ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಂತಪುರ
ಗೋಚರ
ಅನಂತಪುರ ಆಂಧ್ರಪದೇಶದ ಒಂದು ಮುಖ್ಯಪಟ್ಟಣ. ಜಿಲ್ಲೆಗೂ ಅದೇ ಹೆಸರಿದೆ. ಬೆಂಗಳೂರು-ಗುಂತಕಲ್ ರೈಲುಮಾರ್ಗದಲ್ಲಿದೆ. ಜನಸಂಖ್ಯೆ 35,000 ವನ್ನು ಮೀರಿದೆ. ಇತಿಹಾಸದ ಪ್ರಕಾರ ಅನಂತಪುರವನ್ನು ವಿಜಯನಗರದ ಒಬ್ಬ ದಿವಾನ ತನ್ನ ಪತ್ನಿ ಆನಂದಳ e್ಞÁಪಕಾರ್ಥವಾಗಿ ಕಟ್ಟಿಸಿದನೆಂದು ತಿಳಿದು ಬರುತ್ತದೆ.
ಜಿಲ್ಲೆಯ ವಿಸ್ತೀರ್ಣ 7,384 ಚ.ಮೈ. ಜನಸಂಖ್ಯೆ 15 ಲಕ್ಷಕ್ಕಿಂತಲೂ ಹೆಚ್ಚು. ಇದು ಮೈಸೂರು ಪ್ರಸ್ಥಭೂಮಿಯ ಉತ್ತರಭಾಗದಲ್ಲಿದೆ. ಜಿಲ್ಲೆಯ ಪೂರ್ವದಲ್ಲಿ ಎರ್ರಕೊಂಡ ಎಂಬ ಬೆಟ್ಟಗಳಿವೆ. ಅನಂತಪುರ ಜಿಲ್ಲೆ ಅತ್ಯಂತ ಶುಷ್ಕಪ್ರದೇಶ. ಬಹುಭಾಗ ಕೆಂಪುಮಣ್ಣಿನಿಂದಲೂ ಬಂಜರುಗುಡ್ಡಗಳಿಂದಲೂ ಕೂಡಿದೆ. ನವಣೆ, ಸೆಜ್ಜೆ, ಕಾಳು ಮತ್ತು ದ್ವಿದಳ ಧಾನ್ಯಗಳು ಮುಖ್ಯ ಬೆಳೆಗಳು. ಹತ್ತಿ ಮತ್ತು ಬತ್ತವನ್ನು ಸ್ವಲ್ಪಭಾಗದಲ್ಲಿ ಮಾತ್ರ ಬೆಳೆಯುತ್ತಾರೆ. (ಎಂ.ಎಸ್.)