ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಕಿಲೀಸನ ಕಂಡರ

ವಿಕಿಸೋರ್ಸ್ದಿಂದ

ಅಕಿಲೀಸನ ಕಂಡರ

[ಸಂಪಾದಿಸಿ]

ಕಾಲಿನ ಹರಡಿನ ಹಿಂಗಡೆ ದಪ್ಪನಾಗಿರುವ ಬಲವಾದ ಕಂಡರ (ಟೆಂಡನ್). ಪಾದವನ್ನು ಒಳಮಡಿಸುವ, ಚಾಚುವ, ಕಣಕಾಲಿನ ಮೀನಖಂಡದ ಸ್ನಾಯುಗಳ ಕಂಡರವಾಗಿ ಹಿಮ್ಮಡಿಯ ಮೂಳೆಗೆ ಅಂಟಿದೆ. ರೂಪಕವಾಗಿ ಅಪಾಯ ಸ್ಥಾನ ಎಂಬರ್ಥದಲ್ಲಿ ಈ ಮಾತು ಬಳಕೆಗೆ ಬಂದಿದೆ.