ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಬ್ಬೀ ಸಮುದ್ರ್ರ

ವಿಕಿಸೋರ್ಸ್ದಿಂದ

ಅರಬ್ಬೀ ಸಮುದ್ರ್ರ : ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಒಂದಾನೊಂದು ಕಾಲದಲ್ಲಿ ಈ ಸಮುದತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕೋಬರ್ ನಿಂದ ಮೇವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್‍ನಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್‍ನಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬೀ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಏಡನ್, ಬೊಂಬಾಯಿ ಮತ್ತು ಕರಾಚಿ ಈ ಸಮುದ್ರತೀರದ ಪ್ರಖ್ಯಾತ ಬಂದರುಗಳು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಕೊಟ್ರಾ ಮತ್ತು ಲಕದ್ವೀಪ ಎಂಬುವು ಮುಖ್ಯವಾದುವು. ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮೈ ನೀರಿನ ಉಷ್ಣಾಂಶ 240-250 ಸೆಂ. ಸಮುದ್ರ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ. (ಎಂ.ಎಸ್.ಎಂ.)