ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲ್ತೂಸಿಯಸ್ ಜೊಹಾನಸ್

ವಿಕಿಸೋರ್ಸ್ದಿಂದ
Jump to navigation Jump to search

(1557-1638). ಜರ್ಮನ್ ಕಾಯಿದೆ ಪಂಡಿತ. ರಾಜನೀತಿಶಾಸ್ತ್ರಜ್ಞ. ಕೆಲ್ವಿನ್ನನ ಅನುಯಾಯಿ. ಲೌಕಿಕ ಮತ್ತು ಧಾರ್ಮಿಕ ನಿದರ್ಶನಗಳೊಂದಿಗೆ ಈತ ಸುಸಂಘಟಿತ ರಾಜನೀತಿಶಾಸ್ತ್ರವೊಂದನ್ನು ಬರೆದಿದ್ದಾನೆ (1610). ರಾಜನೀತಿಯ ಪಾಂಕ್ತವಾದ ಚರಿತ್ರೆ, ಆಧುನಿಕ ರಾಜನೀತಿಯ ವಿವರಗಳಿಂದ ಈ ಗ್ರಂಥ ಮುಖ್ಯವಾಗಿದೆ. ಸಮಾಜ ಅನೇಕ ಘಟಕಗಳಿಂದ, ಅನೇಕ ಸ್ತರಗಳಿಂದ ಕೂಡಿದ್ದು ಎಲ್ಲ ಗುಂಪುಗಳಿಗೂ ಸಾಮೂಹಿಕ ಸಮ್ಮತಿಯೇ ಆಧಾರವಾಗಿದೆ. ಹಾಗೆಯೇ ರಾಷ್ಟ್ರದ ಉಗಮ ವಿಕಾಸಗಳಿಗೆ ಸಾಮೂಹಿಕ ಸಮ್ಮತಿಯೇ ಅಡಿಗಲ್ಲು. ಸಾರ್ವಭೌಮ ಅಧಿಕಾರ ವ್ಯಕ್ತಿಯಲ್ಲಿಲ್ಲ, ಜನತೆಯಲ್ಲಿದೆ-ಇವು ಆತ ಮಂಡಿಸಿರುವ ಮುಖ್ಯ ವಿಚಾರಗಳು.