ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಂಗೀರ್ಪುರ

ವಿಕಿಸೋರ್ಸ್ದಿಂದ

ಅಲಂಗೀರ್‍ಪುರ 1958-59ರಲ್ಲಿ ನಡೆಸಿದ ಉತ್ಖನನದಲ್ಲಿ ಹರಪ್ಪ ಸಂಸ್ಕøತಿಯ ಅವಶೇಷಗಳು ಸಿಕ್ಕ ಗ್ರಾಮ. ದೆಹಲಿಯಿಂದ 28 ಮೈ. ದೂರದಲ್ಲಿದೆ. ಇಲ್ಲಿ ಹರಪ್ಪ ಸಂಸ್ಕøತಿಯ ಪದರಗಳ ಮೇಲೆ ಅನುಕ್ರಮವಾಗಿ ಚಿತ್ರಿತ ಬೂದು ಬಣ್ಣದ ಮಡಕೆಗಳ ಪದರಗಳೂ, ಉತ್ತರದ ಹೊಳಪು ಕಪ್ಪು ಬಣ್ಣದ ಮಡಕೆಗಳ ಪದರಗಳೂ ಶುಂಗರ ಕಾಲದ ಅವಶೇಷಗಳೂ ಕಂಡುಬಂದಿವೆ. ಇವು 4000 ವರ್ಷಗಳ ಹಿಂದಿನಿಂದ ಗಂಗಾ ಬಯಲಿನಲ್ಲಿ ಪಸರಿಸಿದ್ದ ವಿವಿಧ ಸಂಸ್ಕøತಿಗಳ ಬಗ್ಗೆ ಮಾಹಿತಿ ದೊರಕಿಸಿಕೊಡುತ್ತವೆ.

(ಎಸ್.ಎನ್.)