ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆಕ್ಸಾಂಡರ್ ದ್ವೀಪಗಳು

ವಿಕಿಸೋರ್ಸ್ದಿಂದ

ದಕ್ಷಿಣ ಅಂಟಾರ್ಕ್‌ಟಿಕ್‌ ಪ್ರದೇಶದಲ್ಲಿರುವ ಈ ದ್ವೀಪಗಳಲ್ಲಿನ ಮುಖ್ಯ ಭೂಭಾಗ ಗ್ರಹ್ಯಾಮ್‌ಲ್ಯಾಂಡ್‌ ಪರ್ಯಾಯ ದ್ವೀಪದ ಪಶ್ಚಿಮಕ್ಕಿದೆ. ಬೆಲಿಂಗ್‌ಹೌಸನ್‌ ಇವನ್ನು ಕಂಡುಹಿಡಿದು (1821) ಅಲೆಕ್ಸಾಂಡರ್ ಭೂ ಪ್ರದೇಶ ಎಂಬುದಾಗಿ ಹೆಸರಿಟ್ಟ (ಈ ದ್ವೀಪಗಳ ಭೌಗೋಳಿಕ ಮೊದಲಾದ ಲಕ್ಷಣವನ್ನು 1940ರಲ್ಲಿ ತಿಳಿಯಲಾಯಿತು). ಫಾಕ್‌ಲೆಂಡ್‌ ದ್ವೀಪಗಳ ವಿಸ್ತೃತ ಭಾಗವಾಗಿರುವ ಈ ದ್ವೀಪಗಳಲ್ಲಿ ಮೀನುಗಾರಿಕೆ ವಿಶೇಷ. ತಿಮಿಂಗಿಲಗಳನ್ನು ಹಿಡಿವ ತಂಡಗಳು ಈ ದ್ವೀಪಗಳಿಗೆ ಆಗಾಗ್ಗೆ ಬರುತ್ತಿರುತ್ತವೆ.