ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಧ್ರಪ್ರಭಾ

ವಿಕಿಸೋರ್ಸ್ದಿಂದ

ಆಂಧ್ರಪ್ರಭಾ ಪ್ರಮುಖ ತೆಲುಗು ದಿನಪತ್ರಿಕೆ. ಸ್ಥಾಪನೆ 1939. ಪ್ರಾರಂಭ ಮದರಾಸಿನಲ್ಲಿ. ಪ್ರಥಮ ಸಂಪಾದಕ ಖಾಸಾ ಸುಬ್ಬರಾವ್. ಈಗ ಇಂಡಿಯನ್ ಎಕ್ಸ್‍ಪ್ರೆಸ್ ಗುಂಪಿನದಾಗಿದೆ. ವಾರಪತ್ರಿಕೆಯಾದ ಭಾನುವಾರದ ಸಂಚಿಕೆ ವರ್ಣರಂಜಿತವಾಗಿದ್ದು ವೈವಿಧ್ಯಪೂರ್ಣವಾಗಿದೆ. ಅಲ್ಲದೆ ಇದೇ ಗುಂಪಿನ ಆಂಧ್ರಪ್ರಭಾ ಇಲಸ್ಟ್ರೇಟೆಡ್ ವೀಕ್ಲಿಯೂ ಒಳ್ಳೆಯ ವಾರ ಪತ್ರಿಕೆ ಎನಿಸಿದೆ. ಸುದ್ದಿಸಮಾಚಾರ ಸಂಗ್ರಹಣ, ನಿರೂಪಣ, ಪ್ರಚಲಿತ ವಿಷಯಗಳ ಮೇಲಿನ ವಿಶೇಷ ಲೇಖನಗಳು, ಸಂಪಾದಕೀಯಗಳಿಂದಾಗಿ ಇವು ಅತ್ಯಧಿಕ ಪ್ರಸಾರವುಳ್ಳವಾಗಿವೆ. ಆಂಧ್ರಪ್ರಭಾ ವಾಸವಿ ಕಮ್ಯೂನಿಕೇಶನ್ಸ್ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಿದೆ. ಹೈದರಾಬಾದ್ ಕೇಂದ್ರ ಕಾರ್ಯಾಲಯ. ಸಂಪಾದಕರು ಸತೀಶ್ ಚಂದ್ರ. ಹೈದರಾಬಾದ್, ತಿರುಪತಿ, ಗುಂಟೂರು, ಕರೀಂನಗರ್, ವಿಜಯವಾಡ, ವಿಶಾಖಪಟ್ಟಣಂ ಮತ್ತು ರಾಜಮಹೇಂದ್ರಿ ಕೇಂದ್ರಗಳಿಂದ ಈ ಪತ್ರಿಕೆಯ ಆವೃತ್ತಿಗಳು ಪ್ರಕಟವಾಗುತ್ತಿವೆ.

(ಟಿ.ಟಿ.ಎಸ್.)