ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮ್ಮಾನ್

ವಿಕಿಸೋರ್ಸ್ದಿಂದ

ಅಮ್ಮಾನ್

ಅರಬ್ಬೀ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ (ಜನಸಂಖ್ಯೆ 2,44,600). ಬಹು ಹಳೆಯ ಊರು. ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ ಕಟ್ಟಡಗಳಿವೆಯಾಗಿ ಮುಖ್ಯ ಪ್ರವಾಸೀ ಕೇಂದ್ರ. ವಿಮಾನ ಮತ್ತು ರೈಲು ಕೇಂದ್ರವೂ ಹೌದು, ಕೈಗಾರಿಕೆಗಳು ಹೆಚ್ಚು. ಹೊಗೆಸೊಪ್ಪು, ಚರ್ಮ, ಬಟ್ಟೆ, ಹೆಂಚು, ಸಿಮೆಂಟ್ ಮೊದಲಾದವು ತಯಾರಾಗುತ್ತವೆ.

(ಆರ್.ಡಿ.ಆರ್.)