ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜಾಮಿಳ

ವಿಕಿಸೋರ್ಸ್ ಇಂದ
Jump to navigation Jump to search

ಅಜಾಮಿಳ

 ಕನ್ಯಾಕುಬ್ಜದ ಒಬ್ಬ ಬ್ರಾಹ್ಮಣ. ಶೂದ್ರಸ್ತ್ರೀಸಂಪರ್ಕ ಹೊಂದಿದ್ದು, ತಂದೆ-ತಾಯಿಯರನ್ನೂ, ಸಹಧರ್ಮಿಣಿಯನ್ನೂ ಪರಿತ್ಯಾಗ ಮಾಡಿ ಅನೇಕ ದುರಾಚಾರಗಳಿಂದ ಪತಿತನಾಗಿದ್ದ. ಸಾಯುವ ಕಾಲದಲ್ಲಿ ನಾರಾಯಣನೆಂಬ ತನ್ನ ಮಗನನ್ನು ಹೆಸರು ಹಿಡಿದು ಕೂಗಿ ಕರೆದುದರಿಂದ ಉಂಟಾದ ನಾರಾಯಣ ಸ್ಮರಣೆಯ ಮಹಿಮೆಯಿಂದ ದಿವ್ಯಗತಿಯನ್ನು ಪಡೆದ. ಭಾಗವತ ಸಂಪ್ರದಾಯದಲ್ಲಿ ಈ ಕಥೆಗೆ ಹೆಚ್ಚಿನ ಪ್ರಾಧಾನ್ಯವಿದೆ. ಹರಿದಾಸರು ತಮ್ಮ ಕೀರ್ತನೆಗಳನ್ನು ನಾಮಸ್ಮರಣೆಯ ಪ್ರಾಮುಖ್ಯವನ್ನು ಹೇಳುವಾಗ ಅಜಾಮಿಳ ಹೆಸರನ್ನೂ, ಕಥೆಯನ್ನೂ ಅನೇಕ ಕಡೆ ಬಳಸಿದ್ದಾರೆ.     

(ಜಿ.ಎಚ್.)