ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಬುಲ್ ಫೈಜಿ

ವಿಕಿಸೋರ್ಸ್ದಿಂದ

ಅಬುಲ್ ಫೈಜಿ :- ಅಕ್ಬರನ ಆಸ್ಥಾನದಲ್ಲಿದ್ದ ಪ್ರಸಿದ್ಧ ಪರ್ಷಿಯನ್ ಕವಿ. ಕವಿಚಕ್ರವರ್ತಿ ಎಂಬ ಬಿರುದು ಇತ್ತು. ಅರಬ್ಬೀ ಸಾಹಿತ್ಯದಲ್ಲೂ ಈತನಿಗೆ ಆಳವಾದ ಅಭ್ಯಾಸವಿತ್ತು. ಆ ಜನ್ಮ ಕವಿಯಾಗಿದ್ದ ಇವನಿಗೆ ಪದ್ಯಕಲೆ, ಕವಿತಾಶಕ್ತಿಗಳು ಕರಗತವಾಗಿದ್ದುವು. ವೈದ್ಯಶಾಸ್ತ್ರ ಪರಿಚಯವೂ ಇದ್ದುದರಿಂದ ಬಡಬಗ್ಗರಿಗೆ ಔಷಧೋಪಚಾರವನ್ನು ಉಚಿತವಾಗಿ ನಡೆಸುತ್ತಿದ್ದ. ಇವನ ತಮ್ಮ ಪ್ರಸಿದ್ಧ ವಿದ್ವಾಂಸನಾದ ಅಬುಲ್ ಫಜಲ್.

ಪದ್ಯದಲ್ಲಿ ಈತ ಪವಿತ್ರ ಭಾವನೆಗಳನ್ನೂ ಉದಾತ್ತ ವಿಚಾರಗಳನ್ನೂ ತನ್ನ ಸ್ವತಂತ್ರ ಸುಂದರಶೈಲಿಯಲ್ಲಿ ಹೇಳಿದ್ದಾನೆ. ದೀನ್ ಇಲಾಹಿ ಎಂಬ ನೂತನ ಧರ್ಮದ ರಚನೆಯಲ್ಲಿ ಅಕ್ಬರನಿಗೆ ಸಹಾಯಕನಾದ. ಖುತ್ಬಾ ಎಂಬ ಪ್ರಾರ್ಥನೆಯನ್ನು ಫೈಜಿಯೇ ರಚಿಸಿದ. ಭಾಸ್ಕರಾಚಾರ್ಯ ಬರೆದ ಲೀಲಾವತಿ ಎಂಬ ಸಂಸ್ಕøತ ಗಣಿತಗ್ರಂಥವನ್ನೂ ಭಗವದ್ ಗೀತೆಯನ್ನೂ ಪಾರಸಿಭಾಷೆಗೆ ಈತ ಪರಿವರ್ತಿಸಿದುದು ಗಮನಾರ್ಹವಾದ ಅಂಶ.

(ಎಸ್.ಎಂ.ಎಚ್.)