ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಕ್ರಾ

ವಿಕಿಸೋರ್ಸ್ದಿಂದ

ಆಕ್ರಾ ಆಫ್ರಿಕದ ಪಶ್ಚಿಮ ಭಾಗದಲ್ಲಿ ಕಾಮನ್‍ವೆಲ್ತ್ ಗಣರಾಜ್ಯವೆನಿಸಿಕೊಂಡಿರುವ ಘಾನದ ರಾಜಧಾನಿ, ರೇವು. ಅತಿ ದೊಡ್ಡ ಪಟ್ಟಣ. ಜನಸಂಖ್ಯೆ ಸು. ನಾಲ್ಕು ಲಕ್ಷ. ಹಿಂದೆ ಇದು ಬ್ರಿಟಿಷರ ವಸಾಹತಾಗಿದ್ದ ಗೋಲ್ಡ್ ಕೋಸ್ಟ್‍ಗೆ ಸೇರಿತ್ತು. ಬ್ರಿಟಿಷರ, ಫ್ರೆಂಚರ ಮತ್ತು ಡಚ್ಚರ ಕೋಟೆಗಳು ಇವೆ. ಇತ್ತೀಚೆಗೆ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮ ಸ್ಥಿತಿಯಲ್ಲಿ ಬೆಳೆದಿರುವುದರಿಂದ ಸಾರಿಗೆ ಅನುಕೂಲತೆ ಈ ಪಟ್ಟಣಕ್ಕೆ ಚೆನ್ನಾಗಿ ದೊರೆತಿದೆ. ಸಾಬೂನು ಮತ್ತು ಕೀಟನಾಶಕ ರಾಸಾಯನಿಕ ವಸ್ತುಗಳ ತಯಾರಿಕೆ ಹೆಚ್ಚಾಗಿ ಬೆಳೆದಿದೆ. ಬಹುವಾಗಿ ಕೊಕೊ ರಫ್ತಾಗುತ್ತದೆ. ಒಂದು ವಿಶ್ವವಿದ್ಯಾನಿಲಯವಿದೆ.

(ಎಂ.ಎಸ್.)