತ್ತೆ ಹಚ್ಚಿದೆವು. ಸುಮಾರು ಮನುಷ್ಯ ದೇಹದ ಮೂರರಷ್ಟು ಮಂಜಿನ ಕಣಗಳು ಎಲ್ಲ ದಿಕ್ಕಿಗೂ ಎಸೆಯಲ್ಪಟ್ಟಿದ್ದವು. ಮಧ್ಯಭಾಗದಲ್ಲಿ ಹೆಚ್ಚಿನ ಹೋರಾಟವಾದಂತೆ ಭಾಸವಾಯಿತು. ಸುತ್ತಲೂ ತೋಳಗಳ ಹೆಜ್ಜೆ ಗುರುತು ಸ್ಪಷ್ಟವಾಗಿರಲಿಲ್ಲ. ಮೃತ್ಯು ಕಾಳಗವನ್ನು ಸ್ನೇಹಿತರಿಗೆ ವಹಿಸಿ, ಕೆಲವು ತೋಳಗಳು ಮಂಜಿನ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆದಿರಬೇಕು ! ಹಿಮದಲ್ಲಿ ಆಗತಾನೆ ಬರೆಯಲ್ಪಟ್ಟಂತೆ ಅವುಗಳ ಪೂರ್ಣಾಕೃತಿಯ ಗುರುತು ಎದ್ದು ಕಾಣುತಿತ್ತು. ಮೋಸಕ್ಕೊಳಗಾದ ಪಶು ವಿಭ್ರಾಂತನಾಗಿ ಹುಚ್ಚು ಮನಸ್ಸಿನ ಬಲದಿಂದ ಒಂದು ತೋಳವನ್ನು ತುಳಿದು ಕೊಂದುಹಾಕಿತ್ತು. ಸಾಕ್ಷಿಯಾಗಿ ಅದರ ಕೆಲವು ಮೂಳೆಗಳು ಸಿಕ್ಕಿದ್ದವು. ಮುಂದೆ ಎರಡನೆಯ ಸ್ಥಳದಲ್ಲಿ ನಿಂತಾಗ, ಆ ಪ್ರಾಣಿ ಕೆಳಗೆ ಬಿದ್ದರೂ ಮೇಲೆದ್ದು ಭಯಂಕರ ಹೋರಾಟ ನಡೆಸಿ ಜಯಗಳಿಸಿತ್ತು. ತಾನು ಹಿಂದೆ ಹೇಳಿದಂತೆ ಕರ್ತವ್ಯ ಪಾಲನೆ-ನಿಸರ್ಗ ನಿಯಮದ ಮೊದಲ ಸೂತ್ರ ಹಿಮ ಪಶುವಿನಿಂದಾಗಿತ್ತು. ಪೀಳಿಗೆಯ ಬೆಳವಣಿಗೆಯಾಗಿತ್ತು. ಆದರೂ ಜೀವ ವೆಂಬುದು ಅದಕ್ಕೆ ಅತಿ ಪ್ರಿಯ ವಸ್ತುವಾಗಿತ್ತು. ಕೆಳಗೆ ಬಿದ್ದ ವೃದ್ದ ಪ್ರಾಣಿ ಮತ್ತೆ ಸ್ವತಂತ್ರವಾಗಲು ಪ್ರಯತ್ನ ಪಟ್ಟಿದ್ದು ಆಶ್ಚರ್ಯಜನಕವೆಂದು ಜಿಂಗ್-ಹಾ ಮತ್ತು ಇತರ ಬೇಟೆಗಾರರು ಹೇಳಿದರು. ಸ್ವಲ್ಪ ದೂರದಲ್ಲೇ ಹಿಮಪಶು ದಿಣ್ಣೆಯ ಮೇಲೇರಿ ಹಿಂದಿನಿಂದ ತೋಳಗಳನ್ನು ಕೊರಕಲಲ್ಲಿ ನೂಕಿತ್ತು. ಗುದ್ದಾಟ ಬಲು ಜೋರಾಗಿ ನಡೆದಿರಬೇಕು. ಆದ್ದರಿಂದಲೇ ಮಾರ್ಗ ರಕ್ತ ________________

ಬಾಳ ನಿಯಮ ಮಯವಾಗಿ ಪಶುವಿನ ಹೆಜ್ಜೆ ಗುರುತು ಮುಚ್ಚಿ ಹೋಗಿತ್ತು. ನಿಜ; ಆಗಲೆ ಹೋರಾಟದ ಶಬ್ದಗಳು ಕೇಳಿಸಿದವು ! ತಾವು ಸೇರುವಷ್ಟರಲ್ಲೇ ಬೊಗಳಾಟದ ಎಲ್ಲೆ ಮಾರಿಹೋಗಿ, ಸಾವಿಗೆ ಸಮಾನವಾದ ಮಾಂಸದ ಹೋರಾಟ ನಡೆದಿತ್ತು. ತೋಳಗಳು ಪ್ರಾಣಿಯನ್ನು ಸುತ್ತುಗಟ್ಟಿದ ದೃಶ್ಯ ನೋಡಲು ಮರೆಯಿಂದ ಮೆಲ್ಲಗೆ ಹೊರಬಂದೆವು. ಇಂಥ ಯೌವನದ ಅನೇಕ ಸಾಹಸಗಳು ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿವೆ. ತಂಡದ ಮುಖ್ಯಸ್ಥನಾಗಿ ತಾನು ಮಹತ್ಕಾರ್ಯಗಳನ್ನು ಮಾಡ ಲಿಲ್ಲವೇ ? ತನ್ನ ಹೆಸರೆಂದರೆ ಹಗೆಗಳಿಗೆ ಎಲ್ಲಿಲ್ಲದ ಭಯವಿತ್ತು. ಒಂದು ಸಲ ಬಹಿರಂಗವಾಗಿಯೇ ಬಿಳಿಯವನೊಬ್ಬನನ್ನು ಕತ್ತಿಯಿಂದ ತಿವಿದು ಕೊಂದಿ ದೈನೆ.... ಆ ಮುದುಕ ಯೌವನದ ಕನಸು ಕಾಣುತ್ತಿದ್ದಂತೆ, ಬೆಂಕಿ ಆರುತ್ತಾ ಬಂತು. ಹಿಮದ ಗಾಳಿ ಹೆಚ್ಚಿತು. ಮತ್ತೆರಡು ಕಟ್ಟಿಗೆಯನ್ನೊಡ್ಡಿ, ತನ್ನ ಜೀವದ ಹಿಡಿತ ಎಷ್ಟರಮಟ್ಟಿಗೆ ಇನ್ನೂ ನಿಂತಿದೆ ! ಎಂದು ಯೋಚಿಸಿದನು....ಸಿತ್ಕಮ-ತೋಹಾ ಅಜ್ಜಿನ ಬಗ್ಗೆ ಸ್ವಲ್ಪವಾದರೂ ಗಮನವಿಟ್ಟಿದ್ದರೆ, ಜಾಸ್ತಿ ಕಟ್ಟಿಗೆ ಯನ್ನಿಟ್ಟು ತನ್ನ ಜೀವದ ಘಳಿಗೆಗಳನ್ನು ವಿಸ್ತರಿಸಬಹುದಾಗಿತ್ತು! ಆದರೆ ಅವಳು ಮೊದಲಿನಿಂದಲೂ ಯಾವ ಜವಾಬ್ದಾರಿಯನ್ನೂ ವಹಿಸಿರಲಿಲ್ಲ. ಬೀವರ್-ಜಿಂಗ್-ಹಾನ ಮೊಮ್ಮಗ ಅವಳ ಮೇಲೆ ಯಾವತ್ತು ದೃಷ್ಟಿ ಬೀರಿ ದನೋ, ಅಂದಿನಿಂದ ಅವಳಿಗೆ ಹಿರಿಯರನ್ನು ಕಂಡರೆ ಲಕ್ಷ್ಯವೇ ಇಲ್ಲ. ಅವಳ ಸ್ನೇಕೆ ಬೈಯಬೇಕು ? ಹೊಸ ಪ್ರಾಯದಲ್ಲಿ ತಾನು ಕೂಡ ಅವಳಂತೆಯೇ ಪ್ರೇಮಜಾಲದಲ್ಲಿ ಸಿಲುಕಿರಲಿಲ್ಲವೇ ?.... ಸ್ವಲ್ಪ ಹೊತ್ತು ಮೌನದಿಂದಿದ್ದು ಮತ್ತೆ ಯೋಚಿಸಿದನು. ಮಗನ ನೆನ ಪಾಯಿತು....ಅವನ ಅಂತಃಕರಣ ಕರಗಿ ನೀರಾಗಿ ತನ್ನನ್ನು ಕರೆದೊಯ್ಯಲು ನಾಯಿಗಳ ಜೊತೆ ಪುನಃ ಬರುವನೋ ಏನೊ! ಸುಭಿಕ್ಷದ ನಾಡಿಗೆ ಬಾ, ತಂಡ ದವರೊಡನೆ ಸೇರಿಕೊ ಎನ್ನದಿರುವನೇ ?.... ಸುತ್ತಲೂ ನಿಶ್ಯಬ್ದವಾಗಿರುವಾಗ ಮುದುಕನ ಕಿವಿ ಮಾತ್ರ ಯಾವುದೋ ಸವಿನುಡಿಯನ್ನು ಕೇಳಲು ಹಾತೊರೆಯಿತು. ಆದರೆ ಯಾವ ಸದ್ದೂ ಇಲ್ಲ.... ತನ್ನ ಉಸಿರೇ ದೊಡ್ಡದಾಗಿದೆ.... ಮೈ ಚಳಿಯಿಂದ ಒಂದೇ ಸಮನೆ ನಡುಗಿತು.... ಹಿಂದೆ ಪರಿಚಯವಿದ್ದಂಥ ಆರ್ತಧ್ವನಿಯೊಂದು ಹತ್ತಿರದಲ್ಲೇ ಕೇಳಿಸಿದಂತಾ ಯಿತು....ಇದೇನು ಕನಸೇ ? ಕಣ್ಣು ಕುಕ್ಕುವಂಥ ದೃಶ್ಯ ! ಬಿದ್ದು ಓಡುತ್ತಿರುವ ಅದೇ ಹಿಮಪಶು ; ಹರಿತಾದ ಕೋಡು, ಮುರಿದ ಪಕ್ಕೆ, ರಕ್ತಮಯ ಪಾರ್ಶ್ವ, ಕಿತ್ತಾಟದಲ್ಲಿ ಜಲ್ಲರಿಯಾಡಿದ ಚರ್ಮ ; ಹಿಂದೆ ಉತ್ಸಾಹದಿಂದ ನುಗ್ಗುತ್ತಿರುವ ತೋಳಗಳ ಹಿಂಡು ಶುಭ್ರ ಹಿಮದ ಸುತ್ತಲೂ ನಿಷ್ಕರುಣೆಯ ಕತ್ತಲೆ ಆವರಿಸಿತು. ಚಳಿಗಾಳಿಯ ಹೊಡೆತದಿಂದ ಮುದುಕನ ಆತ್ಮ ಚೇತರಿಸಿಕೊಂಡು ಹೋರಾಟಕ್ಕೆ ನಿಂತಿತು. ಅವನಿಗೆ ಆಯುಧವಿಲ್ಲವೇ ? ತಕ್ಷಣ ಉರಿಯುತ್ತಿದ್ದ ಕಟ್ಟಿಗೆಯನ್ನೇ ತೆಗೆದನು. ಆ ಕ್ಷಣ ತೋಳವೊಂದು ಹಿಂಜರಿದು ಕೂಗಿತು. ಮನುಷ್ಯನ ಹೆದರಿಕೆಯಿರಬೇಕು. ಆದರೆ ಹಿಂದೆಯೇ ಇದ್ದ ತೋಳಗಳ ಹಿಂಡು ಮುದುಕನ ಸುತ್ತಲೂ ನಿಂತಿತು. ಪಾವ; ಮುದುಕ ಒಬ್ಬಂಟಿಗ ನಾಗಿದ್ದರೂ ಹೆದರದೆ ಕೈ ಬೀಸಿದನು. ತೋಳಗಳ ಕೂಗಾಟ ಹೆಚ್ಚತೊಡಗಿತು. ಅವು ಚೆದರದೆ ಒಂದೇ ಕಡೆ ಸುತ್ತಗಟ್ಟಿದವು. ಒಂದೊಂದಾಗಿ ಮುದುಕನ ಮೇಲೆ ಬೀಳಲು ಹವಣಿಸುತ್ತಿದ್ದವು.

"ನಾನೇಕೆ ಇನ್ನೂ ಜೀವ ಹಿಡಿದಿರಬೇಕು?" ಎನ್ನುತ್ತಾ ಕಾಸ್‌ಕೂಶ್ ಕೈಯಲ್ಲಿದ್ದ ಕೊಳ್ಳಿಯನ್ನು ಬಿನಾಡಿದನು. ಕೊಳ್ಳಿ ಹಿಮದ ಮೇಲೆ ಬಿದ್ದು ಹಿಸ್ ಎನ್ನುತ್ತಾ ತಣ್ಣಗಾಯಿತು. ವೃದ್ಧ ಹಿಮಪಶುವಿನ ಕಡೆಯ ದೃಶ್ಯ ಕಣ್ಣಿಗೆ ಕಟ್ಟಿದಂತಾಯಿತು. ಅಂತೂ ಕಾನ್ ಕೂಶ್ ಭಾರ ಹೊತ್ತ ತಲೆಯನ್ನು ಆಗಲೇ ಜಡವಾಗಿದ್ದ ಕಾಲುಗಳ ಮೇಲೆಸೆದನು. ಅದರಲ್ಲಿ ತಪ್ಪೇನು? ಅದು ಬಾಳ ನಿಯಮ ತಾನೆ?....