ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುಂಧತಿ ನಾಗ್

ವಿಕಿಸೋರ್ಸ್ದಿಂದ

ಅರುಂಧತಿ ನಾಗ್ : ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ. ಪ್ರಸಿದ್ಧ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ (ನೋಡಿ) ಅವರ ಪತ್ನಿ. ಇವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿರುವಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ವ್ಯಕ್ತಿಯಾಗಿದ್ದರು. ಮರಾಠಿ, ಗುಜರಾತಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಅಭಿನಯಿಸುತ್ತಿದ್ದ ರು. ಇವರು ಕೆಲವೊಮ್ಮೆ ತಿಂಗಳಲ್ಲಿ 42 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ಈ ದಿನಗಳಲ್ಲೇ ಸಹ ರಂಗನಟ ಶಂಕರನಾಗ್ ಅವರ ಪರಿಚಯವಾಯಿತು. ಪರಿಚಯ ಪ್ರೇಮವಾಗಿ ವಿವಾಹ ವಾದರು. ಅನಂತರ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಹಾಗೂ ಚಲನಚಿತ್ರ - ಈ ಎರಡೂ ಕ್ಷೇತ್ರಗಳಲ್ಲಿ ಇಬ್ಬರೂ ಕೆಲಸ ಮಾಡತೊಡಗಿದರು. ಈ ಎಲ್ಲ ಸಂದರ್ಭಗಳಲ್ಲಿ ಪತಿ ಶಂಕರ್ನಾಗ್‍ಗೆ ನೆರವಾದರು. ಕೆಲವು ಸಂದರ್ಭಗಳಲ್ಲಿ ಶಂಕರನಾಗ್ ಅವರಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಶಂಕರನಾಗ್ ಹಿಂದಿಯ ಕಿರುತೆರೆಗಾಗಿ ಸಿದ್ಧಪಡಿಸಿದ ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ಇವರಿಬ್ಬರಿಗೂ ಅಪಾರ ಖ್ಯಾತಿವನ್ನು ತಂದುಕೊ ಟ್ಟಿತು. ಅರುಂಧತಿಯವರು ಅನೇಕ ನಾಟಕ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಎಂಬ ನಾಟಕ ಇವರ ಅಭಿನಯದ ಅತ್ಯಂತ ಜನ ಪ್ರಿಯ ನಾಟಕ. ಇದು ಚಲನಚಿತ್ರವಾ ಗಿಯೂ ಆಪಾರ ಯಶಸ್ವಿಯಾಯಿತು. ಆಕ್ಸಿಡೆಂಟ್, ಗೋಲಿಬಾರ್, ಪರಮೇ ಶಿಯ ಪ್ರೇಮ ಪ್ರಸಂಗ ಇವರ ಅಭಿನ ಯದ ಇತರ ಚಿತ್ರಗಳು. ಮಣಿರತ್ನಂ ಅವರ ದಿಲ್‍ಸೆ ಎಂಬ ಹಿಂದಿ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನಂತರ `ಪಾ’ ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸಿ ಅಪಾರ ಮನ್ನಣೆಗಳಿಸಿದರು. ಶಂಕರ್‍ನಾಗ್ ನಿರ್ದೇಶ£ದ ‘ಒಂದು ಮುತ್ತಿನ ಕಥೆ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ದುಡಿದಿದ್ದಾರೆ. ಕಾರು ಅಪಘಾತವೊಂದರಲ್ಲಿಶಂಕರನಾಗ್ ನಿಧನರಾದಾಗ ಅದೇ ಕಾರಿನಲಿದ್ದ ಅರುಂಧತಿ ಪ್ರಾಣಾಪಾಯದಿಂದ ಪಾರಾದರು. ಪತಿಯನ್ನು ಕಳದುಕೊಂಡು ಕೆಲಕಾಲ ಎಲ್ಲ ಚಟುವಟಿಕೆಗಳಿಂದ ದೂರವಿದ್ದ ಇವರು ಅನಂತರ ಶಂಕರನಾಗ್ ಅವರ ಕನಸಿನ ಕಲ್ಪನೆಯ ರಂಗಶಂಕರ ಎಂಬ ಸಮಗ್ರ ನಾಟಕ ಚಟುವಟಿಕೆಯ ಕೇಂದ್ರವೊಂದರ ನಿರ್ಮಾಣದಲ್ಲಿ ತಮ್ವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದ ಈ ರಂಗಭೂಮಿ ಸಂಕೀರ್ಣ ಯೋಜನೆ ಈಗ ಪೂರ್ಣಗೊಂಡಿದ್ದು ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ (2004). ಸಂಕೇತ್ ಟ್ರಸ್ಟ್ ‘ರಂಗಶಂಕರ’ದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತದೆ. ಗಿರೀಶ್ ಕಾರ್ನಾಡ್ ರಂಗಶಂಕರದ ಅಧ್ಯ ಕ್ಷರು. ಅರುಂಧತಿ ಅದರ ಕಾರ್ಯನಿರ್ವಾಹಕ ಸದಸ್ಯ ರು.