ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸ್ಸಾಂ ಟ್ರಿಬ್ಯೂನ್
ಗೋಚರ
ಅಸ್ಸಾಂ ಟ್ರಿಬ್ಯೂನ್ 1938ರಲ್ಲಿ ಪ್ರಾರಂಭವಾದ ಅಸ್ಸಾಂ ಪ್ರಾಂತ್ಯದ ಪ್ರಮುಖ ದೈನಂದಿನ ಇಂಗ್ಲೀಷ್ ಪತ್ರಿಕೆ. ಸ್ವತಂತ್ರ ನೀತಿಯನ್ನು ಪರಿಪಾಲಿಸಿಕೊಂಡು ಬರುತ್ತಿರುವ ಈ ಜನಪ್ರಿಯ ಪತ್ರಿಕೆಯ ಅಂಗವಾಗಿ 1955ರಲ್ಲಿ ಅಸ್ಸಾಂ ಬಾಣಿ ಎಂಬ ಅಸ್ಸಾಮೀ ಭಾಷೆಯ ದಿನಪತ್ರಿಕೆ ಸ್ಥಾಪಿತವಾಗಿದೆ. ಖಚಿತವಾದ ಸುದ್ದಿಗಳಿಗೆ, ಪ್ರಾಮಾಣಿಕತೆಗೆ ಮತ್ತು ವಿಶೇಷ ಲೇಖನಗಳಿಗೆ ಹೆಸರಾದ ಇದರ ಪ್ರಗತಿಗೆ ಕಾರಣರಾದವರು, ಸಂಪಾದಕ ಎಲ್. ಎಸ್. ಫೂಕನ್. ಈಗಿನ ಸಂಪಾದಕ ಪಿ ಜಿ ಬರುವಾ.
(ಎನ್.ಕೆ.)