ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಿವು2
ಅರಿವು1 : ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ ಪ್ರಕಾರ ಅರಿವು (ಕಾಗ್ನಿಷನ್); ಸಂವೇದನೆ, ಭಾವನೆ, ಅನುಭೂತಿ (ಫೀಲಿಂಗ್); ಮತ್ತು ಸಂಕಲ್ಪ, ಇಚ್ಛಾಶಕ್ತಿ, ಪ್ರೇರಣೆ (ಕೊನೇಷನ್) - ಇವು ಪ್ರಜ್ಞೆಯ (ಕಾನ್ಷಸ್‍ನೆಸ್) ಮೂರು ಅಂತಿಮಕ್ರಿಯೆಗಳು. ಜೀವನದಲ್ಲಿ ಇಯನ್ನು ಪ್ರತ್ಯೇಕವಾಗಿ ಕಾಣುವುದು ಕಷ್ಟ. ಎಲ್ಲ ಕಡೆಯೂ ಇವು ಮೂರು ಒಟ್ಟಿಗೇ ಕೆಲಸ ಮಾಡುತ್ತವೆ. ಒಂದೊಂದು ಕಡೆ ಒಂದೊಂದರ ಪ್ರಭಾವ ಹೆಚ್ಚಿರುವುದರಿಂದ ಅಯನ್ನು ಗುರುತಿಸಲು ಸಾಧ್ಯ . ಅನುಭೂತಿ ಮತ್ತು ಇಚ್ಛಾಶಕ್ತಿಗಳಿಲ್ಲದೆ ಉಂಟಾಗುವ ಪ್ರಜ್ಞೆಯನ್ನು ಅರಿವು ಎನ್ನಬಹುದು. ಎಲ್ಲ ಪ್ರಾಣಿಗಳ ಮೂಲ ಪ್ರವೃತ್ತಿ ಹೊರಗಿನ ಜಗತ್ಯನ್ನು ಅರಿಯುವುದು, ಪರಿಸರ ಮತ್ತು ಜೀವಗಳ ನಡುವೆ ಇರುವ ಅನಿವಾರ್ಯ ಸಂಬಂಧದ ಒಂದು ಸಾಧನವಾಗಿ ಅರಿವು ಅಥವಾ ಬೋಧೆ ಜೀವಿಯ ಪ್ರಗತಿಪಥದಲ್ಲಿ ಕಾಣಿಸಿಕೊಳುತ್ತದೆ. ಅಮೀಬದಂಥ ಏಕಾಣುಜೀವಿಯೂ ಬಾಹ್ಯ ಜಗತ್ಯನ್ನು ಅರಿಯಬಲ್ಲದು. ಈ ಅರಿವಿನ ಅಗತ್ಯ ಬರಬರುತ್ತ ಹೆಚ್ಚಿದಂತೆಲ್ಲ ಅಯನ್ನು ಸಮರ್ಪಕವಾಗಿ ಸಿದ್ಧಿಸಿಕೊಳುವ ಸಾಧನೆಗಳು ಕಾಣಿಸಿಕೊಂಡುವು. ಇಂದ್ರಿಯಗಳು ಈ ಅರಿವಿನ ಸಾಧನೆಯಲ್ಲಿ ಒಂದು ವಿಧಾನ. ವಿಲಿಯಂ ಜೇಮ್ಸ್ ಹೇಳಿದಂತೆ ಅರಿವಿನ ದಾರಿಯಲ್ಲಿ ಮೊದಲ ಹೆಜ್ಜೆ ಈ ಇಂದ್ರಿಯಾನುಭವ(ಸೆನ್ಸೇಷನ್). ಆದ್ದರಿಂದ ಇಂದ್ರಿಯಗಳನ್ನು ಜ್ಞಾನದ್ವಾರಗಳು ಎಂದೂ ಕರೆಯುತ್ತಾರೆ. ಇಂದ್ರಿಯಾನುಭವಗಳು ಮೂಲಭೂತವಾದ ಮಾನಸಿಕ ಪ್ರಕಾರಗಳು ಎಂದು ಟಿಚ್ನರ್ ಬಣ್ಣಿಸಿದ; ಅರಿವಿನ ರಚನೆ ಇಂದ್ರಿಯಾನುಭವಗಳ ಮೂಲಕ ಆಗುತ್ತದೆಂಬುದು ಅವನ ವಾದ. ಮನಸ್ಸಿನ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇಂದ್ರಿಯಗಳನ್ನು ಅರ್ಥಮಾಡಿಕೊಳ್ಳಬೇಕೆಂಬುದು ಅವನ ಅಭಿಪ್ರಾಯ. ಅಂತೂ ಇಂದ್ರಿಯಗಳನ್ನು ದಾಟಿದರೆ ಆಂತರಿಕ, ದೈಹಿಕ ರಚನೆಯಲ್ಲಿ ಗ್ರಾಹಕಾಂಗಗಳು (ರಿಸೆಪ್ಟರ್) ಇಂದ್ರಿಯಸಂಭೃತವಾದ ವಿವರಗಳನ್ನು ಸ್ವೀಕರಿಸಿ ಮನಸ್ಸಿನ ಮುಂದಿಟ್ಟು ಜ್ಞಾನಕ್ಕೆ ವಿಷಯವನ್ನಾಗಿ ಮಾಡುತ್ತವೆ.
ಜೀವಂತವಾಗಿರುವ ಪ್ರಾಣಿ ಹೊರಗಣ ಜಗತಿನಿಂದ ಬರುವ ಪ್ರಚೋದಕವಿವರಗಳಿಗೆ ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆಯಷ್ಟೆ. ಜೀವಿಯಿಂದ ಜಗತ್ತಿಗೆ ಹರಿಯುವ ಪ್ರವಾಹಗಳಿಗೆ ಪ್ರವೃತ್ತಿಕ್ರಿಯೆ, ಪ್ರತಿಕ್ರಿಯೆ (ರೆಸ್ಪಾನ್ಸ್) ಎಂದರೆ ಜಗತ್ತಿನಿಂದ ಜೀವಿಗೆ ಹರಿಯುವ ಪ್ರವಾಹಗಳಿಗೆ ಅರಿವು , ಬೋಧೆ ಯನ್ನುತ್ತಾರೆ. ಪ್ರತಿಕ್ರಿಯೆ ಸಮರ್ಪಕವಾಗಿ ಇರಬೇಕಾದರೆ ಅರಿವು ಪ್ರೌಢವಾಗಿರಬೇಕು. ಹಾಗೆಂದೇ ಪ್ರಾಣಿಗಳು ವಿಕಾಸ ಹೊಂದುವಾಗ ಸನ್ನಿವೇಶ ಜಟಿಲಗೊಂಡು ಪ್ರತಿಕ್ರಿಯೆ ಕ್ಲಿಷ್ಟವಾಗಲು ಅರಿವಿನ ಪ್ರಕಾರಗಳೂ ಪ್ರೌಢವಾಗುತ್ತವೆ. ಅಮೀಬದ ಅರಿವಿಗೂ ಮನುಷ್ಯನ ಅರಿವಿಗೂ ಮೂಲಭೂತವಾದ ಪ್ರಯೋಜನ ಒಂದೇ ಇದ್ದರೂ ಅವುಗಳ ರೀತಿ ರಿವಾಜು ವಿಭಿನ್ನ . ಮಾನವನಲ್ಲಿ ಇಂದ್ರಿಯದ್ವಾರಗಳು ಹೆಚ್ಚಾಗಿರುವುದು ಮಾತ್ರವಲ್ಲ ಅವುಗಳ ಸಾಮರ್ಥ್ಯವೂ ಹೆಚ್ಚಾಗಿದೆ. ಮನಸಿನ ಕೌಶಲ ಹೆಚ್ಚಿದೆ. ಸಂವೇದನೆಗಳ ಇಂಗಿತಯನ್ನು ಪರಿಷ್ಕಾರವಾಗಿ ಅರಿಯುವ ವ್ಯವಧಾನ ಮನುಷ್ಯನ ವೈಶಿಷ್ಟ್ಯ ಎಂದರೆ ಉತ್ಪ್ರೇಕ್ಷೆಯಲ್ಲ. ಈ ಕಾರಣದಿಂದಲೇ ಮನುಷ್ಯ ಪ್ರಕೃತಿಯ ಮೇಲೆ ತನ್ನ ಪ್ರಭುತ್ವಯನ್ನು ಸ್ಥಾಪಿಸಲು ಶಕ್ತನಾಗಿರುವುದು. ಅರಿವಿನ ಮೇರೆಯ ವಿಸ್ತರಣದೊಂದಿಗೆ ಪ್ರಗಲ್ಭತೆಯೂ ಸೇರಿದೆ. ಜಗತ್ತಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ಕೈಗೊಳಲು ಮನುಷ್ಯನಿಗೆ ಇಂದ್ರಿಯಸ್ಥಾನ ಗಳು, ನರಮಂಡಲ ವ್ಯವಸ್ಥೆ, ಕ್ರಿಯಾಸಮರ್ಥವಾದ ಸ್ನಾಯು, ಮಾಂಸಖಂಡ-ಮುಂತಾದವು ನೆರವು ನೀಡುತ್ತವೆ. ಮನುಷ್ಯ ಜಾಗೃತನಾಗಿರುವಾಗೆಲ್ಲ ಬಾಹ್ಯವಸ್ತುಗಳಿಂದ ಅವಿರತವಾದ ಪ್ರಚೋದನೆಗಳಿಗೆ ಈಡಾಗುತ್ತಾನೆ. ಈ ಪ್ರಚೋದನೆಯೆಂಬುದು ಕ್ರಿಯಾಶಕ್ತಿಯ (ಎನರ್ಜಿ) ಹಲವು ಪ್ರಕಾರಗಳಂತೆ ಇಂದ್ರಿಯಗಳನ್ನು ಮುಟ್ಟಿ ಸಂವೇದನೆಗಳನ್ನು ಉದ್ಬೋಧನೆಗೂಳಿಸು ತ್ತವೆ. ಒಂದೊಂದು ಇಂದ್ರಿಯ ಒಂದೊಂದು ಬಗೆಯ ಪ್ರಚೋದನೆಯನ್ನು ಗ್ರಹಣ ಮಾಡಲು ಸಮರ್ಥವಾಗಿರುತ್ತದೆ. ಕಣ್ಣು ಬೆಳಯನ್ನು, ಕಿವಿ ಶಬ್ದಯನ್ನು , ಚರ್ಮ ಸ್ಪರ್ಷಯನ್ನು, ಮೂಗು ವಾಸನೆಯನ್ನು ಗ್ರಹಿಸುತ್ತವೆ. ಹೀಗೆ ಇಂದ್ರಿಯಗಳಿಗೆ ನಿಯತವ್ಯಾಪಾರವಿದೆ. ಇವೆಲ್ಲ ಅರಿವಿನ ಪ್ರಕಾರಗಳೇ. ಸಾಮಾನ್ಯವಾಗಿ ನಾವು ಯಾವುದಾದರೊಂದು ವಸ್ತುಯನ್ನು ಗ್ರಹಿಸುವಾಗ ಹಲವಾರು ಇಂದ್ರಿಯಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಪ್ರತ್ಯಭಿಜ್ಞೆಯಲ್ಲಂತೂ (ರೆಕಾಗ್ನಿಷನ್) ನಾನಾ ಇಂದ್ರಿಯಾರ್ಥಗಳ ಸಮಷ್ಟಿವ್ಯಾಪಾರವಿರುತ್ತದೆ. ಇಂದ್ರಿಯಗಳು ಮಾತ್ರ ಕೆಲಸ ಮಾಡಿದರೆ ಅರಿವು ಮೂಡುವುದಿಲ್ಲ. ಇಂದ್ರಿಯಗಳಿಂದ ಸಿದ್ಧವಾದ ಅನುಭವಗಳಿಗೆ ಅರ್ಥಯನ್ನು ಸೇರಿಸಿ ಪ್ರತ್ಯಕ್ಷಾನುಭವ (ಪರ್ಸೆಪ್ಷನ್) ಆದಾಗಲೇ ಅರಿವು ಪೂರ್ಣವಾಗುವುದು (ನೋಡಿ- ಪ್ರತ್ಯಕ್ಷಾನುಭವ). ಆದರೆ ಈ ಇಂದ್ರಿಯಾನುಭವ ಎಲ್ಲಿ ಯಾವಾಗ, ಬೋಧನೆಯ ಸ್ಥಿತಿಯನ್ನು ಮುಟ್ಟುತ್ತದೆ ಎಂಬುದು ಶಾಸ್ತ್ರಕ್ಕೂ ಮನಶ್ಶಾಸ್ತ್ರಕ್ಕೂ ಸಮನಾದ ಸಮಸ್ಯೆ. ಇದು ಇನ್ನೂ ಸಮರ್ಪಕವಾಗಿ ಪರಿಹಾರವಾಗಿಲ್ಲ. ಅರಿವಿನ ಸಮಸ್ಯೆ ತತ್ತ್ವಶಾಸ್ತ್ರದಿಂದಲೇ ಮನಶ್ಯಾಸ್ತ್ರಕ್ಕೆ ಬಂದ ದತ್ತಿ. ಕಾಗ್ನಿಷನ್ ಎಂಬ ಇಂಗ್ಲಿಷಿನ ಪದ ಗ್ನಾಸಿಸ್ ಎಂಬ ಧಾತುವಿನಿಂದ ಬಂದುದು. ಇದಕ್ಕೆ ಸಂಸ್ಕೃತದ ಜ್ಞಾ ಧಾತು ಸಮಾನ; ಜ್ಞಾ ಎಂದರೆ ತಿಳಿಯುವುದು ಎಂದರ್ಥ. ಆದರೆ ಇಂಗ್ಲಿಷಿನ ಕಾಗ್ನಿಷನ್ ಪದದಲ್ಲಿ ಸಹಕಾರದಿಂದ, ಒಡನೆ ಎಂಬರ್ಥದ ಕೊ ಎಂಬ ಉಪಸರ್ಗಕ್ಕೂ ಪ್ರಾದಾನ್ಯವಿದೆ. ಒಟ್ಟಾರೆ. ವಸ್ತುವಿನ ಸಹಕಾರದಿಂದ ತಿಳಿಯುವುದು ಬೋಧೆ; ಯಾವುದಾದರೂ ಒಂದು ವಸ್ತು ಇಂದ್ರಿಯಗೋಚರವಾಗಿ ಎದುರಿಗೆ ಇದ್ದರೇನೆ ಬೋಧೆಯಾಗುವುದು. ಪ್ರತ್ಯಕ್ಷಕಲ್ಪನೆ, ಪ್ರತ್ಯಯ (ಕಾನ್ಸೆಪ್ಟ್), ಸ್ಮೃತಿ, ನಿರೀಕ್ಷೆ, ಪ್ರತ್ಯಭಿಜ್ಞೆ ಮುಂತಾದ ಕ್ರಿಯೆಗಳೆಲ್ಲವನ್ನೂ ಬೋಧೆಯಲ್ಲಿ ಸೇರಿಸುತ್ತಾರೆ. ವಸ್ತು ಎದುರಿಗೆ ಇದ್ದು ಅದು ಇಂದ್ರಿಯ ವಿವರಗಳನ್ನು ಹೊಕ್ಕು ಆ ವಸ್ತುವಿನ ಅರಿವುಂಟಾದರೆ ಅದು ಪ್ರತ್ಯಕ್ಷ. ವಸ್ತು ದೂರವಿದ್ದು ಇಂದ್ರಿಯಗಳಿಗೆ ನೇರವಾದ ಸಂಬಂಧ ಇಲ್ಲವಾದರೂ ಅದರ ಅರಿವು ಉಂಟಾದರೆ ಅದು ಕಲ್ಪನೆ. ಪ್ರತ್ಯಕ್ಷ ದಿಂದ ಉಂಟಾದ ಚಿತ್ತದೊಳಗಿನ ಚಿತ್ತವೇ ಪ್ರತ್ಯಯ. ದೂರದ ವಸ್ತು ಕಾಲದ ದೃಷ್ಞಿಯಿಂದ ಭೂತವಾಗಿದ್ದರೆ ಸ್ಮೃತಿ. ಭವಿಷ್ಯತ್ತಾದರೆ ನಿರೀಕ್ಷೆ. ಅಂತೂ ವಸ್ತುವಿನ ಸಾಕ್ಷಾತ್ ಅಥವಾ ಪರೋಕ್ಷ ಸಂಪರ್ಕವಿದ್ದಾಗ ನಮ್ಮೆ ಚಿತ್ತವೃತ್ತಿಗಳು ಉದ್ಭೂತವಾಗಿ ವಸ್ತುವಿನ ವಿವರಗಳನ್ನು ಗ್ರಹಿಸುವುದು ನೈಜವಾದ ವ್ಯವಹಾರ. ಪ್ರತ್ಯಕ್ಷ ಅರಿವಿನ ಮುಖ್ಯ ಪ್ರಕಾರವಾದುದರಿಂದ ಹಲವೊಮ್ಮೆ ಅರಿವನ್ನೂ ಪ್ರತ್ಯಕ್ಷಾನುಭವವನ್ನೂ ಸಮಾನಾರ್ಥಕ ಪದಗಳಂತೆ ಉಪಯೋಗಿಸುವ ವಾಡಿಕೆ ಇದೆ. ಆದರೆ ಆಧುನಿಕ ಮನಶ್ಶಾಸ್ತ್ರದ ಪ್ರಕ್ರಿಯೆಯಲ್ಲಿ ಅರಿವನ್ನು ಹೆಚ್ಚಾಗಿ ಬಳಸುವ ಪದ್ಧತಿ ಯಿಲ್ಲ. 1854ರಲ್ಲಿ ಜೆ.ಎಫ್.ಫರಿಯರ್ ಎಂಬ ತತ್ವಜ್ಞಾನಿ ಜ್ಞಾನದ ವಿಶ್ಲೇಷಣೆ, ಅಧ್ಯ ಯನಗ ಳನ್ನೇ ತತ್ವಶಾಸ್ರ್ತದ ಪ್ರಮುಖವಿಷಯವನ್ನಾಗಿ ಗ್ರಹಿಸಿ ಜ್ಞಾನಮೀಮಾಂಸೆ (ಎಪಿಸ್ಟಮಾಲಜಿ) ಎಂಬ ತತ್ತ್ವಶಾಸ್ತ್ರಶಾಖೆಯನ್ನು ಆರಂಭಿಸಿದ. ವಸ್ತುತಃ ಇದು ಮನಶ್ಶಾಸ್ತ್ರಪರವಾದ ಅಧ್ಯಯನವೇ ಆಗಿದ್ದುದರಿಂದ ಪ್ರಾಯೋಗಿಕ ವಿಭಾಗವನ್ನಷ್ಟೇ ಮನಶ್ಶಾಸ್ತ್ರದ ಪಾಲಿಗೆ ಬಿಟ್ಟರು. ಬರಬರುತ್ತ ಆತ್ಮ ಅಥವಾ ಚೈತನ್ಯ (ಕಾನ್ಷಸ್‍ನೆಸ್) ಎಂಬ ಕಲ್ಪನೆಗಳು ಸಡಿಲವಾಗಿ ವರ್ತನೆ, ಕ್ರಿಯೆ (ಬಿಹೇವಿಯರ್) ಪ್ರಮುಖವಾದಾಗ ಅರಿವಿನ ಬಳಕೆಯೂ ಹಿಂದೆ ಬಿತ್ತು. ಈ ಕಾರಣದಿಂದ ಬಹುಮಟ್ಟಿಗೆ ಅರಿವು ಎಂಬುಯನ್ನು ಇಂದ್ರಿಯಾನುಭವ, ಪ್ರತ್ಯಾಕ್ಷಾನುಭವಗಳಲ್ಲಿ ಮುಗಿಸಿಬಿಡುತ್ತಾರೆ.
ಆದರೆ. ಐತಿಹಾಸಿಕ ದೃಷ್ಟಿಯಿಂದ ಇದರಷ್ಟು ಪ್ರಭಾವಶಾಲಿಯಾದ ಕಲ್ಪನೆ ಮತ್ತೊಂದಿಲ್ಲ.
ಪ್ರಾಚೀನಕಾಲದಿಂದ ಮನಶ್ಯಾಸ್ತ್ರದ ಮುಖ್ಯ ವಸ್ತುಗಳಲ್ಲಿ ಒಂದಾದ ಅರಿವು ವಿಲಿಯಂ
ಜೇಮ್ಸ್, ವಿಲ್ಹೆಲ್ಮ್ ಉಂಟ್, ಸ್ಟೌಟ್, ಸ್ಟರ್ನ್, ಸ್ಪಿಯರ್‍ಮನ್ ಮುಂತಾದವರ ಸಂಶೋಧನೆಗೆ
ಒಳಪಟ್ಟ ವಿಷಯವಾಗಿತು. ಚಾರಲ್ಸ್ ಸ್ಪಿಯರ್‍ಮನ್ ಈ ವಿಚಾರವಾಗಿ ಅಮೂಲ್ಯವಾದ
ಪ್ರಯೋಗಗಳನ್ನು ನಡೆಸಿ ಮೂರು ನಿಯಮಗಳನ್ನು ನಿರೂಪಿಸಿದ. ಅನುಭವಗಳನ್ನು
ಅರಿಯುವಸ್ತು ಎಂದರೆ, ಮೊದಲನೆಯದಾಗಿ, ನಾವು ಹೊರಜಗತ್ತನ್ನು ತಿಳಿಯುವುದು
ಮಾತ್ತವಲ್ಲ , ಇಂದ್ರಿಯಾನುಭವವನ್ನು ಪಡೆಯುವುದು ಮಾತ್ರವಲ್ಲ, ಪ್ರಯತ್ನ ಪಡುವುದು
ಮಾತ್ತವಲ್ಲ , ಉದ್ವಿಗ್ನರಾಗುವುದು ಮಾತ್ರವಲ್ಲ, ಈ ತಿಳಿವಳಿಕೆ. ಇಂದ್ರಿಯನುಭವ. ಪ್ರಯತ್ನ,
ಉದ್ವೇಗ-ಇವು ನಮ್ಮಲ್ಲಿ ಉಂಟಾಗುವುದನ್ನು ಅರಿಯುವುದೂ ಸಾಧ್ಯ. ಎರಡನೆಯ
ನಿಯಮ ಕಲ್ಪನೆಗಳ ನಡುವೆ ಸಂಬಂಧದ ಪ್ರಸಾರಗಳನ್ನು ಸ್ಪಷ್ಟಪಡಿಸುವುದು, ಎಳೆಯುವುದು
ಸಹಜವಾದ ಪ್ರವೃತ್ತಿ ಎಂಬುದು ಈ ಮೂರು ನಿಯಮಗಳು ಪ್ರತೀತ್ವಸಂಬೋಧಿ
(ನಿಯೋಜೆನೆಸಿಸ್) ಎನಿಸಿಕೊಟ್ಟುತ್ತದೆ. ಅರಿವು ಉತನ್ನ ವಾಗಲು ಅವಶ್ಯವಾದ ಉಪಾಧಿಗಳನ್ನು,
ಅನುಭವದ ಪ್ರಕಾರಗಳನ್ನು, ಈ ನಿಯಮತ್ರಯ ವಿವರಿಸುತ್ತದೆ. ಈ ನಿಯಮಗಳನ್ನು
ಮಂಡಿಸಿದ ಸ್ಪಿಯರ್‍ಮನ್ ಅವಿಶ್ರಾಂತವಾಗಿ ಪ್ರಯೋಗಗಳನ್ನು ನಡೆಸಿ ಬುದ್ಧಿಶಕ್ತಿ , ಸ್ಮೃತಿಶಕ್ತಿ,
ಕಲಿಕೆ ಮುಂತಾದ ಮಾನಸಿಕಪ್ರವೃತ್ತಿಗಳಲ್ಲಿ ಅರಿವಿನ ಪಾತ್ರವನ್ನು ವಿಶದೀಕರಿಸಿದ. ಮನಶ್ಯಾಸ್ತ್ರದ
ವಿಶ್ವದಲ್ಲಿ ಅರಿವಿಗೆ ಪ್ರಯೋಗಸಿದ್ಧವಾದ ಸ್ಥಾನವನ್ನು ಒದಗಿಸಿದವ ಸ್ಪಿಯರ್‍ಮನ್.
ಸಮಷ್ಟಿಮನಶ್ಶಾಸ್ತ್ರದ (ಗೆಸ್ಟಾಲ್ಟ್ ಮನಶ್ಶಾಸ್ತ್ರತ) ಬೆಳವಣಿಗೆಗೆ ಅರಿವಿನ ಸ್ಥಾನವನ್ನು ಮತ್ತೆ
ಸ್ಥಾಪಿಸಿತು. ಈ ಪಂಥದವರು ಪ್ರತ್ಯಕ್ಷಾನುಭವದ ವಿಚಾರವಾಗಿ ನಡೆಸಿದ ಅಧ್ಯಯನ
ಅರಿವಿನ ಪ್ರಕಾರಗಳನ್ನು ಸ್ಫುಟಪಡಿಸಿತು. ಕರ್ಟ್ ಲೆವಿನ್ ಎಂಬ ಪ್ರಖ್ಯಾತ ಮನಶ್ಯಾಸ್ತ್ರಜ್ಞ
ನಿರೂಪಿಸಿದ ಚಿತ್ತಕ್ಷೇತ್ರವಾದ ಅರಿವಿನ ನೆಲೆಯನ್ನು ಚಿತ್ತವೃತ್ತಿಗಳ ವ್ಯವಹಾರದ ಹಿನ್ನೆಲೆಯಲ್ಲಿ
ನಿರ್ದೇಶಿಸಿತು. ಪ್ರಸಂಗವಾದದ (ಫೆನಾಮಿನಾಲಜಿ) ದೃಷ್ಟಿಯಿಂದ ಮನುಷ್ಯನ ಇಡೀ
ವ್ಯಕ್ತಿತ್ವವನ್ನು ವ್ಯವಹಾರಕ್ಷೇತ್ರವೆಂದು ಪರಿಗಣಿಸಿದರೆ ಯಾವೊಂದು ವರ್ತನೆಯೂ ಈ
ಕ್ಷೇತ್ರದ ವಿವರಗಳಿಂದ ನಿರ್ದಿಷ್ಟವಾಗುವುದು. ಈ ಕೇತ್ರ ಸಂದರ್ಭಶುದ್ಧವಾಗಿ ವ್ಯವಸ್ಥೆಗೊಳ್ಳಲು
ಅರಿವು ಮುಖ್ಯವಾದ ಸಾಧನೆ. ಅರಿವು ಕೂಡ ಒಂದು ಕ್ರಿಯೆ ಯನ್ನುವ ವಾದ ಮನಶ್ಯಾಸ್ತ್ರದ
ಇತಿಹಾಸದ ಮಧ್ಯ ಯುಗದಲ್ಲಿ ಪ್ರಚಲಿತವಾಗಿತ್ತು. ಈ ವಾದ ಚಿತ್ತಕ್ಷೇತ್ರವಾದಿಗಳಿಂದ ಮತ್ತೆ
ಪ್ರಚಾರಕ್ಕೆ ಬಂದಿತು. ಅರಿವು ಬೇರೆ, ವ್ಯವಸ್ಥೆ ಬೇರೆ, ಅಗತ್ಯ ಬಿದ್ದರೆ ಕ್ಷೇತ್ರದ ಪುನರ್ವ್ಯವಸ್ಥೆ
ಆಗಬೇಕು; ಇದಕ್ಕೆ ಕೂಡ ಅರಿವು ಪ್ರಮುಖವಾದ ಸಾಧನೆ ಎಂಬ ನಿಲುವು ಸ್ಪಷ್ಟವಾಯಿತು.
ಅರಿವಿನ ಪ್ರಕಾರವೇ ವ್ಯವಸ್ಥೆ. ಅರಿವೆಂದರೆ ವ್ಯವಸ್ಥೆಯ ಒಂದು ಮುಖ-ಎಂದು ಸಮಷ್ಟಿವಾದಿ
ಗಳು ನಿರೂಪಿಸಿದ್ದರು. ಲೆವಿನ್ನನಂತೆ ಅರಿವಿಗೆ ವ್ಯವಸ್ಥೆಗಿಂತ ಭಿನ್ನವಾದ ಅಸ್ತಿತ್ವವನ್ನು
ಹೇಳಬೇಕಾಗುತ್ತದೆ. ಪ್ರತ್ಯಕ್ಷಾನುಭವ ಎನ್ನುವುದು ಈ ವಾದದವರ ಪ್ರಕಾರ ಬೋಧನೆಯ
ಕೇತ್ರ ಇದ್ದಕ್ಕಿದ್ದಂತೆ ಪುನರ್ವ್ಯವಸ್ಥಿತವಾಗುವುದು.
ಸಂಕೇತಸಮಷ್ಟಿ ನಿರೀಕ್ಷೆಯ (ಸೈನ್ ಗೆಸ್ಟಾಲ್ಟ್ ಎಕ್ಸ್ಪೆಕ್ಟೆನ್ಸಿ) ವಾದವನ್ನು ಮಂಡಿಸಿದ
ಇ.ಸಿ.ಟೋಲ್‍ಮನ್ ಅರಿವಿನ ಸಮಸ್ಯೆಯನ್ನು ಮತ್ತೊಂದು ದೃಷ್ಟಿಯಿಂದ ಅಧ್ಯಯನ
ಮಾಡಿದ, ಜೀವಿ ನಿರ್ದಿಷ್ಟ ಗುರಿ ಮುಟ್ಟಲು ವ್ಯವಸ್ಥಿತವಾದ ಸಾಧನೆಗಳನ್ನೂ ಸಂಕೇತಗಳನ್ನೂ
ಬಳಸಿಕೊಳ್ಳುವಾಗ ಅರಿವು ಉಪಯೋಗಕ್ಕೆ ಬರುತ್ತದೆ. ಇಲ್ಲಿ ಅರಿವು ಎಂದರೆ ಸಾಧನ-
ಸಾಧ್ಯಗಳ ಮಧ್ಯೆ ಇರುವ ಸಂಬಂಧ; ವಸ್ತುವನ್ನು ಪ್ರತ್ಯಕ್ಷದಿಂದ ಗ್ರಹಿಸುವುದು, ಅರಿಯುವುದು.
ಅಂದರೆ ಅದರ ಆಕಾರ, ಸ್ವಬಾವ, ಮೌಲ್ಯ, ಪ್ರಯೋಜನ, ಇಂಗಿತಗಳನ್ನು ಗ್ರಹಿಸುವುದು.
ಸ್ಮೃತಿಯಲ್ಲಿ ಧರಿಸಿಕೊಳ್ಳುವುದು. ಈ ಮೂರೂ ಅರಿವಿನ ಅಂಗಗಳು. ಹೀಗೆ ಯಾವುದಾದ
ರೊಂದು ಪ್ರಾಣಿ ಹೊರಗಿನ ವಸ್ತುವನ್ನು ನೋಡುವಾಗ ಆ ವಸ್ತುವಿನ ಸಂಕೇತವನ್ನೂ
ಇಂಗಿತ್ತವನ್ನೂ ಗ್ರಹಿಸಿ ವಸ್ತುಗಳಿಗೂ ತನಗೂ ಇರುವ ಸಂಬಂಧವನ್ನೂ ನಿರೀಕ್ಷೆಯಿಂದ
ಕ್ರಿಯೋನ್ಮುಖವಾಗಿ ಮಾಡುವುದರಿಂದ ಇದಕ್ಕೆ ಸಂಕೇತಸಮಷ್ಟಿವಾದ ಎಂಬ ಹೆಸರು
ಬಂದಿದೆ. ಈ ಸಂಧರ್ಭದಲ್ಲಿ ಟೋಲ್ಮನ್ ಮೂರುಬಗೆಯ ಅರಿವನ್ನು ಹೇಳುತ್ತಾನೆ:
1. ಮೂಲಭೂತವಾದ ಗುರಿಗಳಿಗೆ ಸಂಬಂಧಪಟ್ಟ್ಟಂತೆ ತೃಪ್ತಿಪಡೆದುಕೊಳ್ಳಲು ಸಿದ್ಧವಾದ
ಅರಿವು ಕ್ಯಾಥೆಕ್ಸಿಸ್, 2. ಮೂಲಭೂತವಾದ ಗುರಿಗಳಿಗೂ ಸನ್ನಿವೇಶದ ವಸ್ತುಗಳಿಗೂ
ಸಂಬಂಧವನ್ನು ಕಲ್ಪಿಸಿ ಉಪಗುರಿಗಳನ್ನು ಏರ್ಪಡಿಸುವ ಅರಿವು ಈಕ್ವಿವೆಲೆಂಟ್ ಬಿಲೀಫ್ಸ್ .
3. ಹೊರಗಿನ ಸನ್ನಿವೇಶದ ಪ್ರಸಂಗಗಳಲ್ಲಿ ಅನುಕ್ರಮವನ್ನು ಉಂಟುಮಾಡಿ ಅದರ ಮೂಲಕ
ಮುಂದೆ ಬರಬಹುದಾದ ಫಲರೂಪಿ ವಸ್ತುಗಳನ್ನು ನಿರೀಕ್ಷಿಸುವ ಅರಿವು ಫೀಲ್ಡ್ ಎಕ್ಸ್ಪೆಕ್ಟೆನ್ಸೀಸ್.
ಈ ವಿಭಾಗದ ಇಂಗಿತವಾಗಿ ಟೋಲ್ಮನ್ ವಾದಿಗಳು ಅರಿವಿನ ಭೂಪಟಗಳನ್ನು
ಸಿದ್ಧಪಡಿಸಿದ್ದಾರೆ.
ಮೂಲಭೂತ ಪ್ರವೃತ್ತಿಗಳಿಗೂ ಮೋಟಿವೇಷನ್ ಅರಿವಿಗೂ ಇರುವ ಸಂಬಂಧವನ್ನು
ಆಧುನಿಕ ಮನಶ್ಶಾಸ್ತ್ರ ಸ್ಪಷ್ಟಪಡಿಸಿದೆ. ಪ್ರವೃತ್ತಿಗಳಿಂದ ವ್ಯಕ್ತಿಯಲ್ಲಿ ಉಂಟಾದ ಒತ್ತಡವನ್ನು
ಕಡಿಮೆಮಾಡಲು ಅರಿವು ಬಲವಾಗುತ್ತದೆ. ಇದರಿಂದಾಗಿ ಗೌಣವಾದ ಪ್ರವೃತ್ತಿಗಳು ಅರಿವಿನ
ಫಲದಂತೆ ಕಾಣಿಸಿಕೊಳ್ಳುತ್ತವೆ. ಅರಿವು ಹೀಗೆ ಫಲಕಾರಿಯಾಗಬೇಕಾದರೆ ಪೂರ್ವಾನುಭವ
ಅಥವಾ ಕಲಿತ ಕೌಶಲ ಅಗತ್ಯ . ಹೊರಗಿನ ಸನ್ನಿವೇಶವನ್ನು ಯಥಾರ್ಥವಾಗಿ ಗ್ರಹಿಸಲು
ಮೌಲಿಕ ವೈವಿಧ್ಯವನ್ನು ಆಶ್ರಯಿಸಿ ವಿಭಿನ್ನ ಕ್ರಿಯೆಗಳನ್ನು ವ್ಯವಸ್ಥೆಗೊಳಿಸಲೂ ಅರಿವು
ಅಗತ್ಯವಾಗುತ್ತದೆ.
ಸಾಮಾಜಿಕ ಮನಶ್ಶಾಸ್ತ್ರದ ಇಂದಿನ ಸ್ಥಿತಿಯಲ್ಲಿ ಸಾಮಾಜಿಕ ಸಂಬಂಧಗಳನ್ನು ಮತ್ತು
ಸಾಮಾಜಿಕ ಮೌಲ್ಯಗಳನ್ನು ಅರಿಯುವ ಪ್ರಕಾರಕ್ಕೆ ಸಾಮಾಜಿಕಬೋಧೆ ಎಂದು ಹೆಸರು.
ಡೇವಿಡ್ ಕೆಚ್ ಮುಂತಾದ ಸಾಮಾಜಿಕ ಮನಶ್ಶಾಸ್ತ್ರಜ್ಞರು ಪೂರ್ವಗ್ರಹ ಜನಾಂಗಗಳಲ್ಲಿನ
ವೈವಿಧ್ಯ , ಪಂಗಡಗಳ ವೈಷಮ್ಯ ಮುಂತಾದ ವಿವರಗಳನ್ನು ಇದೇ ದೃಷ್ಟಿಯಿಂದ ಅಧ್ಯಯನ
ಮಾಡಿದ್ದಾರೆ. ಈ ಪ್ರವೃತ್ತಿU¼ಲವೂ ಪ್ರಸಂಗವಾದದ ನೆ¯ಯಲ್ಲಿ ಅರಿವಿನ ಪ್ರಕಾರಗಳೇ.
ಇನ್ನೊಬ್ಬ ವ್ಯಕ್ತಿಯ ಸ್ವಬಾವಯನ್ನು ಅರಿಯುವುದು ನಮ್ಮೆ ನಿತ್ಯ ಜೀವನದಲ್ಲಿ ಅತ್ಯಾವಶ್ಯಕ;
ನಮ್ಮೆ ಅನುಭವದ ಆಧಾರದ ಮೇಲೆಯೇ ಇವನ್ನು ಸಾಧನೆಗಳ ಸಮಷ್ಟಿಜ್ಞಾನ ಸಾಮಾಜಿಕ
ಬೋಧೆಯೆನಿಸಿಕೊಟ್ಟುತ್ತದೆ. ವ್ಯಕ್ತಿಯ ರೂಪ ಗ್ರಹಣ ಪ್ರತ್ಯಕ್ಷದಲ್ಲಿ ಆಗುತ್ತದೆ. ಆದರೆ ಅವನ
ಮನೋಧರ್ಮ, ಪ್ರವೃತ್ತಿಗಳು, ಅವದಾನಗಳು, ಸಹಿಷುತೆ ಮುಂತಾದ ಆಂತರಿಕ ವಿವರಗಳನ್ನು
ಸಾಮಾಜಿಕ ಬೋಧೆಯಿಂದ ಅರಿಯದೆ ವ್ಯಕ್ತಿಯ ಸಂಪೂರ್ಣ, ಅರ್ಥಕ್ರಿಯಾಕಾರಿಜ್ಞಾನ
ಸಾಧ್ಯವಾಗಲಾರದು. ಹಾಗೆಯೇ ಸಮಾಜವೊಂದರಲ್ಲಿ ವ್ಯವಸ್ಥಿತವಾದ ಪದ್ಧತಿಗಳು,
ಸಂಪ್ರದಾಯ, ಆರ್ಥಿಕ ಧಾರ್ಮಿಕ ನೀತಿ, ಸಮಾಜರಚನೆ ಮುಂತಾದಯನ್ನು ಅರಿಯಲೂ
ಈ ಬಗೆಯ ಬೋಧೆ ಅಗತ್ಯ . ಇದಿಲ್ಲದೆ ಸಮಾಜದಲ್ಲಿ ಪಾಲುಗೊಳ್ಳಲು ಸಾಧ್ಯ ವಿಲ್ಲ. ಈ
ಜ್ಞಾನ ಸಂಪನ್ನವಾಗಲು ನೆರವಾಗುವ ಶಿಕ್ಷಣಯನ್ನು ಮಕ್ಕಳಿಗೆ ಕೊಡಿಸಬೇಕೆಂಬ ಶ್ರದ್ಧೆ
ಪ್ರಗತಿಪರರಾಷ್ಟ್ರಗಳಲ್ಲಿ ಕಾಣಬರುತ್ತಿದೆ.
ಮನಶ್ಶಾಸ್ತ್ರದ ಇತಿಹಾಸದಲ್ಲಿ ಬೆಂಟಾನೊ ಬೇನ್, ವಾರ್ಡ್, ಜೇಮ್ಸ್ ಮುಂತಾದವರು
ಅರಿವು ಮನಶ್ಶಾಸ್ತ್ರ ದ ಮುಖ್ಯ ಅಧ್ಯ ಯನವಸ್ತುವೆಂದು ಗ್ರಹಿಸಿ ಅದರ ಅನುಸಂಧಾನದ
ಕಡೆ ತಮ್ಮ ಲಕ್ಷ್ಯವನ್ನು ಹರಿಸಿದರು. ಜೇಮ್ಸ್ ವಾರ್ಡ್ ಅನುಭವಕ್ಕೆ ಅನಿವಾರ್ಯವಾಗಿ
ವಿಷಯಿ (ಸೆಲ್ಫ್, ಈಗೊ) ಇದ್ದೇ ಇರಬೇಕೆಂದು ವಾದಿಸಿ ಅರಿವು ಮುಂತಾದ ಎಲ್ಲ
ಕ್ರಿಯೆಗಳೂ ಅದರ ಪ್ರಸಾರಗಳೆಂದೇ ನಿಶ್ಚಯಿಸಿದ. ಚಂದ್ರನಿಗೂ ಅವನ ಕಲೆಗಳಿಗೂ
ತಾದಾತ್ಮ್ಯ ಇರುವಂತೆ ವಿಷಯಿಗೂ ಅರಿವಿಗೂ ತಾದಾತ್ಮ್ಯ ಸಂಬಂಧ ಇದೆ. ಹೊರಗಿನ
ವಸ್ತು ದತ್ತವಾಗಿ ಪ್ರಾತಿಭಾಸಿಕವಾಗಿ ಇಂದ್ರಿಯಾನುಭವಗಳ ಮೂಲಕ ವಿಷಯಿಯನ್ನು
ಮುಟ್ಟುವುದು. ಈ ಪ್ರಾತಿಭಾಸಿಕಪ್ರವೃತ್ತಿಗಳು ವ್ಯಕ್ತಿಯ ಗಮನಯನ್ನು ಸೆಳೆಯುತ್ತವೆ ಮತ್ತು
ಪ್ರಾತಿಭಾಸಿಕಪ್ರವೃತ್ತಿಗಳ ಹಿಂದಿರುವ ವಸ್ತುವಿನ ವಿಚಾರವಾಗಿ ವಿಷಯಿಯ ಸಂಬಂಧವನ್ನು
ರೂಪಿಸುತ್ತವೆ. ಬೇನ್ ಪ್ರಾಣಶಾಸ್ರ್ತದ ನಿಲುವನ್ನು ಹಿಡಿದು ನರಪ್ರವಾಹಗಳು ಅನುಭವದಲ್ಲಿ
ಏಕತಾನವನ್ನುಂಟುಮಾಡಬಲ್ಲುವೆಂದು ಹೇಳಿದೆ. ಅವನ ಪ್ರಕಾರ-ನರಪ್ರವಾಹವಿಲ್ಲದಿದ್ದರೆ
ಮನಸ್ಸೂ ಇಲ್ಲ. ಮಿದುಳಿನ ರಚನೆ, ಅಲ್ಲಿ ನಡೆಯುವ ವೃತ್ತಿ-ಇವುಗಳಿಂದಲೇ ಅರಿವು
ಮುಂತಾದ ಮಾನಸಿಕಕ್ರಿಯೆಗಳು ಉಂಟಾಗುವುವೆಂಬುದು ಅವನ ವಾದ. ಇಂದ್ರಿಯಾನುಭವ
ಗಳಲ್ಲಿ ಅರಿವಿಗೂ ನಿಕಟಸಂಬಂಧವಿದೆ ಎಂದು ತೋರಿಸುವುದು ಈ ಎಲ್ಲ ಸಂಶೋಧಕರ
ಉದ್ದೇಶವಾಗಿತ್ತು.
ಮೊದಲಿನಿಂದ ಅರಿವಿಗೂ ಪ್ರತ್ಯಕ್ಷಾನುಭವಕ್ಕೂ ಇರುವ ವ್ಯತಾಸವನ್ನು ಗಮನಿಸಿದ್ದಾರೆ.
ಬಾಹ್ಯವಸ್ತುಗಳನ್ನು ಅವಲಂಬಿಸಿ ರೂಪತಳೆದ ಇಂದ್ರಿಯಾನುಭವಳು ಪ್ರತ್ಯಕ್ಷಾನುಭವಕ್ಕೆ
ಅತ್ಯಾವಶ್ಯಕ; ಇಯನ್ನು ಮೀರಿ ಪತ್ಯಕ್ಷ ಆಗಲಾರದು. ಆದರೆ ಅರಿವು ಈ ಮೇರೆಯನ್ನು
ಮೀರಿ ಇಂದ್ರಿಯಾನುಭವಗಳಲ್ಲಿ ಬಾರದ ವಿವರಗಳನ್ನು ಗ್ರಹಿಸುತ್ತ್ತದೆ. ಪ್ರತ್ಯಕ್ಷ ಒಮ್ಮೊಮ್ಮೆ
ತಪ್ಪಾಗಿ ಗ್ರಹಿಸುವುದುಂಟು. ಮರಳುಗಾಡಿನಲ್ಲಿ ನಡೆಯುವಾಗ ನೀರಿನ ಭಾಸ ಆಗುವಂತೆ,
ಆದರೆ ಇದರ ಪರಿಚಯ ಇದ್ದವನು, ಅನುಭವ ಇದ್ದವನು ಅದನ್ನು ನೀರೆಂದು ಗ್ರಹಿಸುವುದಿಲ್ಲ.
ಇಂದ್ರಿಯಾನುಭವದ ವಿವರವನ್ನೂ ಅವನು ಅರಿವಿನಲ್ಲಿ ಮಾರ್ಪಡಿಸಿಕೊಳ್ಳುತ್ತಾನೆ. ಪ್ರತ್ಯಕ್ಷ
ದಲ್ಲಿ ಯುಕ್ತಿ, ತರ್ಕ, ನಿರ್ಣಯ ಇವಕ್ಕೆ ಸ್ಥಾನವಿರದು; ಹೆಚ್ಚು ಕಡಿಮೆ ವಸ್ತುತಂತ್ರವಾದದ್ದೇ ಇದು. ಆದರೆ ಅರಿವಿನಲ್ಲಿ ಈ ಮಾನಸಿಕಕ್ರಿಯೆಗಳು ಅವಶ್ಯ ವಾಗಿ ಒದಗಿಬರುತ್ತವೆ. ಪ್ರತ್ಯಕ್ಷ
ದಲ್ಲಿ ದೃಕ್ ಪ್ರತ್ಯಯವೇ (ಪರ್ಸೆಪ್ಟ್) ಆಧಾರವಾದರೆ. ಅರಿವಿನಲ್ಲಿ ಮಾನಸಪ್ರತ್ಯಯ (ಕಾನ್ಸೆಪ್ಟ್)
ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಪ್ರತ್ಯಕ್ಷ ತಾತ್ಕಾಲಿಕವಾದ ಅನುಭವ, ಕ್ಷಣಭಂಗುರವಾದ
ಪ್ರಸಂಗ. ಅರಿವಾದರೋ ಚಿತ್ತಬಿತಿಯಲ್ಲಿ ಉಳಿದಿರಬಲ್ಲುದು. ಅಷ್ಟು ಮಾತ್ತವಲ್ಲ ಹಲವಾರು
ಮಾನಸಪ್ರತ್ಯಯಗಳು ಕಲೆತು ವ್ಯವಸ್ಥಿತವಾಗಿ ಜ್ಞಾನವನ್ನು ಉಂಟುಮಾಡಬಲ್ಲವು. ಜ್ಞಾನ
(ನಾಲೆಡ್ಜ್) ಎಂಬುದು ವ್ಯವಸ್ಥಿತವಾದ ಚಿತ್ತಪರವೃತ್ತಿ. ಅರಿವು ಅನಿರ್ದಿಷ್ಟ ಗ್ರಹಣವಾದರೆ,
ಜ್ಞಾನವೆಂಬುದು ನಿರ್ದಿಷ್ಟ ಸಾಕಾರಗ್ರಹಣ. ಅದರಿಂದಲೇ ಕ್ರಿಯೆ ಹೊರಬರಲು ಸಾಧ್ಯ .
ಇಯನ್ನು ಭಾರತೀಯರು ವ್ಯವಹಾರಯೋಗ್ಯ ಎಂದು ವಿವರಿಸುತ್ತಾರೆ.
ಕರ್ಟ್ ಲೆವಿನ್ ಎರಡು ವಿಭಿನ್ನ ಭಾಷೆಗಳನ್ನು ಉಲ್ಲೇಖಿಸುತ್ತಾನೆ. ವಸ್ತುತಂತ್ರವಾಗಿರುವ
(ಫೆನೊಟಿಪಿಕಲ್) ಭಾಷೆ, ಮಾನಸಪ್ರತ್ಯಯಗಳನ್ನು ಅವಲಂಬಿಸಿರುವ (ಜೆನೊಟಿಪಿಕಲ್)ಭಾಷೆ.
ಮೊದಲನೆಯದಕ್ಕೆ ಆಧಾರ ದತ್ತಾಂಶಗಳು, ಇಂದ್ರಿಯ ಗ್ರಾಹ್ಯವಾದ ವಿವರಗಳು. ಇದು
ಪ್ರತ್ಯಕ್ಷ ಎರಡನೆಯದಕ್ಕೆ ಆಧಾರ ಕಲ್ಪನೆಗಳು (ಕಾನ್ಸ್ ಟ್ರಕ್ಟ್ಸ್). ಇದು ಜ್ಞಾನ, ಎರಡರಲ್ಲೂ
ಅರಿವು ಇದ್ದರೂ ಎರಡನೆಯದರಲ್ಲಿಅರಿವಿನ ಪಾತ್ರ ಹೆಚ್ಚು. ಅರಿವು ಕೇವಲ ವ್ಯಕ್ತಿನಿಷ್ಠ.
ಇಂದ್ರಿಯ ದತ್ತಾಂಶಗತಿಗೆ ಅತೀತವಾದದ್ದು (ಟ್ರ್ಯಾನಂಡೆಂಟಲ್). ಆದರೆ ಇದು ತತ್ವಶಾಸ್ರದಲ್ಲಿ
ಹೇಳುವಂತೆ ಸತ್ತಾಮಾತ್ರವಾದುದಲ್ಲ. ಬೆಂಟಾನೊ ಹೇಳುವಂತೆ ಕ್ರಿಯೆ. ಈ ಕ್ರಿಯೆಯಿಂದ
ವಸ್ತು ಸೂಚ್ಯವಾಗುತ್ತದೆ. ಆದರೆ ಪ್ರತ್ಯಕ್ಷ ದಲ್ಲಿಲಿದ್ದಂತೆ ಬಾಹ್ಯವಸ್ತುವೇ ಆಗಿರಬೇಕೆಂಬ ನಿಯಮ
ಇಲ್ಲ. ಆಂತರಿಕವಸ್ತು ಅಥವಾ ಭಾವನೆಯೂ ಅರಿವಿಗೆ ವಸ್ತುವೇ. ಮೈನಾಂಗ್‍ನ ಶಿಷ್ಯ
ಬೆನುಸ್ಸಿ ಅತೀಂದ್ರಿಯ ಕ್ರಿಯೆಗಳಿಂದ ಉತನ್ನ ವಾದ ಸಮಷ್ಟಿ ಸ್ವರೂಪವೇ ಅರಿವು ಎಂದು
ಹೇಳಿ ಬಾಹ್ಯ ವಸ್ತುಗಳು ವಾಸ್ತವಿಕವಾದುದರಿಂದ ಉಚ್ಚ ಶ್ರೇಣಿಯದು ಎಂದೂ ಮಾನಸ
ವಸ್ತುಗಳು, ಇವುಗಳನ್ನು ಆಶ್ರಯಿಸಿ ಕಲ್ಪಿತವಾದುದರಿಂದ ನೀಚ ಶ್ರೇಣಿಯದು ಎಂದೂ
ವಾದಿಸಿದ್ದಾನೆ. ಈ ವಾದವನ್ನು ಸಮಷ್ಟಿವಾದಿಗಳು ನಿರಾಕರಿಸಿ ಸಮಷ್ಟಿ¸ರೂಪದ ಅರಿವು
ಉಚ್ಚಶ್ರೇಣಿಯ ಕ್ರಿಯೆಯೇ ಎಂದು ಸಮರ್ಥಿಸುತ್ತಾರೆ. ಇಂದ್ರಿಯಜನ್ಯಸಂವೇದನೆಗಳು
ಕೂಡ ಆಂತರಿಕ ವಿವರಗಳನ್ನು ಆಶ್ರಯಿಸಿರುತವೆ ಎಂದೂ ಕಾಫ್ಕಾ ಸ್ಪಷ್ಟಪಡಿಸಿ ಸಮಷ್ಟಿ¸ರೂಪ
ಗಳು ವಾಸ್ತವವಾಗಿ ಹೊರಗಿನ ಭೌತಪ್ರಪಂಚದಲ್ಲಿ ಇರುವುವೆಂದೂ ಸಂವೇದನೆಗಳಂತೆ
ಆಧುನಿಕ ಮನಶ್ಶಾಸ್ತ್ರದಲ್ಲಿ ಅರಿವು ಎಂಬ ಕಲ್ಪನೆ ವಿಶೇಷವಾಗಿ ಕಲಿಕೆಯ ಕ್ಷೇತ್ರದಲ್ಲಿ
ನಡೆಯುತ್ತಿರುವ ಪ್ರಯೋಗಗಳಲ್ಲಿ ಬರುತ್ತದೆ. ಒಂದು ಪ್ರಾಣಿಯ ಮುಂದೆ ಸಮಸ್ಯೆಯನ್ನು
ಒಡ್ಡಿದಾಗ ಅದು ಸಮಸ್ಯೆಯನ್ನು ಹೇಗೆ ಪರಿಹಾರ ಮಾಡುತ್ತದೆ ಎಂಬುಯನ್ನು ನಿರ್ಧರಿಸಲು
ಕೊಯ್ಲರ್, ಟೋಲ್ಮನ್, ಕ್ರೆಷೆವ್ಸ್ಕಿ, ಜೆನಿಂಗ್ಸ್ ಮುಂತಾದವರು ಪ್ರಯತ್ನಪಟ್ಟಿದ್ದಾರೆ. ಬಹುಮಟ್ಟಿಗೆ
ಸಮ್ಮತವಾದ ಅಭಿಪ್ರಾಯವೆಂದರೆ ಸಮಸ್ಯೆಯ ಸನ್ನಿವೇಶವನ್ನು ಪ್ರಾಣಿ ಅರಿಯುವಾಗಲೇ
ಅದರ ಪರಿಹಾರದ ಸೂಚನೆಯೂ ಕಂಡುಬರುತ್ತದೆ ಎಂಬುದು. ಸಮಸ್ಯೆಯ ಸನ್ನಿವೇಶವನ್ನು
ಪ್ರಾಣಿ ವಿಶಿಷ್ಟವಾಗಿ ಗ್ರಹಿಸುತ್ತದೆ. ಆ ಅನುಭವಗಳೊಂದಿಗೆ ಸಂದರ್ಭದ ಅಗತ್ಯ ದಿಂದಾದ
ಅಂತಃಪ್ರವೃತ್ತಿಗಳು ದೃಶ್ಯವನ್ನು ಪರಿಷ್ಕರಿಸಿ ಅರ್ಥವತ್ತಾಗಿ ಮಾರ್ಪಡಿಸುತ್ತವೆ. ಇದಕ್ಕೆ
ಅರಿವಿನ ಪುನಾರಚನೆ ಎಂದು ಹೆಸರು. ಇದರಲ್ಲಿ ಪ್ರತ್ಯಕ್ಷಾನುಭವವೂ ಅಗತ್ಯವೂ ಅವಧಾನವೂ
ಬುದ್ಧಿಶಕ್ತಿಯೂ ಪಾತ್ತವಹಿಸುತ್ತವೆ.
ಅರಿವು ಮನೋದೇಹಸಂಘಾತದ ಒಂದು ಪ್ರಕಾರವೆಂದು ಪರಿಗಣಿಸಿ ಅದೂ
ಇತರ ದೈಹಿಕ ಮತ್ತು ಮಾನಸಿಕ ಕ್ರಿಯೆಗಳಂತೆ ಅನುಕ್ರಮವಾಗಿ ವಿಕಾಸಗೊಳ್ಳುವುದೆಂದು
ಈಚೆಗೆ ನಿರ್ಧರಿಸಿದ್ದಾರೆ. ಅಲ್ಲಿ ಅರಿವು ಎಂಬ ಪ್ರತ್ಯಕ್ಷದಲ್ಲಿ ಇಂದ್ರಿಯಾನುಭವ, ಪ್ರತ್ಯಕ್ಷಕ್ಷಾನುಭವ,
ವಿವೇಕ, ಚಿಂತನೆಗಳನ್ನು ಸೇರಿಸುತ್ತಾರೆ. ಹುಟ್ಟಿದ ಮಗುವಿನಲ್ಲಿ ಅರಿವು ಮೂಡುವುದಕ್ಕೆ
ಮುನ್ನವೇ ಹತ್ತಾರು ದೈಹಿಕವ್ಯಾಪಾರಗಳು ಸಿದ್ಧವಾಗಿರುತ್ತವೆ. ಸಹಜವಾಗಿ ಒದಗಿಬಂದ
ನರಮಂಡಲದ ವ್ಯವಸ್ಥೆ ಯಿಂದ ಹೊರಗಿನ ಪ್ರೇರಕಗಳಿಗೆ ಸಮರ್ಪಕವಾದ ಪ್ರತಿಕ್ರಿಯೆಯನ್ನು
ಮಾಡುವ ಸೌಲಭ್ಯ ಮಗುವಿಗೆ ಇರುತ್ತದೆ. ಮಗು ದೊಡ್ಡದಾದ ಮೇಲೂ ಉತ್ಕ್ಷೇಪಕ್ರಿಯೆ
(ರಿಫ್ಲೆಕ್ಸ್ ಆಕ್ಷನ್) ಇದ್ದೇ ಇರುತ್ತದೆ. ಉತ್ಕ್ಷೇಪಕ್ರಿಯೆಗೂ ಅರಿವಿಗೂ ಸಂಬಂಧ ಏನು
ಎಂಬುದು ಮನಶ್ಶಾಸ್ತ್ರದಲ್ಲಿ ಜಿಜ್ಞಾಸೆಗೆ ಬಂದಿದೆ. ಹಲವು ಮನಶ್ಶಾಸ್ತ್ರಜ್ಞರು ಅರಿವು
ಮೂಲಭೂತವಾಗಿ, ಪ್ರಾಣಿಯ ಜೀವನದ ದೃಷ್ಟಿಯಿಂದ ಸಹಜವಾದುದಲ್ಲವೆಂದೂ
ಉತ್ಕ್ಷೇಪಕ್ರಿಯೆಗಳಿಂದಲೇ ಉತ್ಪನ್ನ ವಾದುದೆಂದೂ ಹೇಳುತ್ತಾರೆ. ಜೀಗರ್, ಲೋಎಚ್,
ನುವೆಲ್ ಮುಂತಾದ ಪ್ರಾಣಿಶಾಸ್ರ್ತಜರು ತಮ್ಮ ನಿರೂಪಣೆಯಲ್ಲಿ ಅರಿವನ್ನು ಪಸ್ತಾಪಿಸುವುದೇ
ಇಲ್ಲ. ಅವರ ಪಾಲಿಗೆ ಅರಿವು ಉಚ್ಚಪ್ರಾಣಿಗಳಲ್ಲಿ ಎಂದರೆ ವಾನರ, ಮನುಷ್ಯ ಇವರಲ್ಲಿ
ಆಗಾಗ ಕಾಣಿಸುವ ವ್ಯಾಪಾರವಿಶೇಷ. ಇದೂ ಮಿದುಳು, ನರಮಂಡಲಗಳ ಒಂದು
ವ್ಯವಸ್ಥೆ ಯ ಅಭಿವ್ಯಕ್ತಿ ಅಷ್ಟೆ. ಆದರೆ ಈ ವಾದಕ್ಕಿಂತ ಹೆಚ್ಚು ಪ್ರಚಲಿತವಾದ ವಾದವೆಂದರೆ
ಮಗು ಹುಟ್ಟಿದಾಗಲೇ ಅರಿವು ಮೂಡುವುದೆಂದೂ ಅರಿವಿನಿಂದಲೇ ಎಲ್ಲ ಕ್ರಿಯೆಗಳೂ
(ದೈಹಿಕ, ಮಾನಸಿಕ) ವ್ಯವಸ್ಥಿತವಾಗುವುದೆಂದೂ ಹೇಳುವುದು. ಪ್ರಾಣಿಗಳ ಸಂತತಿಯಲ್ಲಿ
ಮೊದಲ ಸ್ಥಿತಿಗಳಲ್ಲಿ ಉತ್ಕ್ಷೇಪಕ್ರಿಯೆಗಳಾಗುತವೆ ಎಂಬ ನಿಲುವನ್ನು ತಳೆದಿದ್ದಾರೆ. ಪ್ರಯತ್ನದ
ಮಿತವ್ಯಯ ಎಂಬ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಯೂ ಮತ್ತೆ ಮತ್ತೆ
ಪುನರಾವರ್ತಿತವಾದಾಗ ಅರಿವಿನ ಒತ್ತಾಸೆ ಕಮ್ಮಿಯಾಗುತ್ತ ಬಂದು ಕಡೆಗೆ ಆ ಕ್ರಿಯೆ
ಸ್ವಚ್ಛಂದವಾಗಿಬಿಡುತ್ತದೆ. (ಸ್ಪಾನ್ಟೇನಿಯಸ್). ಇದು ಅರಿವು ಉತ್ಕ್ಷೇಪಕ್ರಿಯೆ ಆಗುವ
ಬಗೆ. ಯಾವುದಾದರೂ ಕಾರಣದಿಂದ ಆ ಕ್ರಿಯೆಗೆ ಅಡಚಣೆ ಬಂದಾಗ ಮಾತ್ರ ಅರಿವು
ಒಡನೆಯೇ ಉಂಟಾಗುತ್ತದೆ. ಕೋಣೆಯಲ್ಲಿ ದಿನಂಪ್ರತಿ ಕಾಣುವ ವಸ್ತುಗಳು ನಮ್ಮ
ಅರಿವಿಗೆ ಮೀರಿ ಇರುತ್ತವೆ; ಆದರೆ ಆ ವಸ್ತುಗಳಲ್ಲಿ ಒಂದು ಕಾಣದಾದಾಗ ಅಥವಾ
ಹೊಸದೊಂದು ವಸ್ತು ಸೇರಿದಾಗ, ಅಥವಾ ಇದ್ದ ಭಂಗಿ ಬದಲಾದಾಗ ತಟ್ಟನೆ ಅರಿವು
ಮೂಡುತ್ತದೆ; ಪ್ರತ್ಯಕ್ಷದ ಪ್ರಕಾರಗಳಲ್ಲಿ ಇದೂ ಒಂದು. ಹೀಗೆ ಒಂದೇ ಪ್ರೇರಕನೆಲೆಗೆ
ಸಮನ್ವಯ ಮಾಡಿಕೊಂಡಾಗ ಅರಿವು ಜಾರುವುದನ್ನು ಇಂದ್ರಿಯಾನುಭವದ ಮಟ್ಟಕ್ಕೆ
ಹೊಂದಿಸುವುದು ಎಂದು ವ್ಯವಹರಿಸುತ್ತಾರೆ. ಇಲ್ಲಿ ಅರಿವು ಇಲ್ಲವೆಂದಲ್ಲ; ಅರಿವಿನೊಂದಿಗೆ
ಇರಬೇಕಾದ ಅವದಾನ ಇಲ್ಲವೆಂದು.
ಪ್ರಾಣಿಯ ಬಾಳುವಲ್ಲಿ ಅರಿವು ಬೆಳೆಯುವ ನೆಲೆ ಎನ್ನುವ ಕಲ್ಪನೆ ಇದೆ. ಇದಕ್ಕೆ ಸಂಬಂಧಿಸಿದಂತೆ ನರಮಂಡಲದ ವ್ಯವಸ್ಥೆ ಹೆಚ್ಚು ಹೆಚ್ಚಾಗಿ ಕ್ರಿಯಾಶೀಲವಾಗಿ ಸಮರ್ಥವಾಗು ವುದು. ದೈಹಿಕ ವ್ಯವಸ್ಥೆ ಅಚ್ಚುಕಟ್ಟಾಗುವುದು. ಮಾನಸಿಕ ಪ್ರವೃತ್ತಿಗಳು ಅಭಿವ್ಯಕ್ತವಾಗುವುವು. ಅರಿವಿನ ಪ್ರಕಾರಗಳನ್ನು ದೈಹಿಕ ಉತ್ಕ್ಷೇಪಕ್ರಿಯೆಗಳು, ಇಂದ್ರಿಯಾನುಭವಗಳು, ಪ್ರತ್ಯಕ್ಷಾನುಭವ, ಅನಧಾನ, ಸಹಜ ಪ್ರವೃತಿಗಳು (ಇನ್‍ಸ್ಟಿಂಕ್ಟ್ಸ್), ಭಾವಪ್ರವೃತಿಗಳು, ಸಂಕಲ್ಪಸ್ಮೃತಿ, ಕಲ್ಪನೆ (ಇಮೇಜರಿ), ಭಾಷೆ ಮತ್ತು ಚಿಂತನೆ ಎಂದು ವಿಭಾಗ ಮಾಡುವ ಪದ್ಧತಿ ಇದೆ. ಉತ್ಕ್ಷೇಪಕ್ರಿಯೆಗಳನ್ನು ಅನಭಿವ್ಯಕ್ತ ಅರಿವು ಎಂದು ವ್ಯಹರಿಸುತ್ತಾರೆ. ಜೆ.ಎ.ಗಿಲ್ಬರ್ಟ್ ಎಂಬ ಮನಶ್ಶಾಸ್ತ್ರಜ್ಞ ಯೇಲ್ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ಮಕ್ಕಳ ಇಂದ್ರಿಯಾನುಭವಗಳಿಗೆ ಸಂಬಂಧಪಟ್ಟಂತೆ ಸ್ವಾರಸ್ಯವಾದ ಸಂಶೋಧನೆಗಳನ್ನು ನಡೆಸಿ ಮೊದ ಮೊದಲು ಇಂದ್ರಿಯಾನುಭವಗಳಿಗೆ ವಿಮುಖವಾದ ಮಗು ಬರುಬರುತ್ತ ವಿವೇಕವನ್ನು ಬೆಳೆಸಿಕೊಂಡು ಬರುವ ಬಗೆಯನ್ನು ಈ ಪ್ರಯೋಗಗಳ ಆಧಾರದ ಮೇಲೆ ನಿರೂಪಿಸಿದ್ದಾನೆ. ವಿವೇಕದ ಆವಿಷ್ಕರಣ ಅರಿವಿನ ಪ್ರಭಾವದಿಂದ ಎಂಬುದು ಅವನ ವಾದ. ಪ್ರತ್ಯಕ್ಷಾನುಭವದಲ್ಲೂ ಆರಂಭದಿಶೆಯಲ್ಲಿ ಐಂದ್ರಿಯ ಉತ್ಕ್ಷೇಪಗಳ ಪಾತ್ರವೇ ಹೆಚ್ಚಾಗಿದ್ದು ಅಭ್ಯಾಸಬಲದಿಂದ, ವಿವೇಚನಾಶಕ್ತಿ ಬರುಬರುತ್ತಾ ಮೂಡುವುದೆಂದು ಪೆಯರ್ ಲಾಯ್ಡ್ ಮೋರ್ಗನ್, ಮೆಗ್‍ಡೂಗಲ್, ಮುಂತಾದ ಪ್ರಯೋಗಶೀಲ ಮನಶ್ಶಾಸ್ತ್ರ ಜ್ಞರು ಸ್ಪಷ್ಟಪಡಿಸಿದ್ದಾರೆ. ಇಂದ್ರಿಯಾನುಭವಗಳಲ್ಲಿ ಮೂಲಭೂತವಾದ ವರಣಪ್ರವೃತ್ತಿ (ಸೆಲೆಕ್ಟಿವಿಟಿ) ಇದ್ದೇ ಇರುವುದೆಂದು ಹಲವಾರು ಸಂಶೋಧನೆಗಳು ತೋರಿಸಿವೆ. ಇದರ ಆಧಾರದ ಮೇಲೆ ಸಂಕಲ್ಪವೂ ಅವದಾನವೂ ಕಾಣಿಸಿಕೊಳುವಸ್ತು. ಈ ಕ್ರಿಯೆಗಳಿಗೆ ಅರಿವಿನ ಒತ್ತಡ ಎನ್ನುತ್ತಾರೆ. ಸಮಾವಸ್ಥಾನದ (ಹೋಮೋಸ್ಟ್ಯಾಟಿಸ್) ಪ್ರತಿಪಾದಕರು ಅರಿವನ್ನು ಈ ದೃಷ್ಟಿಯಿಂದಲೇ ವಿಮರ್ಶೆ ಮಾಡಿದ್ದಾರೆ. ಅರಿವು ಅವದಾನದೂಂದಿಗೆ ಸೇರಿದಾಗ ಜ್ಞಾನಕ್ಕೆ ನೆರವಾಗುತ್ತದೆ. (ಎಸ್.ಕೆ.ಆರ್.)