ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಾಜಕತಾವಾದ

ವಿಕಿಸೋರ್ಸ್ದಿಂದ

'ಅರಾಜಕತಾವಾದ : ದೇಶದಲ್ಲಿ ಯಾವುದೇ ವಿಧವಾದ ರಾಜಕೀಯ ಅಧಿಕಾರ ಅನಾವಶ್ಯಕ, ಅನಪೇಕಣೀಯ ಎಂಬ ತಳಹದಿಯ ಮೇಲೆ ರಚಿತವಾಗಿರುವ ರಾಜ್ಯಶಾಸ್ರ್ತದ ಒಂದು ವಾದ (ಅನಾರ್ಕಿಸಂ). ಬಹು ಹಿಂದಿನಿಂದ ಇದ್ದರೂ 19ನೆಯ ಶತಮಾನದ ಅಂತ್ಯಭಾಗದಲ್ಲಿ ಪ್ರಾಮುಖ್ಯ ಪಡೆಯಿತು. ಆಧುನಿಕ ಕಾಲದಲ್ಲಿ ಈ ವಾದದ ಮುಖ್ಯ ಪ್ರವರ್ತಕರು. ಜೋಸೆಪ್ ಫ್ರೌಡನ್, ಮ್ಯಾಕ್ಸ್ ಸ್ಟರ್ನರ್, ಬೆಂಜಮಿನ್ ಟಕರ್, ಮೈಕೆಲ್ ಬಾಕುನಿನ್ ಮತ್ತು ಪ್ರಿನ್ಸ್ ಕೋಪೋಟ್‍ಕಿನ್ ಸಮಾಜದಲ್ಲಿ ಮಾನವನಿಗೆ ಸ್ವಾತಂತ್ರ್ಯ ಅತಿ ಪ್ರಧಾನವಾದುದು; ಅದನ್ನು ಕಾಪಾಡಿಕೊಳ್ಳಬೇಕಾದರೆ ರಾಜ್ಯವನ್ನು ರದ್ದುಗೊಳಿಸಬೇಕು;

ದೇಶದಲ್ಲಿ ಯಾವ ವಿಧವಾದ ರಾಜಕೀಯ ಅಧಿಕಾರವೂ ಇರಬಾರದು; ರಾಜ್ಯದ ಪ್ರಜೆಗಳ ಮೇಲೆ ಹತೋಟಿಯಿಡುವ ಎಲ್ಲ ಸಂಸ್ಥೆಗಳನ್ನೂ ನಿರ್ಮೂಲನ ಮಾಡಬೇಕು; ಬಲಪ್ರಯೋಗ ಕೂಡದು-ಇಷ್ಟು ಅರಾಜಕತಾವಾದದ ಸಾರ. ಅರಾಜಕತಾವಾದ ಇಂದು ಜನಪ್ರಿಯವಾಗಿಲ್ಲ.