ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಿಮಿಷದೇವರು
ಗೋಚರ
ಅನಿಮಿಷದೇವರು
ಈತ ಬಿಜಾಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಪಟ್ಟದಕಲ್ಲಿನವ. ನಂದಿಕೇಶ್ವರನ ಶಿಷ್ಯ, ಅಲ್ಲಮಪ್ರಭುವಿನ ಗುರು. ಈತನ ತಪೋಭೂಮಿ ಶಿವಮೊಗ್ಗ ಜಿಲ್ಲೆಯ, ಷಿಕಾರಿಪುರ ತಾಲ್ಲೂಕಿನಲ್ಲಿ ಅನಿಮಿಷಯ್ಯನ ಕೊಪ್ಪಲು ಎಂದು ಪ್ರಸಿದ್ಧವಾಗಿದೆ. ರಾಜೇಂದ್ರ ಮನುರಾಜ ಎಂಬ ಹೆಸರುಗಳಿಂದ ಪ್ರಸಿದ್ಧನಾಗಿರುವ ಅನಿಮಿಷೇಂದ್ರನ ಬಗ್ಗೆ ಸು. 1560ರಲ್ಲಿ ಚಿತ್ರದುರ್ಗದಲ್ಲಿದ್ದ ಮುರುಘೀದೇಶಿಕನೆಂಬ ಕವಿ ಹಮ್ಮೀರ ಕಾವ್ಯ ಎಂಬ ಒಂದು ಚಂಪೂ ಗ್ರಂಥವನ್ನು ಬರೆದಿದ್ದಾನೆಂದು ಕವಿಚರಿತ್ರೆಯಲ್ಲಿ ಹೇಳಿದೆ. ಇವನೇ ಅನಿಮಿಷದೇವರೆಂಬ ಒಂದು ಊಹೆ ಇದೆ. (ಬಿ.ಎಸ್.)