ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಫೋರ
ಗೋಚರ
ಆಂಫೋರ ಈಜಿಪ್ಟ್, ಗ್ರೀಸ್, ಕ್ರೀಟ್ ಮುಂತಾದ ದೇಶಗಳಲ್ಲಿ ಧಾನ್ಯವನ್ನು ಮದ್ಯವನ್ನು ಶೇಖರಿಸಲು ಹಿಂದೆ ಬಳಕೆಯಲ್ಲಿದ್ದ ಗುಡಾಣಗಳು, ಇವುಗಳ ಬಾಯ ಇಕ್ಕಡೆಗಳಲ್ಲೂ ಹಿಡಿಗಳಿರುತ್ತವೆ. ರೋಮ್ ಸಾಮ್ರಾಜ್ಯದ ಉಚ್ಚ್ರಾಯ ಕಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಲ್ಲಿ ತಯಾರಿಸುತ್ತಿದ್ದ ಆಂಫೋರಗಳು ಪೂರ್ವ ಆಫ್ರಿಕಾ, ಪಶ್ಚಿಮ ಏಷ್ಯ ಭಾರತ ಮತ್ತು ಚೀನದಲ್ಲಿ ದೊರಕಿದ್ದು ಅಂದಿನ ವಿಶಾಲ ವಾಣಿಜ್ಯ ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.
ಚಿತ್ರ-1 (ಎಸ್.ಎನ್.)