ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಹಮದ್ 3
ಗೋಚರ
ಅಹಮದ್ (1703-1736). ರಷ್ಯದ ಚಕ್ರವರ್ತಿ ಪೀಟರ್ ಮಹಾಶಯ ಸ್ವೀಡನ್ನಿನ ಹನ್ನೆರಡನೆಯ ಚಾರಲ್ಸನನ್ನು ಪೊಲ್ಟಾವ ಕಾಳಗದಲ್ಲಿ ಸೋಲಿಸಿದಾಗ ಪರಾಭವ ಹೊಂದಿದ ಚಾರಲ್ಸನಿಗೆ ಆಶ್ರಯವಿತ್ತ. ಚಾರಲ್ಸನ ಸೂಚನೆಯ ಮೇಲೆ ರಷ್ಯದೊಡನೆ ಯುದ್ಧ ಹೂಡಿದ. ಪರಿಣಾಮವಾಗಿ ಅಸಾóವ್ ತುರ್ಕಿಯ ಸ್ವಾಧೀನಕ್ಕೆ ಬಂತು. ವೆನಿಸ್ ಮತ್ತು ಆಸ್ಟ್ರಿಯಾಗಳೊಡನೆ ಯುದ್ಧ ಪ್ರಾರಂಭವಾಯಿತು. ತುರ್ಕಿಯೊಂದಿಗೆ ಮೈತ್ರಿ ಹೊಂದಿದ್ದ ಇಂಗ್ಲೆಂಡ್ ಮತ್ತು ಫ್ರಾನ್ಸ್ ರಾಜ್ಯಗಳ ಮಧ್ಯಸ್ತಿಕೆಯಿಂದ ಪಸಾರೋವಿಟ್ಸ್ ಒಪ್ಪಂದವಾಗಿ, ವೆನಿಸ್‍ನಿಂದ ಗೆದ್ದುಕೊಂಡಿದ್ದ ಪ್ರಾಂತ್ಯಗಳು ತುರ್ಕಿಗೆ ಉಳಿದವು. ಆದರೆ ಹಂಗೇರಿ ಮತ್ತು ಸರ್ಬಿಯದ ಒಂದು ಭಾಗವನ್ನು ತುರ್ಕಿ ಬಿಟ್ಟುಕೊಡಬೇಕಾಯಿತು. ಜಾನಿಸ್ಸರೀಸ್ ಎಂಬ ಸುಶಿಕ್ಷಿತ ಸೈನ್ಯದಳದವರು ತುರ್ಕಿಯಲ್ಲಿ ಬೆಳೆಯುತ್ತಿದ್ದ ಹೊಸ ಶ್ರೀಮಂತ ವರ್ಗಕ್ಕೆ ವಿರೋಧವಾಗಿ ದಂಗೆಯದ್ದು ಅಹಮದ್‍ನನ್ನೂ ಪ್ರಮುಖ ಬೆಂಬಲಿಗರನ್ನೂ ಸೆರೆಗೆ ತಳ್ಳಿ ಅವನ ಅಣ್ಣನ ಮಗ ಮೊದಲನೇ ಮಹಮೂದ್‍ನನ್ನು ಸುಲ್ತಾನ ಪದವಿಗೇರಿಸಿದರು.