ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂದಾನಿ, ವಿ.ಜಿ

ವಿಕಿಸೋರ್ಸ್ ಇಂದ
Jump to navigation Jump to search

ಅಂದಾನಿ, ವಿ.ಜಿ[ಸಂಪಾದಿಸಿ]

1947 ಹೆಸರಾಂತ ಚಿತ್ರಕಲಾವಿದ. ಗುಲ್ಬರ್ಗ ಜಿಲ್ಲೆ ಕೀರಣಗಿ ಗ್ರಾಮದಲ್ಲಿ ಜನಿಸಿದರು (1947). ಗುಲ್ಬರ್ಗದ ಆದರ್ಶ ಕಲಾಮಂದಿರದಿಂದ ಚಿತ್ರಕಲೆಯಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದರು (1969). ಬನಸ್ಥಲಿ ವಿದ್ಯಾಪೀಠದಲ್ಲಿ ಬಿsತ್ತಿಚಿತ್ರರಚನೆಯನ್ನು ಕುರಿತು ಅಧ್ಯಯನ ನಡೆಸಿದರು (1970). ಗುಲ್ಬರ್ಗದ ಐಡಿಯಲ್ ಕಾಲೇಜ್ ಆಫ್ ವಿಷುಯಲ್ ಆಟ್ರ್್ಸನ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯರಾಗಿ ಈಗ ಸೇವೆಸಲ್ಲಿಸಿದ್ದರು.


ಭಾರತದ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಇವರು ಕಲಾಪ್ರದರ್ಶನ ನಡೆಸಿದ್ದಾರೆ. ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಅನೇಕ ಕಲಾಶಿಬಿರಗಳಲ್ಲಿ ಪಾಲ್ಗೊಂಡಿದ್ದರು.

ಇವರಿಗೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ. ಅವುಗಳಲ್ಲಿ ಮುಖ್ಯವಾದವು: ಇಲಸ್ಟ್ರೇಟೆಡ್ ವೀಕ್ಲಿ ಪ್ರದರ್ಶನ ಪ್ರಶಸ್ತಿ (1963), ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಖಿಲ ಭಾರತ ಪ್ರದರ್ಶನ ಬಹುಮಾನ (1969), ಕರ್ನಾಟಕ ವಿಶ್ವವಿದ್ಯಾಲಯದ ಪ್ರದರ್ಶನ ಪ್ರಶಸ್ತಿ (1971), ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರದರ್ಶನ ಬಹುಮಾನ (1992), ಹೈದರಾಬಾದ್ ಆರ್ಟ್ ಸೊಸೈಟಿ ಪ್ರಶಸ್ತಿ (1985), ಕೇಂದ್ರ ಸರ್ಕಾರದ ಫೆಲೋಶಿಪ್ (1989), ರಾಷ್ಟ್ರೀಯ ಪ್ರಶಸ್ತಿ (1991), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1992), ಲಲಿತ ಕಲಾ ಅಕಾಡೆಮಿ ಪ್ರಶಸ್ತಿ (1993).

ಕಲೆಗೆ ಸಂಬಂದಿsಸಿದ ಅನೇಕ ಸಮಿತಿಗಳಲ್ಲಿ ಸದಸ್ಯರಾಗಿಯೂ ಇವರು ಸೇವೆಸಲ್ಲಿಸಿದ್ದಾರೆ.ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ,ಅನಂತರ ಅದರ ಅಧ್ಯಕ್ಷರಾಗಿ (1998-2001) ಸೇವೆಸಲ್ಲಿಸಿದ್ದಾರೆ. ಕೇಂದ್ರ ಲಲಿತ ಕಲಾ ಅಕಾಡಮಿಯ ಸದಸ್ಯರೂ ತೀರ್ಪುಗಾರರೂ ಆಗಿದ್ದರು (1988-92). ಸರ್ಕಾರದ ಹಾಗೂ ವಿಶ್ವವಿದ್ಯಾಲಯಗಳ ಅನೇಕ ಕಲಾ ಶೈಕ್ಷಣಿಕ ಮಂಡಳಿಗಳಲ್ಲಿಯೂ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಲಾಕೃತಿಗಳು ಭಾರತದ ಅನೇಕ ಪ್ರದರ್ಶನ ಭವನಗಳಲ್ಲಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ, ಕಲಾ ಪ್ರೇಮಿಗಳ ಮನೆಗಳಲ್ಲಿ ಮತ್ತು ವಿದೇಶಗಳಲ್ಲಿ ಸಂಗ್ರಹಗೊಂಡಿವೆ.