ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲ್ ಮಸೂದ್

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಬಾಗದಾದಿನ ಮುಸ್ಲಿಂ ಚರಿತ್ರಕಾರ ಮತ್ತು ಪ್ರವಾಸಿ. ಹೊನ್ನಿನ ಹುಲ್ಲುಗಾವಲು ಎಂಬ ಇವನ ಗ್ರಂಥ ಬಲು ಹೆಸರಾದುದು. ಇದು ಅರಬ್ಬರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ತಿಳಿಯಲು ಉಪಯುಕ್ತವಾಗಿದೆ. ಮಸೂದನನ್ನು ಅರಬ್ಬರ ಹೆರೋಡೊಟಸ್ ಎಂದು ಪರಿಗಣಿಸಿದ್ದಾರೆ. ಇವನು ಬಹುಶಃ ಇಸ್ಲಾಂ ಧರ್ಮ ಪ್ರಚಾರದಲ್ಲಿದ್ದ ಕಡೆಗಳಲ್ಲೆಲ್ಲ ಪ್ರವಾಸಮಾಡಿ ಭಾರತಕ್ಕೂ ಅನೇಕ ಸಲ ಬಂದಿರುವಂತೆ ಕಂಡುಬರುತ್ತದೆ (900-40). ಇವನು ಹುಟ್ಟಿದ ಕಾಲ ಗೊತ್ತಿಲ್ಲವಾದರೂ 956ರಲ್ಲಿ ನಿಧನನಾದನೆಂದು ತಿಳಿದುಬಂದಿದೆ.