ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರೆ ಅಥವಾ ಕಲ್ಲುಗಣಿ

ವಿಕಿಸೋರ್ಸ್ದಿಂದ

ಅರೆ ಅಥವಾ ಕಲ್ಲುಗಣಿ : ನೆಲದಲ್ಲಿ ಹುದುಗಿರುವ ನೆಲಶಿಲೆಗಳನ್ನು ಬೇರ್ಪಡಿಸಿ ಹೊರತೆಗೆಯುವ ಸ್ಥಳ (ಕ್ವಾರಿ). ಹೀಗೆ ಬೇರ್ಪಡಿಸಿದ ಶಿಲೆಗಳನ್ನು ಕಟ್ಟಡಗಳ ನಿರ್ಮಾಣದಲ್ಲಿ ಹಾಸುಗಲ್ಲು, ಪಾಯಗಲ್ಲು, ಚಪ್ಪಡಿ ಕಲ್ಲು ಮುಂತಾದ ರೀತಿಯಲ್ಲಿ ಉಪಯೋಗಿಸುವರು. ಅರೆಗಳಲ್ಲಿ ಎರಡು ವಿಧ: 1 ಬಯಲಗಳು (ಓಪನ್ ಕ್ವಾರೀಸ್); 2 ನೆಲದ ಅಡಿಯಲ್ಲಿರುವ ಅರೆಗಳು (ಅಂಡರ್‍ಗ್ರೌಂಡ್ ಕ್ವಾರೀಸ್).

ಬಯಲು ಅರೆಗಳು : ಇವು ಸಾಮಾನ್ಯವಾಗಿ ಭೂಮಿಯ ಮಟ್ಟದ ಮೇಲೆಯೇ ಇರುವುವು. ಇವನ್ನು ಅಂತಸ್ತು ಅರೆಗಳೂ (ಷೆಲ್ಫ್ ಕ್ವಾರೀಸ್) ಎನ್ನಲೂಬಹುದು. ಮೇಲುಹೊದಿಕೆ ಇಲ್ಲದ ಈ ಶಿಲೆಗಳನ್ನು ಭೂಮಿಯ ಹೊರಮೈಯಿಂದಲೇ ತೋಡಿ ತೆಗೆಯುವರು.

ನೆಲದಡಿಯಲ್ಲಿರುವ ಅರೆಗಳು : ಇಲ್ಲಿ ಭೂಮಿಯೊಳಗಿರುವ ಬಂಡೆಗಳಿಂದ ಶಿಲೆಗಳನ್ನು ಸೀಳಿ ಹೊರಕ್ಕೆ ತೆಗೆಯುತ್ತಾರೆ.

ಅರೆಗಳ ಉತ್ಪನ್ನ ಗಳು : 1 ಪ್ರಮಾಣಕಲ್ಲು (ಡೈಮೆನ್‍ಷನಲ್ ಆರ್‍ಸೈಜ್‍ಸ್ಟೋನ್); 2 ಜರ್ಝರಿತಕಲ್ಲು (ಕ್ರಷ್ಟ್ ಸ್ಟೋನ್); 3 ಮುರಿದಕಲ್ಲು (ಬ್ರೋಕನ್ ಸ್ಟೋನ್).

ಪ್ರಮಾಣಕಲ್ಲು : ಇದು ನಿರ್ದಿಷ್ಟವಾದ ಆಕೃತಿ ಮತ್ತು ಗಾತ್ರವಿರುವ ಹೆಚ್ಚು ಕಡಿಮೆ ಒಂದೇ ರೀತಿಯ ಕಲ್ಲು. ಇದನ್ನು ಕಟ್ಟಡಗಳನ್ನು ಕಟಲು ಹೇರಳವಾಗಿ ಉಪಯೋಗಿಸುವರು (ಉದಾ: ಗ್ರಾನೈ ಟ್, ಮರಳುಗಲ್ಲು, ಸುಣ್ಣPಲ್ಲು, ಮತ್ತು ಇತರೆ ಕಲ್ಲುಗಳು). ಜರ್ಝರಿತ ಅಥವಾ ಚೂರುಕಲ್ಲು : ಪ್ರಮಾಣಕಲ್ಲಿನ ಉತ್ಪಾದನೆ ಇಳಿಮುಖ ವಾದುದರಿಂದ ಜರ್ಝರಿತ ಕಲ್ಲಿನ ಕೈಗಾರಿಕೆ ಅಭಿವೃದ್ಧಿ ಹೊಂದಿತು. ಬೆಲೆಯಲ್ಲಿ ಇದು ಪ್ರಮಾಣ ಕಲಿಗಿಂತಲೂ ಕಡಿಮೆ, ಇದನ್ನು ಟನ್ ಅಥವಾ ಘನಗಜದ ಆಧಾರದ ಮೇಲೆ ಮಾರುವರು, ಈ ವ್ಯತ್ಯಾಸ ದೂರ ಸಾಗಾಣಿಕೆಯಲ್ಲಿ ಕಡಿಮೆ ಭಾಗವಾದರೂ ಜರ್ಝರಿತ ಕಲ್ಲಿನ ಬೆಲೆಯಲ್ಲಿ ಅತಿ ಮುಖ್ಯ ವಿಷಯ.

ಮುರಿದ ಕಲ್ಲು: ನೀರಿನ ಕಾರ್ಯದಿಂದಾಗುವ ಸತತ ಮತ್ತು ಅಲೆಗಳ ಕ್ರಿಯೆಯಿಂದ ಭೂಮಿಯ ಮೇತ್ಲೊಗಟೆಯನ್ನು ರಕ್ಷಿಸಲು ಮುರಿದ ಕಲ್ಲುಗಳನ್ನು ರಕ್ಷಣಾ ಪದರವನ್ನಾಗಿ ಉಪಯೋಗಿಸುವರು. ಶಿಲೆಯ ತಾಂತ್ರಿಕ ಗುಣ ನಿರ್ಧಾರದಲ್ಲಿ ಗಮನಿಸಬೇಕಾದ ಅಂಶಗಳು: ಹಿಮಕ್ರಿಯೆ(ಹಿಗ್ಗುವಿಕೆ ಮತ್ತು ಕುಗ್ಗುವಿಕೆ): ಬಿಸಿಲಿನಲ್ಲಿ ಬಂಡೆ ಕಾಯುವುದರಿಂದ ಅದರ ಮೈ ಹಿಗ್ಗುವುದು, ಮಳೆಯ ನೀರು ಅದರ ಮೇಲೆ ಬಿದ್ದಾಗ ಅದು ಕುಗ್ಗುವುದು. ಈ ರೀತಿ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದ ಶಿಲೆಯ ಹೊರಪದರಗಳು ಶಿಥಿಲವಾಗಿ ಕಳಚಿ ಬೀಳುವುವು; ಮತ್ತು ಬಂಡೆಗಳಲ್ಲಿ ಬಿರುಕುಗಳುಂಟಾಗುವುವು. ಶೀತವಲಯ ಪ್ರದೇಶಗಳಲ್ಲಿ ಶಿಲೆಗಳಲ್ಲಿರುವ ಸೂಕ್ಮ ರಂಧ್ರಗಳಲ್ಲಿ ಹಿಮಗಟ್ಟಿದ ನೀರು ವಿಸ್ತಾರಗೊಳ್ಳಲು ಸಾಕಷ್ಟು ಸ್ಥಳಾವಕಾಶವಿಲ್ಲದಿರುವಾಗ ಶಿಲೆಗಳಲ್ಲಿ ಸಾಮಾನ್ಯವಾಗಿ ಬಿರುಕುಗಳುಂಟಾಗುವುವು. ರಂಧ್ರಗಳು ದೊಡ್ಡವಾಗಿದ್ದರೆ ನೀರನ್ನು ಶೀಘ್ರವಾಗಿ ಬಿಟ್ಟುಕೊಡುವುವು. ಆಗ ಶೀತಸ್ಥಿತಿ ಯಲ್ಲಿಯೂ ಕುಗ್ಗುವಿಕೆಯ ಅಪಾಯಕ್ಕೆ ಅವಕಾಶವಿರುವುದಿಲ್ಲ. ಶಿಲೆಗಳು ಶಿಥಿಲತೆ, ಹೆಪುಗಟ್ಟುವ ಮತ್ತು ಕರಗುವ ಕ್ರಿಯೆಗಳಿಗೊಳಗಾದಾಗ ಕುಗ್ಗುವಿಕೆ ಬಹಳ ತೀವ್ರವಾಗಿರುತ್ತದೆ. ಶಿಲೆ ಹೆಚ್ಚಾಗಿ ಲೋಮನಾಳಾಕರ್ಷಣ (ಕ್ಯಾಪಿಲ್ಯಾರಿಟಿ) ಪ್ರಭಾವಕ್ಕೆ ಒಳಗಾದಾಗ ಅಥವಾ ಹೆಚಿನ ಬಿರುಕುಗಳಿಂದ ಕೂಡಿದ್ದರೆ ಅದು ಕುಗ್ಗುವುದರ ಮೂಲಕ ಶೀಧ್ರವಾಗಿ ನಾಶವಾಗುವುದು.


ರಾಸಾಯನಿಕ ವಿನಾಶ: ದೊಡ್ಡ ನಗರಗಳಲ್ಲಿ ಕಟ್ಟಡದ ಶಿಲೆಗಳು ವಿಧ್ವಂಸಕ ವಸ್ತುಗಳಿಗಿಂತ ವಾಯುಮಂಡಲದ ಅನಿಲಗಳಿಂದ ಹೆಚ್ಚಿನ ತೊಂದರೆಗೊಳಗಾಗುತ್ತವೆ. ಇವುಗಳಲ್ಲಿ ಇಂಗಾಲಾಮ್ಲ (CO2) ಮತ್ತು ಗಂಧಕದ ಆಮ್ಲಗಳು (SO2-SO3) ಮುಖ್ಯ ವಿನಾಶಕಾರಿ ಅನಿಲಗಳು.

ಭೌತಿಕ ವಿನಾಶ: ಈ ವರ್ಗದ ವಿನಾಶಕಾರಿಗಳು ಕಲ್ಲಿನ ಬಿರುಕುಗಳನ್ನು ಅಥವಾ ಬಂಧವಸ್ತುಗಳನ್ನು ನಾಶಗೊಳಿಸಬಹುದು. ಕೆಲವು ವೇಳೆ ಕಟ್ಟಡಗಳ ಶಿಲೆಯ ಹೊರ ಮೈಮೇಲೆ ಲವಣದ ಸ್ಫಟಿಕೀಕರಣ ಬಿಳಿ ಚುಕ್ಕೆಗಳ ರೀತಿಯಲ್ಲಿ ಕಾಣಿಸಿಕೊಳ್ಳುವುದು, ಇದರ ಹೆಸರು ಉಪ್ಪೇಳುವಿಕೆ (ಎಫ್ಲೋರೆಸೆನ್ಸ್), ನಿರಂತರವಾಗಿ ಮಳೆ ಬಿದ್ದಾಗ ಶಿಲೆಯ ಹೊರಮೈ ಮೇಲಿರುವ ಸೂಕ್ಮ ರಂಧ್ರಗಳೂ ಪರ್ಯಾಪ್ತ ಲವಣ ದ್ರಾವಣದಿಂದ ತುಂಬಿದಾಗ ಹರಳುಗಳ ಬೆಳವಣಿಗೆ ಉಂಟಾಗುವುದು. ಈ ಬೆಳವಣಿಗೆಗೆ ಅಧಿಕ ಜಲಸಮಸ್ಥಿತಿ ಒತ್ತಡವನ್ನು (ಹೈಡ್ರೊಸ್ಟ್ಯಾಟಿಕ್ ಪ್ರೆಷರ್) ಉಂಟುಮಾಡುವುದು. ಇದರ ಪರಿಣಾಮವಾಗಿ ಶಿಲೆ ಶಿಥಿಲಗೊಳ್ಳುವುದು. ಅಲ್ಲದೆ ನಿರಂತರ ಜಲಸಂಯೋಗದಿಂದ (ಹೈಡ್ರೇಷನ್) ಹರಳಿನ ಗಾತ್ರ ಹೆಚ್ಚಾಗಿ ಜಲಸಮಸ್ಥಿತಿ ಒತ್ತಡ ಹೆಚ್ಚಾಗುವುದು. ಅಧಿಕ ಉಷ್ಣ ಮತ್ತು ಶೀತದ ಪರಿಣಾಮವಾಗಿ ಶಿಲೆಯ ಹೊರಪದರಗಳು ಶಿಥಿಲಗೊಂಡು ಕಳಚಿ ಬೀಳುವುವು. ಉದಾ : ಶಿಲೆ ಕ್ಯಾಲ್ಸೈಟ್ ಮತ್ತು ಫೆಲ್ಡ್‍ಸ್ಪಾರ್ ಖನಿಜಗಳಿಂದ ಕೂಡಿದ್ದಲ್ಲಿ ಅದು ಕಾದಾಗ ಕ್ಯಾಲ್ಸೈಟ್ ಖನಿಜ ಸ್ಫಟಿಕದ ಅಕ್ಷರೇಖೆಯ (C-ಅಕ್ಷರೇಖೆಯ) ಉದ್ದಕ್ಕೂ ಹಿಗ್ಗುವುದು ಮತ್ತು ಈ ಅಕ್ಷರರೇಖೆಗೆ ಲಂಬವಾಗಿರುವ ದಿಕ್ಕಿನ ಉದ್ದಕ್ಕೂ (A ಅಥವಾ B ಅಕ್ಷರೇಖೆ) ಕುಗ್ಗುವುದು, ಆರ್ಥೊಕೇಸ್ ಫೆಲ್ಡ್‍ಸ್ಟಾರ್‍ನಲ್ಲಿ ಹಿಗ್ಗುವಿಕೆ A ಅಕ್ಷರೇಖೆಗಿಂತಲೂ B ಅಕ್ಷರೇಖೆಯ ದಿಕ್ಕನಲ್ಲಿ 12ರಷ್ಟು ಹೆಚ್ಚಾಗಿರುವುದು. ಶಾಖದ ವ್ಯತ್ಯಾಸವೂ ಶಿಲೆಯ ಹೊರ ಪದರವನ್ನು ಚಕ್ಕೆಯಂತೆ ಎಬ್ಬಿಸುವುದು ಅಥವಾ ಪದರ ಪದರವಾಗಿ (ಎಕ್ಸ್ ಫೋಲಿಯೆಷನ್) ಕಳಚಿ ಬೀಳುವಂತೆ ಮಾಡುವುದು. (ಜಿ.ಎಸ್.ಎ.)