ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಾಟಸ್

ವಿಕಿಸೋರ್ಸ್ದಿಂದ

ಅರಾಟಸ್ : ಪ್ರ.ಶ.ಪೂ. 315-245. ಗ್ರೀಸ್ ದೇಶದ ಕವಿ. ಜನನ ಸಿಸಿಲಿಯ ಸೋಲಿಯಲ್ಲಿ. ಮ್ಯಾಸಿಡೋನಿಯ ದೊರೆ ಆಂಟಿಗೋನ ಗಾನಟಾಸ್ ಆಸ್ಥಾನದಲ್ಲಿದ್ದ. ಈತ ಖಗೋಳವಿಜ್ಞಾನದ ಮೇಲೆ ಬರೆದ ಫೆನೋಮೆನ ಎಂಬ ಪ್ರಖ್ಯಾತ ಪದ್ಯವನ್ನು ಸಿಸಿರೊ ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಅರಾಟಸ್ ರಾಜಧಾನಿಯಲ್ಲೇ ಕಾಲವಾದ. (ಟಿ.ಎಚ್.ಎಚ್.)