ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಥೀನ

ವಿಕಿಸೋರ್ಸ್ದಿಂದ

ಅಥೀನ

ಸುಮಾರು 2,300 ವರ್ಷಗಳ ಹಿಂದೆ ಗ್ರೀಸಿನ ದೊರೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಪಾರ್ಥೆನಾನ್ ಎಂಬ ಸುಂದರ ಅಮೃತಶಿಲೆಯ ಮಂದಿರದೊಳಗಿದ್ದ ಸ್ತ್ರೀ ದೇವತಾಮೂರ್ತಿ. ಒಲಿಂಪಸ್ಸಿನ ಅನುಗ್ರಹ ತೋರುವ ಈ ದೇವತೆ ವಿವೇಕದ, ಶಾಂತಿ-ಸಮಾಧಾನಗಳ ದ್ಯೋತಕಿ. ಕಲಾಪೋಷಕಿ. ಬಿರುಗಾಳಿ ಮುಂತಾದವುಗಳ ಮೇಲೆ ಆಧಿಪತ್ಯ ನಡೆಸುವವಳು. ಅಥೆನ್ಸಿನ ಪೋಷಕಿಯಾಗಿರುವ ಈ ಕನ್ನಿಕಾದೇವತೆ ಜûೂಸನ ಹಣೆಯಿಂದ ಜನಿಸಿದವಳು. ಸಾಮಾನ್ಯವಾಗಿ ಈಕೆಯ ತಲೆಯ ಮೇಲೆ ಒಂದು ಶಿರಸ್ತ್ರಾಣವಿದ್ದು ಮೆಡೂಸನ್ ತಲೆಯಿರುವ ಒಂದು ಗುರಾಣಿಯನ್ನು ಹಿಡಿದಿರುತ್ತಾಳೆ. ಈ ದೇವತೆಗೆ ಸಂಬಂಧಿಸಿದಂತೆ ಪ್ಯಾನೆಥೀನಿಯ ಎಂಬ ಹಬ್ಬವೂ ಜರುಗುತ್ತದೆ. ರೋಮನ್ನರ ಪ್ರe್ಞÁದೇವತೆ ಮಿನರ್ವಳ ಜೊತೆ ಈಕೆಯನ್ನೂ ಪೂಜಿಸುತ್ತಾರೆ. (ನೋಡಿ- ಪಾರ್ತೆನಾನ್)

(ಎಸ್.ಆರ್.ಪಿ.)