ಬ್ರಹ್ಮ ವಿಷ್ಣು ರುದ್ರ

ವಿಕಿಸೋರ್ಸ್ದಿಂದ



Pages   (key to Page Status)   


ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನೆಂಬ ಪಂಚಾಧಿದೇವತೆಗಳಿಲ್ಲದಂದು
ಈ ಪಂಚೈವರ ಲಯ ಗಮನಂಗಳಿಗೆ ಕಾರಣವಾದ ಶಿವಶಕ್ತಿಗಳಿಲ್ಲದಂದು
ಈ ಶಿವ ಶಕ್ತಿಗಳಿಗೆ ಕಾರಣವಾದ ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣವೆಂಬ ನಿಃಕಲತತ್ವವಿಲ್ಲದಂದು
ನೀನು ಶೂನ್ಯನಾಗಿರ್ದೆಯಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.