ಮುನಿಯನ ಮಾದರಿ - ಕಾಲ್ಗೆಜ್ಜೆ ತಾಳಕೆ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಜಯಚಂದ್ರನ್ ಮತ್ತು ಎಸ್. ಜಾನಕಿ


ಗಂಡು
ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ - ೨
ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್
ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
ಹೆಣ್ಣು
ಮುದ್ದಾದ ರೂಪಕೆ, ಮನಸೆಳೆವ ನೋಟಕೆ - ೨
ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್
ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ

ಗಂಡು
ನಡೆವಾಗ ನಡು ಚೆನ್ನ ನಳಿನಾಕ್ಷಿಯೆ
ನಗುವಾಗ ಮೊಗ ಚೆನ್ನ ಮೀನಾಕ್ಷಿಯೆ | - ೨
ನೋಟ ಚೆನ್ನ, ಆಟ ಚೆನ್ನ, ನಿನ್ನ ಮನಸೆಲ್ಲ ಚಿನ್ನ
ಹೆಣ್ಣು
ನುಡಿಯೆಲ್ಲ ಸವಿಯಾದ ಜೇನಾಗಿದೆ
ಬದುಕೆಲ್ಲ ಜೊತೆಯಾಗೊ ಮನಸಾಗಿದೆ
ಇನ್ನು ನೀನೆ, ನನ್ನ ಪ್ರಾಣ, ಎಂದು ಬಿಡಲಾರೆ ನಿನ್ನ
ಗಂಡು
ನೀನು ನಾನು ಇನ್ನು ಮುಂದೆ ಎಂದು ಒಂದೆನೆ
ಹೆಣ್ಣು
ಮುದ್ದಾದ ರೂಪಕೆ, ಮನಸೆಳೆವ ನೋಟಕೆ
ಮರುಳಾಗಿ ಓಡಿ ಬಂದೆನೆ
ಗಂಡು
ಎದೆ ಝಲ್ ಝಲ್ ಝಲ್
ಹೆಣ್ಣು
ಮೈ ಝುಂ ಝುಂ ಝುಂ
ಇಬ್ಬರು
ಹೃದಯ ಢವ್ ಢವ್ ಎಂದು ಸೋತೆನೆ

ಹೆಣ್ಣು
ಬದುಕಲ್ಲಿ ಸುಖವನ್ನು ನೀ ತುಂಬಿದೆ
ನಿಜವಾದ ಆನಂದ ನನಗಾಗಿದೆ | - ೨
ಪ್ರೀತಿಯೇನು ಪ್ರೇಮಯೇನು ಕಂಡೆ ಸಂತೋಷವೇನು
ಗಂಡು
ಬರಿಮಾತು ನನಗೀಗ ಸಾಕಾಗಿದೆ
ಸಿಹಿಯಾಗಿ ಇನ್ನೊಂದು ಬೇಕಾಗಿದೆ
ನನ್ನ ಕೆನ್ನೆ ನಿನ್ನದೇನೆ, ಬೇಗ ಕೊಡಬಾರದೇನೆ
ಹೆಣ್ಣು
ಅಯ್ಯೊ ಚಿನ್ನ ಬಿಡು ನನ್ನ ಏಕೆ ಅವಸರ
ಗಂಡು
ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಮರುಳಾಗಿ ಓಡಿ ಬಂದೆನೆ
ಹೆಣ್ಣು
ಎದೆ ಝಲ್ ಝಲ್ ಝಲ್
ಗಂಡು
ಮೈ ಝುಂ ಝುಂ ಝುಂ
ಇಬ್ಬರು
ಹೃದಯ ಢವ್ ಢವ್ ಎಂದು ಸೋತೆನೆ