ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ರಚಾರ

ವಿಕಿಸೋರ್ಸ್ದಿಂದ

ಅಗ್ರಚಾರ

 ಆತ್ಮರಕ್ಷಣೆಗಾಗಲಿ ಆಕ್ರಮಣಕ್ಕಾಗಲಿ ಸ್ವಂತ ಸೈನ್ಯಕ್ಕೆ ತಕ್ಕ ಕಾಲದಲ್ಲಿ ಉಪಯೋಗಕ್ಕೆ ಒದಗುವ ಹಾಗೆ ಶತ್ರುವಿನ ನೆಲೆ, ಸಂಖ್ಯಾಬಲ, ಚಲನವಲನ ಇತ್ಯಾದಿ ವಿಷಯಗಳನ್ನು ಕಂಡುಕೊಂಡು ಸಮಾಚಾರವನ್ನು ಸಂಗ್ರಹಿಸುವ ಸೈನಿಕನಿಗೆ ಸೈನಿಕಶಾಸ್ತ್ರದಲ್ಲಿ ಈ ಹೆಸರಿದೆ. ಆತ ಸೈನಿಕ ತಂಡದ ಅಥವಾ ಘಟನೆಯ ಒಂದು ಅಂಗ. ಬೇಹುಗಾರಿಕೆಯಲ್ಲಿ ವಿಶೇಷವಾದ ಶಿಕ್ಷಣವನ್ನು ಪಡೆದ ಕಾರಣ ಆತನನ್ನು ಶತ್ರುವಿನ ಸಮಾಚಾರ ಸಂಗ್ರಹಿಸುವ ಕಾಲಕ್ಕೆ ಆಯ್ದುಕೊಳ್ಳುತ್ತಾರೆ. ಅಗ್ರಚಾರ (ಸ್ಕೌಟ್) ಬಾಲಚಾರನಿಗಿಂತ (ಬಾಯ್ ಸ್ಕೌಟ್) ಭಿನ್ನ.                

 (ಎ.ಎನ್.ಎಸ್.ಎಂ.)