ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಡರ್ಸನ್, ಡ್ಯಾನ್

ವಿಕಿಸೋರ್ಸ್ ಇಂದ
Jump to navigation Jump to search

ಆಂಡರ್‍ಸನ್, ಡ್ಯಾನ್ (1888-1920). ಸ್ವೀಡನ್ನಿನ ಕಾದಂಬರಿಕಾರ ಮತ್ತು ಕವಿ. ಡಾಲ್ರಾನಾ ಎಂಬ ಸ್ಥಳದಲ್ಲಿ ಇದ್ದಲು ಮಾಡಿ ಮಾರಿ ಜೀವನ ಸಾಗಿಸುತ್ತಿದ್ದ. ಸ್ವೀಡನ್ನಿನ ಅರಣ್ಯಪ್ರಾಂತ್ಯದ ಇದ್ದಲು ತಯಾರಿಕೆಗಾರರ ಕಡು ಕಷ್ಟಮಯವಾದ ಜೀವನವನ್ನು ಚಿತ್ರಿಸುವ ಕಾದಂಬರಿಗಳನ್ನು ಸಣ್ಣಕಥೆಗಳನ್ನೂ ರಚಿಸಿದ್ದಾನೆ. ಆದರೆ ಅವನ ಅತ್ಯಂತ ಆತ್ಮೀಯವಾದ ಕೃತಿಗಳು ಅವನ ಕವಿತೆಗಳು. ಆಧುನಿಕ ಜಗತ್ತಿನ ಪ್ರಭಾವಗಳ ಪರಿಣಾಮವಾಗಿ ಹದಗೆಟ್ಟ ಅವನ ಮನಸ್ಸು, ನೆಮ್ಮದಿಗಾಗಿ ಪಡುವ ಪಾಡು ಈ ಕವನಗಳ ಮುಖ್ಯ ವಿಷಯ. ಈ ತೆರದ ಚಿತ್ತಕ್ಷೋಭೆ, ಒಂಟಿತನ, ಭೀತಿಗಳು ಪ್ರಪಂಚದ ಮಹಾಯುದ್ಧಗಳೆರಡರ ನಡುವಣ ಅವಧಿಯ ಹಲವು ಸ್ವೀಡಿಷ್ ಕವಿಗಳಲ್ಲಿ ಕಂಡುಬರುತ್ತದೆ. (ಎಂ.ಆರ್.)