ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಗಂಗೆ1

ವಿಕಿಸೋರ್ಸ್ದಿಂದ

ಅಂತರಗಂಗೆ1[ಸಂಪಾದಿಸಿ]

ಹಿಂದೂ ಜನರಿಗೆ ಅತ್ಯಂತ ಪವಿತ್ರವಾದ ತೀರ್ಥಗಳಲ್ಲಿ ಒಂದು. ಈ ತೀರ್ಥ ಕೋಲಾರಕ್ಕೆ ಸಮೀಪದಲ್ಲಿರುವ ಶತಶೃಂಗಪರ್ವತದಲ್ಲಿದೆ. ಇಲ್ಲಿ ಸ್ನಾನಪುಜಾದಿಗಳು ಬಹಳ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ. ಬೆಂಗಳೂರು ಜಿಲ್ಲೆಯ ಕುದೂರಿನಲ್ಲಿಯೂ ಈ ಹೆಸರಿನ ಒಂದು ತೀರ್ಥವಿದೆ. ಸಮಗ್ರ ಭಾರತದಲ್ಲಿ ಇದೇ ಹೆಸರಿನ ಹಲವು ತೀರ್ಥಗಳನ್ನು ನಾವು ಕಾಣಬಹುದು: ಪಾತಾಳಗಂಗೆ, ಶಿವಗಂಗೆ, ಸಿದ್ಧಗಂಗೆ, ದೇವಗಂಗೆ ಮೊದಲಾದುವುಗಳು ಇದಕ್ಕೆ ಉದಾಹರಣೆಗಳು. ಅಂತರಗಂಗೆ ಎಂಬುದು ಇದೇ ವರ್ಗದ ಒಂದು ತೀರ್ಥ. (ಬಿ.ಎಸ್.)