ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆನ್ ಫ್ಲೇಗರ್ ಆ್ಯಡಂ ಗೊಟ್ಲಾಬ್

ವಿಕಿಸೋರ್ಸ್ದಿಂದ
Jump to navigation Jump to search

1770-1850. ಡೆನ್ಮಾರ್ಕಿನ ಕವಿ, ನಾಟಕಕಾರ. ಡೆನ್ಮಾರ್ಕಿನ ರೊಮ್ಯಾಂಟಿಕ್ ಪಂಥದ ಸಾರಸರ್ವಸ್ವವನ್ನು ಅವನ ನಡುಬೇಸಗೆ ಇರುಳಿನ ರೂಪಕವೆಂಬ ನಾಟಕೀಯ ಕವನದಲ್ಲಿ ಗುರುತಿಸಬಹುದು. ಪುರಾತನ ನಾರ್ಸ್ ಕಥಾನಕ ರೂಢಿಗಳನ್ನನುಸರಿಸಿ ಬರೆದ ಇವನ ಕವನ ಸಂಕಲನ ದೀರ್ಘ ಭವ್ಯಕಾವ್ಯಗಳಲ್ಲಿ ಹಾಗೂ ಗದ್ಯಕಥೆಗಳಲ್ಲಿ ಇವನ ಕಾವ್ಯಪ್ರಜ್ಞೆ, ಪ್ರಯೋಗಶೀಲ ಮನೋಧರ್ಮ ವ್ಯಕ್ತವಾಗಿವೆ. ಡೆನ್ಮಾರ್ಕಿನಲ್ಲಿ ಮೊಟ್ಟಮೊದಲು ಐತಿಹಾಸಿಕ ದುರಂತನಾಟಕವನ್ನು ರಚಿಸಿ ಪ್ರಸಿದ್ಧನಾದ ಇವನ ರಚನೆಗಳಲ್ಲಿನ ವಸ್ತುವೈವಿಧ್ಯವನ್ನು ತಂತ್ರಪರಿಣತಿಯನ್ನು ವಿಮರ್ಶಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 1830ರಲ್ಲಿ ಈತ ತನ್ನ ಆತ್ಮಚರಿತ್ರೆಯನ್ನು ರಚಿಸಿದ.