ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸ್ಗ್ರಿಮ್ಸನ್, ಐಸ್ಟೀನ್

ವಿಕಿಸೋರ್ಸ್ದಿಂದ

ಅಸ್ಗ್ರಿಮ್‍ಸನ್, ಐಸ್ಟೀನ್

ಹದಿನಾಲ್ಕನೆಯ ಶತಮಾನದ ನಾರ್ವೆ ದೇಶದ ಕವಿ. ಆ ಯುಗದಲ್ಲಿ ನಾರ್ವೆಯ ಸಾಹಿತ್ಯ ತೀರಾ ಕ್ಷೀಣದೆಸೆಗಿಳಿದಿತ್ತು. ಆಗ ರಚಿತವಾದ ಕೆಲವೇ ಕೃತಿಗಳಲ್ಲಿ ಹೆಸರಿಸಬಹುದಾದುವೆಂದರೆ ಸನ್ಯಾಸಿ ಐಸ್ಟೀನ್‍ನ ಲಿಲ್ಜಾ. ಧಾರ್ಮಿಕವಸ್ತುವನ್ನುಳ್ಳ ಈ ಕವನದಲ್ಲಿ ಅಭಿವ್ಯಕ್ತವಾಗಿರುವ ಲೇಖಕನ ಸೃಜನಶಕ್ತಿ ಮತ್ತು ವ್ಯಕ್ತಿತ್ವಗಳು ವಿಶಿಷ್ಟವೂ ಅಸಾಧಾರಣವೂ ಆಗಿವೆ.

(ಎಂ.ಆರ್.)