ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯೂಥಯ
ಗೋಚರ
ಅಯೂಥಯ
ಮಧ್ಯ ಥಾಯ್‍ಲೆಂಡಿನ ದಕ್ಷಿಣದಲ್ಲಿ ಬ್ಯಾಂಕಾಕಿಗೆ 64 ಕಿ.ಮೀ. ದೂರದಲ್ಲಿರುವ (ಐಥಿಯ) ಪಟ್ಟಣ. ವ್ಯಾಪಾರಕೇಂದ್ರ. ಛಾವೋಫ್ರಾಯ (ಮೀನಾಂ) ಮತ್ತು ಪಾಸಾಕ್ ಎಂಬ ನದಿಗಳ ಸಂಗಮದಲ್ಲಿರುವ ಒಂದು ದ್ವೀಪದಲ್ಲಿದೆ. ಸುತ್ತಲೂ ಬತ್ತ, ಇತರ ಧಾನ್ಯಗಳು, ಹಣ್ಣುಗಳು ಚೆನ್ನಾಗಿ ಬೆಳೆಯುತ್ತವೆ. ಮೀನುಗಾರಿಕೆಯೂ ಹಂದಿ ಸಾಕುವುದೂ ಈ ಪ್ರದೇಶದ ಮುಖ್ಯ ಉದ್ಯಮಗಳು. ಆದರೆ ವಾಣಿಜ್ಯ ಸಾಮಗ್ರಿಸಾಗಣೆ ಮತ್ತು ಜನರ ಪ್ರಯಾಣ ಹೆಚ್ಚಾಗಿ ಮೋಟಾರು ದೋಣಿಗಳ ಮೂಲಕ ನಡೆಯುತ್ತವೆ. ಇದು (14)ನೆಯ ಶತಮಾನದಿಂದ (1767)ರವರೆಗೆ ಸಯಾಂ ರಾಜ್ಯದ ರಾಜಧಾನಿಯಾಗಿತ್ತು; ಅನಂತರ ಬರ್ಮೀಯರ ದಾಳಿಯಿಂದ ವಿಶೇಷವಾಗಿ ನಾಶವಾಯಿತು. ಇಲ್ಲಿ ಬೌದ್ಧರ ಹಳೆಯ ಪಗೋಡಾಗಳ ಮತ್ತು ಅರಮನೆಗಳ ಅವಶೇಷಗಳಿವೆ. (ಎ.ಕೆ.