ವಿಷಯಕ್ಕೆ ಹೋಗು

ಮಂಕುತಿಮ್ಮನ ಕಗ್ಗ-ಕಂತು ೧೧.

ವಿಕಿಸೋರ್ಸ್ದಿಂದ

<ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ; :ಅರ್ಥಸಹಿತ

[ಸಂಪಾದಿಸಿ]

ಪದ್ಯ– ೩೦೧

[ಸಂಪಾದಿಸಿ]
ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ
ಹುಲ್ಲು ಬಯಲೊಂದೆಡೆಯಿನೊಂದಕ್ಕೆ ನೆಗೆದು
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೋ
ಡೆಲ್ಲಿಯೋ ಸುಖ ನಿನಗೆ – ಮಂಕುತಿಮ್ಮ
  • ಚೆನ್ನಲ್ಲಿ= ಚೆನ್ನ + ಅಲ್ಲಿ// ಚೆನ್ನೆಲ್ಲೊ= ಚೆನ್ನ + ಎಲ್ಲೋ// ಚೆನ್ನೆನುತೆಣಿಸಿ= ಚೆನ್ನ+ಎನುತ +ಎಣಿಸಿ// ಬಯಲೊಂದೆಡೆಯಿನೊಂದಕ್ಕೆ= ಬಯಲ+ಒಂದೆಡೆಯಿಂದ+ಇನ್ನೊಂದಕ್ಕೆ/ಪೋಲ್ತೋಡೆಲ್ಲಿಯೋ = ಪೋಲ್ತೊಡೆ + ಎಲ್ಲಿಯೋ
  • ಪೋಲ್ತೊಡೆ = ಹೋಲಿಸಿದಂತೆ, ಹಾಗೆ.
  • ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ ‘ ಒಳ್ಳೆಯ ಹುಲ್ಲು ಇಲ್ಲಿದೆ, ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿ, ಎಲ್ಲ ಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಿನ್ನ ಪರಿಸ್ತಿತಿ. ಈ ವಸ್ತುವಿನಲ್ಲಿ ಸುಖವಿದೆ, ಆ ವಸ್ತುವಿನಲ್ಲಿ ಆನಂದವಿದೆ ಅಥವಾ ನಾ ಹುಡುಕುವ ಸುಖ ಮತ್ತು ಆನಂದ ಬೇರೆ ಯಾವ ವಸ್ತುವಿನಲ್ಲಿದೆಯೋ ಎಂದು ವಸ್ತುವಿನಿಂದ ವಸ್ತುವಿಗೆ ಮತ್ತು ವಿಷಯದಿಂದ ವಿಷಯಕ್ಕೆ ನೆಗೆ – ನೆಗೆದು ನೀ ದಣಿಯುತ್ತಿದ್ದೀಯಲ್ಲ, ನಿನಗಾವುದರೊಳಗೆ ಸುಖ ? ಎಂದು ಸುಖದಾಸೆಯ ಭ್ರಮೆಯಲ್ಲಿ ಸುತ್ತುವ ನಮ್ಮನ್ನು ಒಂದು ಪ್ರಶ್ನೆಯನ್ನು ಕೇಳಿದ್ದಾರೆ.

[]

-೦♦♦♣♣♣♣♣♣♣♣♣♣♣♣♦♦೦-

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.